/newsfirstlive-kannada/media/post_attachments/wp-content/uploads/2024/06/GT_COW.jpg)
ಗಾಂಧಿನಗರ: ಗಂಡನ ಜೊತೆ ಹೆಂಡತಿ ಬೈಕ್ನಲ್ಲಿ ಹೋಗುವಾಗ ಟಾರ್ಗೆಟ್ ಮಾಡಿದ ಹಸುವೊಂದು ಮಹಿಳೆಗೆ ಹಿಗ್ಗಾಮುಗ್ಗಾವಾಗಿ ಗುದ್ದಿ ತನ್ನ ಕಾಲಿನಿಂದ ತುಳಿದು ಗಾಸಿಗೊಳಿಸಿದೆ. ಗುಜರಾತ್ನ ಮೊಡಸಾ ನಗರದ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ.
ಮೊಡಸಾ ನಗರದ ಪೆಟ್ರೋಲ್ ಪಂಪ್ ಬಳಿ ಇರೋ ಬೈಪಾಸ್ ರೋಡ್ನಲ್ಲಿ ಗಂಡ ಹೆಂಡತಿ ಇಬ್ಬರು ಒಂದೇ ಬೈಕ್ನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಬೈಕ್ ಅನ್ನು ಟಾರ್ಗೆಟ್ ಮಾಡಿದ ಹಸು ಅಟ್ಟಿಸಿಕೊಂಡು ಬಂದಿದೆ. ಇದರಿಂದ ಗಾಬರಿಗೊಂಡ ಆಕೆಯ ಗಂಡ ಬೈಕ್ ಅನ್ನು ಸಡನ್ ಆಗಿ ನಿಲ್ಲಿಸಿದ್ದಾನೆ. ಆದರೂ ಬೈಕ್ಗೆ ಹಸು ಗುದ್ದಿದೆ. ಭಯಗೊಂಡ ಮಹಿಳೆ ಬೈಕ್ನಿಂದ ಇಳಿದು ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿರುತ್ತಾರೆ. ಆದರೆ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿದೆ.
ಇದನ್ನೂ ಓದಿ:A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್!
Stray cow knocks woman off bike, attacks her repeatedly in Modasahttps://t.co/mzDSJhhyL9pic.twitter.com/z3OA1JqEbu
— DeshGujarat (@DeshGujarat)
Stray cow knocks woman off bike, attacks her repeatedly in Modasahttps://t.co/mzDSJhhyL9pic.twitter.com/z3OA1JqEbu
— DeshGujarat (@DeshGujarat) June 18, 2024
">June 18, 2024
ಸ್ವಲ್ಪ ದೂರ ಓಡಿ ಸುಸ್ತಾಗಿ ನಡುರಸ್ತೆಗೆ ಬಿದ್ದ ಮಹಿಳೆಯನ್ನು ಹಸು ಹೇಗೆಂದರೆ ಹಾಗೇ ಗುದ್ದಿದೆ. ಈ ರೀತಿ ಹಸುಗಳು ಕೋಪದಲ್ಲಿ ಗುದ್ದುವುದು ಕಾಮಾನ್. ಆದರೆ ತನ್ನ ಕಾಲುಗಳಿಂದಲೂ ಮಹಿಳೆಯನ್ನು ತುಳಿಯುತ್ತಿರುತ್ತದೆ. ಆಗ ಸುತ್ತಾಲಿನ ಜನ ಹಾಗೂ ಆಕೆಯ ಗಂಡ ಬಿಡಿಸಲು ಮುಂದಾದ್ರೂ ಅದು ಬಿಟ್ಟಿಲ್ಲ. ಯಾರೋ ಒಬ್ಬ ವ್ಯಕ್ತಿ ದೊಡ್ಡ ಕೋಲು ತಂದು ಹಸುಗೆ ಎರಡೇಟು ಕೊಡ್ತಾರೆ. ಆಗ ಆಕೆಯನ್ನು ಬಿಟ್ಟು ಹೋಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ