ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಬಿಲ್ಡಿಂಗ್​ನ 3ನೇ ಅಂತಸ್ತಿಗೆ ಏರಿದ ಹಸು.. ಆಮೇಲೆ ಏನಾಯಿತು?

author-image
Bheemappa
Updated On
ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಬಿಲ್ಡಿಂಗ್​ನ 3ನೇ ಅಂತಸ್ತಿಗೆ ಏರಿದ ಹಸು.. ಆಮೇಲೆ ಏನಾಯಿತು?
Advertisment
  • 3ನೇ ಮಹಡಿಗೆ ಏರಿದ ಮೇಲೆ ವಾಪಸ್ ಬರುವುದು ಗೊತ್ತಾಗಿಲ್ಲ
  • ರಸ್ತೆಯಲ್ಲಿ ಮೇಯಿತ್ತಿದ್ದಾಗ ಅಟ್ಟಾಡಿಸಿಕೊಂಡ ಬಂದ ನಾಯಿಗಳು
  • ಹಸುವನ್ನು ಬಿಲ್ಡಿಂಗ್​ ಮೇಲಿನಿಂದ ಕೆಳಗಿಳಿಸಿರುವುದೇ ರೋಚಕ

ಮುಂಬೈ: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಸೀಮೆ ಹಸುವೊಂದು ಕಟ್ಟಡದ 3ನೇ ಮಹಡಿಗೆ ಹತ್ತಿರುವಂತಹ ವಿಚಿತ್ರ ಘಟನೆಯೊಂದು ನಡೆದಿದೆ.

ಮಹಾರಾಷ್ಟ್ರದ ಪುಣೆಯ ಪರದೇಶಿ ವಾಡಾದ ರವಿವಾರ್ ಪೇಠ್ ಪ್ರದೇಶದಲ್ಲಿ ಎಂದಿನಂತೆ ಹಸುವೊಂದು ಸುತ್ತಾಡಿ ಮೇಯಿತ್ತಿತ್ತು. ಈ ವೇಳೆ ಬೀದಿ ನಾಯಿಗಳು ಒಟ್ಟಿಗೆ ಸೇರಿ ಹಸು ಹಿಂದೆ ಬಿದ್ದಿವೆ. ಈ ನಾಯಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹಸು ಓಡೋಡಿ ಹೋಗಿದೆ. ಆದರೆ ಹಸು ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರು ನಾಯಿಗಳು ಬಿಟ್ಟಿಲ್ಲ. ಹೀಗಾಗಿ ಯಾವ ಕಡೆಗೆ ಹೋಗಬೇಕು ಎನ್ನುವುದು ಗೊತ್ತಾಗದೇ ಹಸು ಕಟ್ಟಡದ ಮೇಲೆ ಏರಿದೆ.

ಇದನ್ನೂ ಓದಿ: ಧರ್ಮಸ್ಥಳದ ಯುವತಿ ಕೇಸ್​; ಪ್ರೊಫೆಸರ್ ಜತೆ ಪ್ರೇಮ ವೈಫಲ್ಯ.. ಕಟ್ಟಡದಿಂದ ಹಾರಿದ್ದ ಆಕಾಂಕ್ಷ

publive-image

ನಾಯಿಗಳಿಂದ ತಪ್ಪಿಸಿಕೊಳ್ಳಲು ಕಟ್ಟಡದ 3ನೇ ಮಹಡಿವರೆಗೆ ಹಸು ಏರಿದೆ. ಕಟ್ಟಡಕ್ಕೆ ಮರದ ಮೆಟ್ಟಿಲುಗಳು ಇರುವುದರಿಂದ ಹಸು ಬೇಗನೆ ಮೇಲೆ ಹೋಗಿದೆ. ಆದರೆ ಕೆಳಗೆ ಬರುವುದು ಗೊತ್ತಾಗಿಲ್ಲ. ಇನ್ನು ಕಟ್ಟಡದಲ್ಲಿದ್ದ ನಿವಾಸಿಗಳು ಇದರಿಂದ ಸಮಸ್ಯೆ ಸಿಲುಕಿದ್ದರು. ಕೊನೆಗೆ ಸ್ಥಳೀಯರು ಕ್ರೇನ್ ಯಂತ್ರವನ್ನು ತರಿಸಿ ಹಸುಗೆ ಹಗ್ಗಗಳಿಂದ ಬಿಗಿದು ಕಟ್ಟಿ, ಕೆಳಗೆ ಇಳಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಹಸು 3ನೇ ಮಹಡಿಗೆ ಹೋದ ಮೇಲೆ ಮೆಟ್ಟಿಲುಗಳಿಂದ ಇಳಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೆ ಹಸು ಮೆಟ್ಟಿಲುಗಳ ಮೇಲೆ ಹೆಜ್ಜೆ ಇಡಲು ಭಯ ಪಡುತ್ತಿತ್ತು. ಹೀಗಾಗಿ ಕೊನೆಗೆ ಕ್ರೇನ್ ಅನ್ನು ತರಿಸಿ ಹಸುವನ್ನು ಕೆಳಗೆ ಇಳಿಸಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment