/newsfirstlive-kannada/media/post_attachments/wp-content/uploads/2025/01/COW-AND-BUFFALO-MILK.jpg)
ಹಸು ಮತ್ತು ಎಮ್ಮೆ ಇವರೆಡು ಹಾಲಿನ ಉತ್ಪನ್ನಗಳಿಗಾಗಿಯೇ ಸಾಕುಷ ಪ್ರಾಣಿಗಳು. ಅದರಲ್ಲೂ ಇವು ನೀಡುವ ಹಾಲುಗಳಿಗೆ ಬಹಳ ಮಹತ್ವವಿದೆ. ಅದರಲ್ಲೂ ಆರೋಗ್ಯದ ವಿಷಯದಲ್ಲಿ ಈ ಉಭಯ ಪ್ರಾಣಿಗಳ ಹಾಲು ಬಹಳು ಪ್ರಾಮಖ್ಯತೆಯನ್ನು ಪಡೆದುಕೊಂಡಿವೆ. ಆದರೆ ನಮ್ಮ ನಿಮ್ಮ ಆರೋಗ್ಯಕ್ಕೆ ನಿಜಕ್ಕೂ ಯಾವುದರ ಹಾಲು ಉತ್ತಮ, ಹಸುವಿನದಾ, ಇಲ್ಲ ಎಮ್ಮೆಯದಾ ಎಂಬ ಅನುಮಾನಗಳು ಮೊದಲಿನಿಂದಲೂ ಬಂದಿವೆ. ಕೆಲವು ವಿಚಾರಗಳಲ್ಲಿ ಎಮ್ಮೆ ಹಾಲು ಶ್ರೇಷ್ಠ, ಇನ್ನು ಕೆಲವು ವಿಚಾರಗಳಲ್ಲಿ ಹಸುವಿನ ಹಾಲು ಶ್ರೇಷ್ಠ. ಆರೋಗ್ಯದ ವಿಚಾರಕ್ಕೆ ಬಂದಲ್ಲಿ ಈ ಎರಡು ಪ್ರಾಣಿಗಳಲ್ಲಿ ಯಾವ ಪ್ರಾಣಿಯ ಹಾಲು ಉತ್ತಮ ಅನ್ನೋದನ್ನ ನೋಡುವುದಾದ್ರೆ.
ಫ್ಯಾಟ್​ ವಿಚಾರದಲ್ಲಿ ನೋಡುವುದಾದ್ರೆ ಎಮ್ಮೆಯ ಹಾಲು ಹಸುವಿನ ಹಾಲಿಗಿಂತ ಡಬಲ್ ಫ್ಯಾಟ್ ಹೊಂದಿರುತ್ತದೆ. ಕ್ರಿಮೀಯರ್ ಹಾಗೂ ಮತ್ತು ಅತಿಹೆಚ್ಚು ಕ್ಯಾಲರೀಸ್ ವಿಚಾರವಾಗಿ ಆಯ್ಕೆ ಮಾಡುವುದಾದ್ರೆ ಮತ್ತು ತೂಕವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ನೋಡುವುದಾದ್ರೆ ಹಸುವಿನ ಹಾಲು ಉತ್ತಮ ಆಯ್ಕೆ
ಕರುಳಿನ ಆರೋಗ್ಯಕ್ಕೆ ಹಾಗೂ ತೂಕ ನಿರ್ವಹಣೆಗೆ ಹಸುವಿನ ಹಾಲು ಅತ್ಯುತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ಶಕ್ತಿಬಲವರ್ಧನೆಗೆ ಮತ್ತು ಅತಿಹೆಚ್ಚು ನ್ಯೂಟ್ರಿಷನ್​​ಗಳು ಬೇಕಾದಲ್ಲಿ ಎಮ್ಮೆಯ ಹಾಲನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಇನ್ನು ಪ್ರೊಟೀನ್ ಹಾಗೂ ನ್ಯೂಟ್ರಿಯಂಟ್ಸ್​ ವಿಚಾರದಲ್ಲಿ ನೋಡುವುದಾದ್ರೆ ಎಮ್ಮೆಯ ಹಾಲಿನಲ್ಲಿ ಪ್ರೊಟೋನ್ ಅಂಶ ಆಕಳು ಹಾಲಿಗಿಂತಲೂ ಹೆಚ್ಚು ಇರುತ್ತದೆ. ಅದರಲ್ಲಿರುವ ಕ್ಯಾಲ್ಸಿಯಂ ಹಾಗೂ ಪ್ರೊಸ್ಪರಸ್ ಅಂಶ ಸ್ನಾಯು ಹಾಗೂ ಎಲಬುಗಳು ಗಟ್ಟಿಯಾಗಲು ಅತ್ಯಂತ ಸಹಾಯಕರ. ಆದ್ರೆ ಎಮ್ಮೆಯ ಹಾಲಿನಲ್ಲಿರುವ ಪ್ರೊಟೀನ್ ಅಂಶ ಜೀರ್ಣಕ್ರಿಯೆಗೆ ಸಹಾಯಕವಾಗು ನಿಟ್ಟಿನಲ್ಲಿ ಹಸುವಿನ ಹಾಲಿಗಿಂತ ಕಳಪೆ ಎನ್ನಲಾಗುತ್ತದೆ.
ಸರಳವಾಗಿ ಜೀರ್ಣಗೊಳ್ಳುವ ವಿಚಾರದಲ್ಲಿ ಈ ಎರಡು ಪ್ರಾಣಿಗಳ ಹಾಲನ್ನು ಹೋಲಿಸಿ ನೋಡಿದಾಗ. ಹಸುವಿನ ಹಾಲಿನಲ್ಲಿ ಕಡಿಮೆ ಪ್ರೊಟೀನ್ ಮತ್ತು ಕೊಬ್ಬು ಇರುತ್ತದೆ. ಇದು ತುಂಬಾ ಸರಳವಾಗಿ ಜೀರ್ಣವಾಗುತ್ತದೆ. ಅದರಲ್ಲೂ ಮಕ್ಕಳಿಗೆ ನೀಡುವ ಹಾಲಿನ ವಿಷಯದಲ್ಲಿ ಹಸುವಿನ ಹಾಲು ಶ್ರೇಷ್ಠ ಉಳಿದಂತೆ ದೊಡ್ಡವರು ಎಮ್ಮೆಯ ಹಾಲನ್ನು ಸೇವಿಸಬಹುದು ಆದ್ರೆ ಸೂಕ್ಷ್ಮ ಹೊಟ್ಟೆಯ ಅಂದ್ರೆ ಜೀರ್ಣಶಕ್ತಿ ಸೂಕ್ಷ್ಮತೆ ಹೊಂದಿದವರು ಎಮ್ಮೆಯ ಹಾಲಿನಿಂದ ದೂರ ಉಳಿಯುವುದು ಒಳ್ಳೆಯದು.
ಎಮ್ಮೆಯ ಹಾಲು ಡೈರಿ ಉತ್ಪನ್ನಗಳಾದ ಪನ್ನೀರ್ ಮತ್ತು ತುಪ್ಪವನ್ನು ಮಾಡಲು ತುಂಬಾ ಉಪಯುಕ್ತವಾದ ಹಾಲು. ಆದ್ರೆ ಆಕಳ ಹಾಲು ಕುಡಿಯಲು ಶ್ರೇಷ್ಠ ಆದ್ರೆ ಹಸುವಿನ ಹಾಲಿನಿಂದ ತುಂಬಾ ಲೈಟಾದ ಡೈರಿ ಉತ್ಪನ್ನಗಳು ತಯಾರಾಗುತ್ತವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ