/newsfirstlive-kannada/media/post_attachments/wp-content/uploads/2025/07/cow.jpg)
ಧಾರವಾಡ: ಪಟ್ಟಣದ ಗುಡ್ಡದಕೇರಿ ಓಣಿಯ ಸಯ್ಯದ್ ಭಾಷಾ ಹುಗ್ಗಿ ಎಂಬುವವರ ಹಸು, ಒಂದು ಹೆಣ್ಣು, ಎರಡು ಗಂಡು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ನಡೆದಿದೆ.
ಇದನ್ನೂ ಓದಿ:ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟೆ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!
ದೇಸಿ ತಳಿಯ ಹಸು ಇದಾಗಿದ್ದು, ಮೂರು ಕರುಗಳೂ ಆರೋಗ್ಯವಾಗಿವೆ. ಹಸು ಹಾಗೂ ಕರುಗಳಿಗೆ ಪೂಜೆ ಮಾಡಿದ ಸಯ್ಯದ್ ಭಾಷಾ, ಹಸು ಮೂರು ಕರು ಹಾಕಿದ ಹಿನ್ನೆಲೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ಭಾವಿಸಿದ್ದಾರೆ. ಜಾನುವಾರು ಅಭಿವೃದ್ಧಿ ಅಧಿಕಾರಿ ಹಸನಸಾಬ್ ಸವಣೂರ ಅವರು ಈ ದೇಸಿ ತಳಿಯ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/07/cow1.jpg)
ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕ ಪಕ್ಕದ ಓಣಿ, ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಹಸು ಒಂದೇ ಕರು ಹಾಕೋದು. ಆದರೆ ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us