/newsfirstlive-kannada/media/post_attachments/wp-content/uploads/2024/10/CP_YOGISHWAR_NIKHIL.jpg)
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶವನ್ನ ಇಡೀ ರಾಜ್ಯದ ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ನವೆಂಬರ್ 23ರಂದು ಆ ರೋಚಕ ರಿಸಲ್ಟ್ ಹೊರ ಬೀಳಲಿದೆ. ಜನರ ತೀರ್ಪು ಬಹಿರಂಗಕ್ಕೂ ಮೊದಲೇ ರಾಜ್ಯ ರಾಜಕೀಯದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮುಂದೆ ತಾವೇ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಸಿಎಂ, ಡಿಸಿಎಂ ಇಬ್ಬರನ್ನೂ ಭೇಟಿ ಮಾಡಿರುವ ಸಿಪಿವೈ ರಹಸ್ಯ ವರದಿಯನ್ನು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಪ್ರಕಾರ ಚನ್ನಪಟ್ಟಣದಲ್ಲಿ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯ ವರದಿಯಲ್ಲಿ ಏನಿದೆ?
ನಿನ್ನೆ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರ ಜೊತೆ ತೆರಳಿ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ವರದಿ ನೀಡಿದ್ದಾರೆ. ಚನ್ನಪಟ್ಟಣದ ಮತಗಟ್ಟೆವಾರು ಅಂಕಿ, ಅಂಶಗಳ ಸಮೇತ ಸಿ.ಪಿ ಯೋಗೇಶ್ವರ್ ಅವರು ಗೆಲುವಿನ ರಿಪೋರ್ಟ್ ನೀಡಿದ್ದಾರೆ.
ಸಿಎಂ, ಡಿಸಿಎಂ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದು, ಚುನಾವಣೆಯ ಹಿಂದಿನ ದಿನ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವ್ಯಾವ ಹೋಬಳಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ಆಗಿದೆ. ಅಂತಿಮವಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ವಿರುದ್ಧ ಕನಿಷ್ಠ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವರದಿ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಅಪ್ಪ vs ಮಗ ! ಸಿಪಿ ಯೋಗೇಶ್ವರ್ ವಿರುದ್ಧ ಕೇಸ್ ದಾಖಲಿಸಿದ ಪುತ್ರ.. ಅಸಲಿಗೆ ಆಗಿದ್ದೇನು?
ನಿರಾಸೆಯ ಮಾತನಾಡಿದ್ದ ಯೋಗೇಶ್ವರ್!
ಚನ್ನಪಟ್ಟಣ ಮತದಾನ ಮುಗಿದ ಬಳಿಕ ಇದೇ ಸಿ.ಪಿ ಯೋಗೇಶ್ವರ್ ಅವರು ಸುದ್ದಿಗೋಷ್ಟಿ ನಡೆಸಿ ನಿರಾಸಾದಾಯಕವಾಗಿ ಮಾತನಾಡಿದ್ದರು. ರಾಜ್ಯ ರಾಜಕೀಯದ ದೈತ್ಯ ನಾಯಕ ಹೆಚ್.ಡಿ ದೇವೇಗೌಡರು ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾರೆ. ಎರಡೂ ಕಡೆಯೂ ಸಮಬಲದ ಹೋರಾಟ ಇದೆ. ಆದರೆ ಕೆಲವು ಸ್ಟೇಟ್ ಮೆಂಟ್ ಹಾಗೂ ಮಾತುಗಳು ಜನರ ಭಾವನೆಗೆ ಘಾಸಿ ಮಾಡಿದೆ. ಸಚಿವ ಜಮೀರ್ ಸ್ಟೇಟ್ ಮೆಂಟ್ ಒಂದಷ್ಟು ಲಾಭ ಆದ್ರೆ ಒಂದಷ್ಟು ನಷ್ಟ ಆಗಿದೆ. ಮುಸ್ಲಿಂ ಮತಗಳ ಕ್ರೂಢೀಕರಣ ಒಂದು ಕಡೆ ಆದ್ರೆ ಇನ್ನೊಂದು ಸಮುದಾಯಕ್ಕೆ ಹೊಡೆತ ಬಿದ್ದಿದೆ. ಅದರಿಂದ ಸ್ವಲ್ಪ ಆಘಾತ ಆಗಿದೆ. ನಿರಾಶಾದಾಯಕ ವಿಷಯ ಏನಿಲ್ಲ, ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಮತ ಎಣಿಕೆಯ ದಿನ ಹತ್ತಿರವಾಗುತ್ತಿದ್ದಂತೆ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವರದಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ