ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..

author-image
Ganesh
Updated On
ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..
Advertisment
  • ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಭಾರೀ ಆಕ್ರೋಶ
  • 5 ಗಂಟೆ ಚಿಕಿತ್ಸೆ ನೀಡಿದರೂ ಬದುಕಲಿಲ್ಲ ಹಸು
  • ದುಷ್ಕರ್ಮಿಗಳ ಕೃತ್ಯದ ಬಗ್ಗೆ ಮಾಲೀಕ ಹೇಳಿದ್ದೇನು..?

ಬೆಂಗಳೂರು: ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ದೊಡ್ಡ ಆಲದ ಮರ ಸಮೀಪ ಸೂಲಿವಾರದಲ್ಲಿ ನಡೆದಿದೆ. ಆರೋಪಿಗಳ ದುಷ್ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಹಳೇ ದ್ವೇಷಕ್ಕೆ ನೀಚ ಕೆಲಸ ಆರೋಪ..

ಹಳೆಯ ವೈಷಮ್ಯಕ್ಕೆ ಹಸುವಿನ ಕೆಚ್ಚಲ ಕೊಯ್ದಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಸುಮಾರು 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೇ ಹಸು ಪ್ರಾಣಬಿಟ್ಟಿದೆ. ಸೂಲಿವಾರದ ಡೇರಿ ಅಧ್ಯಕ್ಷರಾದ ಮರಿಬಸವಯ್ಯ ಅನ್ನೋರ ಹಸುವಿನ ಕೆಚ್ಚಲು ಕೊಯ್ದಿದ್ದಾರೆ.

ಅವರು ಮಾಡಿರುವ ಆರೋಪದ ಪ್ರಕಾರ, ಪಕ್ಕದ ಜಮೀನಿಗೆ ಹಸು ಮೇಯಲು ಹೋದಾಗ ವಿಕೃತಿ ನಡೆಸಿದ್ದಾರೆ. ನನ್ನ ಮೇಲಿನ ಹಳೆಯ ದ್ವೇಷದಿಂದ ಕಿಡಿಗೇಡಿಗಳು ಕೃತ್ಯ ನಡೆಸಿರುವ ಶಂಕೆ ಇದೆ ಎಂದು ಮರಿ ಬಸವಯ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: ಜೀವನದಲ್ಲಿ ಒಮ್ಮೆಯಾದರೂ ಇಂಥ ಅದೃಷ್ಟ ಬರಬಹುದೇ.. ಇಲ್ಲಿ ಮೀನುಗಾರನ ಲಕ್ ಬದಲಾಗಿದೆ ನೋಡಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment