newsfirstkannada.com

ಕೊರೊನಾ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂನಲ್ಲಿ ಲೀಕ್​! ನಿಮ್ಮದೂ ಇದೆಯಾ?

Share :

12-06-2023

    ಹ್ಯಾಕ್​ ಆಗಿದೆಯಾ ಕೋವಿನ್​ ಪೋರ್ಟಲ್​?

    ಭಾರತೀಯರ ಮಾಹಿತಿ ಲೀಕ್​ ಆಗಿದ್ದೇಗೆ?

    ಆಧಾರ್​, ಮೊಬೈಲ್​ ನಂಬರ್​ ಎಲ್ಲವೂ ಸಿಕ್ತು

2020ರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಭಾರತದಲ್ಲಿ ಸಾಕಷ್ಟು ಜನರ ಸಾವು ನೋವಿಗೆ ಕಾರಣವಾಯ್ತು. ಇದನ್ನು ತಡೆಗಟ್ಟಲು ಲಸಿಕೆಯನ್ನು ತರಲಾಯ್ತು. ದೇಶದ ಬಹುಸಂಖ್ಯಾ ಜನರು ಲಸಿಕೆ ಪಡೆದರು. ಆದರೀಗ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂ ಆ್ಯಪ್ ನಲ್ಲಿ ಸೋರಿಕೆಯಾಗಿದೆ.

ಕೋವಿನ್ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗಿದ್ದ ಲಸಿಕೆ ಫಲಾನುಭವಿಗಳ ಡಾಟಾ ಸೋರಿಕೆಯಾಗಿದೆ. ಲಸಿಕೆ ಪಡೆದವರ ಆಧಾರ್ ನಂಬರ್, ಮೊಬೈಲ್ ನಂಬರ್, ವಿಳಾಸ, ಜನ್ಮ ದಿನಾಂಕ, ವೋಟರ್ ಐಡಿ, ಪ್ಯಾನ್ ಕಾರ್ಡ್ ವಿವರ ಸೇರಿ ಎಲ್ಲ  ಮಾಹಿತಿ ಟೆಲಿಗ್ರಾಂನಲ್ಲಿ ಸಿಕ್ಕಿದೆ.

ಅಂದಹಾಗೆಯೇ ಭಾರತದಲ್ಲಿ 92 ಕೋಟಿಗೂ ಹೆಚ್ಚು ಜನರು ಕೊರೊನಾ ಲಸಿಕೆ ಪಡೆದಿದ್ದರು. ಆದರೀಗ ಟೆಲಿಗ್ರಾಂನಲ್ಲಿ ಈ ಮಾಹಿತಿ ಸೋರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪತ್ನಿ ರೀತೂ ಖಂಡೂರಿ , ಪಿ.ಚಿದಂಬರಂ, ಕೆಸಿ ವೇಣುಗೋಪಾಲ್ ಸೇರಿ ಹಲವು ಗಣ್ಯರ ಡಾಟಾ ಸೋರಿಕೆಯಾಗಿದೆ. ಕೋವಿನ್​​ ಪೋರ್ಟಲ್ ಹ್ಯಾಕ್ ಮಾಡಿ ಟೆಲಿಗ್ರಾಂ ನಲ್ಲಿ ಡಾಟಾ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಡಾಟಾ ಸೋರಿಕೆ ಬಗ್ಗೆ ಕೇಂದ್ರದ ಆರೋಗ್ಯ ಇಲಾಖೆಯ ಮೌನ ಮುರಿದಿದೆ. 2021 ರಲ್ಲೇ ಕೋವಿನ್ ಪೋರ್ಟಲ್ ಹ್ಯಾಕ್ ಮಾಡಲಾಗಿತ್ತು. ಆಗಲೇ 15 ಕೋಟಿ ಜನರ ಡಾಟಾ ಮಾರಾಟಕ್ಕೆ ಯತ್ನ ನಡೆದಿತ್ತು. ಆ ಸಮಯದಲ್ಲಿ ಕೇಂದ್ರ ಸರ್ಕಾರದ ತಜ್ಞರು ಡಾಟಾ ಸೋರಿಕೆ ಆಗಿಲ್ಲ ಎಂದು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊರೊನಾ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂನಲ್ಲಿ ಲೀಕ್​! ನಿಮ್ಮದೂ ಇದೆಯಾ?

https://newsfirstlive.com/wp-content/uploads/2023/06/Corona-Dose.jpg

Load More