ಅಪರೂಪ; ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಹಸು

author-image
Bheemappa
Updated On
ಅಪರೂಪ; ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಹಸು
Advertisment
  • ಮೂರಕ್ಕೆ 3 ಕರುಗಳು ಹೆಣ್ಣಾ, ಗಂಡಾ?, ಇಲ್ಲಿದೆ ಮಾಹಿತಿ
  • ಒಂದೇ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿದ ಹಸು
  • ಹಸು 3 ಕರುಗಳಿಗೆ ಜನ್ಮ ನೀಡಿದ್ದು ಯಾವ ಊರಿನಲ್ಲಿ..?

ಮಂಡ್ಯ: ಮನೆ ಮುಂದೆ ಹಸು, ಕರುಗಳು ಇದ್ದರೇ ಅದರ ಗಮ್ಮತ್ತೇ ಬೇರೆ. ಈಗೀಗ ಅಂತೂ ಹಸುಗಳಿಂದಲೇ ಕೆಲವರು ಬದುಕು ಸಾಗಿಸುತ್ತಿದ್ದಾರೆ. ಸಾಫ್ಟ್​ವೇರ್​ ಕಂಪನಿಗಳಲ್ಲಿದ್ದ ಕೆಲಸ ಬಿಟ್ಟು ಎಷ್ಟೋ ಜನ ಹಸುಗಳನ್ನ ತಂದು ಅವುಗಳಿಂದಲೇ ಸುಂದರ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ ಇಲ್ಲೊಂದು ಹಸು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಕರುಗಳನ್ನು ಹಾಕಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಕಂಠಿ ಶಿವಣ್ಣ ಎಂಬುವರಿಗೆ ಸೇರಿದ ಹಸುವೊಂದು ಒಮ್ಮೆಗೆ ಮೂರು ಕರುಗಳಿಗೆ ಜನ್ಮ ನೀಡಿದೆ. ಕರುಗಳು ಮುದ್ದು ಮುದ್ದಾಗಿದ್ದು ನೋಡಲು ಅಂದವಾಗಿವೆ. ಮೂರು ಕರುಗಳಿಗೆ ಹಸು ಜನ್ಮ ನೀಡಿದ ಹಿನ್ನೆಲೆಯಲ್ಲಿ ಮಾಲೀಕ ಕಂಠಿ ಶಿವಣ್ಣ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ದೀಪಿಕಾ ದಾಸ್ ತಾಯಿಗೆ ಬೆದರಿಕೆ.. ಆಘಾತಕ್ಕೆ ಒಳಗಾದ ನಟಿ, ಕೇಸ್ ದಾಖಲು

publive-image

ಹಸು ಹಾಕಿದ ಮೂರು ಕರುಗಳು ಹೆಣ್ಣು ಆಗಿವೆ. ತಾಯಿ ಸೇರಿದಂತೆ ಕರುಗಳೆಲ್ಲಾ ಆರೋಗ್ಯವಾಗಿವೆ. ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಎಲ್ಲರೂ ಬಂದು ಅವುಗಳನ್ನು ನೋಡುತ್ತಿದ್ದಾರೆ. ಹಾಗೇ ಫೋಟೋ ಕೂಡ ತೆಗೆದುಕೊಂಡು ಹೋಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment