newsfirstkannada.com

ಅಪ್ಪ ಬಿಜೆಪಿ, ಮಗಳಿಗೆ ಕಾಂಗ್ರೆಸ್ ಪಕ್ಷ ಸೇರುವ ಒಲವು; ನ್ಯೂಸ್​ಫಸ್ಟ್​ಗೆ ನಿಶಾ ಯೋಗೇಶ್ವರ್ ಸ್ಪಷ್ಟನೆ

Share :

Published March 30, 2024 at 7:36pm

Update March 30, 2024 at 7:37pm

    ಕೊನೆಗೂ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಸಿ.ಪಿ ಯೋಗೇಶ್ವರ್ ಮಗಳು ನಿಶಾ

    ದೂರವಾಣಿ ಮೂಲಕ ನ್ಯೂಸ್​ಫಸ್ಟ್‌‌ಗೆ ಮಾಹಿತಿ ನೀಡಿದ ನಿಶಾ ಯೋಗೇಶ್ವರ್

    ಕಾಂಗ್ರೆಸ್ ಪಕ್ಷ ಸೇರಲು ಕುಟುಂಬದ ಒಪ್ಪಿಗೆಗಿಂತ ಇದು ನನ್ನ ವೈಯಕ್ತಿಕ ನಿಲುವು

ರಾಮನಗರ: ನಾನು ವೈಯಕ್ತಿಕವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಅವರು ದೂರವಾಣಿ ಮೂಲಕ ನ್ಯೂಸ್​ಫಸ್ಟ್‌‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇವೇಗೌಡ್ರೇ ಗರ್ವನೂ ಇಲ್ಲ, ಅಹಂಕಾರವೂ ಇಲ್ಲ; ನನ್ನದು ಕನ್ನಡಿಗರ ರಕ್ತದಲ್ಲಿರುವ ಸ್ವಾಭಿಮಾನ; ಸಿದ್ದರಾಮಯ್ಯ

‘ನಾನು ಕಾಂಗ್ರೆಸ್ ಪಕ್ಷ ಸೇರಲು ಕುಟುಂಬದ ಒಪ್ಪಿಗೆಗಿಂತ ಇದು ನನ್ನ ವೈಯಕ್ತಿಕ ನಿಲುವು. ಈ ಹಿಂದೆ ಕಾಂಗ್ರೆಸ್ ಸೇರಲು ಹಲವು ಬಾರಿ ಹಿರಿಯ ಕೈ ನಾಯಕರನ್ನ ಭೇಟಿಯಾಗಿದ್ದೇನೆ. ಲೋಕಸಭಾ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೇರ್ಪಡೆಗೊಂಡರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮತಯಾಚನೆ ಮಾಡುತ್ತೇನೆ. ಲೋಕಸಭೆ ನಂತರ ಸೇರ್ಪಡೆಯಾಗುವುದಾದರೆ ಸುರೇಶ್ ಅವರ ಪರ ಮತಯಾಚನೆ ಮಾಡುವುದಿಲ್ಲ. ನಾನು ಚಿಕ್ಕವಯಸ್ಸಿನಿಂದಲೂ ಚನ್ನಪಟ್ಟಣದಲ್ಲಿ ಬೆಳೆದ ಮಗಳು. ಚನ್ನಪಟ್ಟಣದ ಜನರು ನನ್ನ ಕುಟುಂಬ ಇದ್ದಂತೆ. ನಾನು ಕಾಂಗ್ರೆಸ್ ಸೇರುವುದು ನನ್ನ ನಿರ್ಧಾರವೇ ಹೊರೆತು ಕುಟುಂಬದ ನಿರ್ಧಾರವಲ್ಲ’ ಎಂದು ಹೇಳಿದ್ದಾರೆ.

ಒಂದೆಡೆ ಲೋಕಸಭಾ ಚುನಾವಣೆಯ ಕಾವು. ಮತ್ತೊಂದೆಡೆ ಮಗಳ ಕಾಂಗ್ರೆಸ್​ ಒಲವು. ಸದ್ಯ ರಾಜ್ಯ ರಾಜಕಾರಣದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಕಮಲ ಅರಳಿಸುವ ಪ್ಲಾನ್​ ಹೊತ್ತಿರುವಾಗ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್​​ ಬಗ್ಗೆ ಮಾತನಾಡಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪ ಬಿಜೆಪಿ, ಮಗಳಿಗೆ ಕಾಂಗ್ರೆಸ್ ಪಕ್ಷ ಸೇರುವ ಒಲವು; ನ್ಯೂಸ್​ಫಸ್ಟ್​ಗೆ ನಿಶಾ ಯೋಗೇಶ್ವರ್ ಸ್ಪಷ್ಟನೆ

https://newsfirstlive.com/wp-content/uploads/2024/03/nisha-yogesh.jpg

Load More