/newsfirstlive-kannada/media/post_attachments/wp-content/uploads/2024/10/CP-YOGESHWAR-NOMINATION.jpg)
ಇಂದು ಕಾಂಗ್ರೆಸ್​ನ ಚನ್ನಪಟ್ಟಣದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರುವ ಮೂಲಕ ಚನ್ನಪಟ್ಟಣದ ಟಿಕೆಟ್​ ದಕ್ಕಿಸಿಕೊಂಡ ಸಿ.ಪಿ.ಯೋಗೇಶ್ವರ್​ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ. ಇಂದು ನಾಮಪತ್ರ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್​ ತಮ್ಮ ಆಸ್ತಿ ವಿವರವನ್ನು ಅಫೀಡವಿಟ್​​ನಲ್ಲಿ ಉಲ್ಲೇಖ ಮಾಡಿದ್ದಾರೆ.
ಅಫಿಡವಿಟ್​ನಲ್ಲಿ ಉಲ್ಲೇಖಿಸಿರುವ ಪ್ರಕಾರ ಸಿಪಿವೈ ಬಳಿ ಒಟ್ಟು 70 ಕೋಟಿ ಆಸ್ತಿ ಇದೆ. 7 ಕೋಟಿ, 25 ಲಕ್ಷ 20 ಸಾವಿರದ 470 ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವ ಯೋಗೇಶ್ವರ್, ಪತ್ನಿ ಹೆಸರಲ್ಲಿ 25 ಕೋಟಿ 35 ಲಕ್ಷ 37 ಸಾವಿರದ 740 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 7 ಕೋಟಿ 10 ಲಕ್ಷ 80 ಸಾವಿರದ 556 ರೂಪಾಯಿಯಷ್ಟು ಚರಾಸ್ತಿ ಇದೆಯೆಂದು ಅಫಿಡವಿಟ್​ನಲ್ಲಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೊನೆಗೂ ಶಿಗ್ಗಾವಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್; ಮೂರು ಕ್ಷೇತ್ರಕ್ಕೂ ಅಭ್ಯರ್ಥಿಗಳು ಫೈನಲ್
ಯೋಗೇಶ್ವರ್ ಹೆಸರಲ್ಲಿ 22,02,47,157 ರೂಪಾಯಿ ಮೌಲ್ಯದ ಹಾಗೂ ಪತ್ನಿ ಶೀಲಾ ಹೆಸರಲ್ಲಿ 2,14,52,740 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಇರುವ ಬಗ್ಗೆ ಅಫಿಡವಿಟ್​ನಲ್ಲಿ ಉಲ್ಲೇಖವಿದೆ. ಪತ್ನಿ ಶೀಲಾ ಹೆಸರಲ್ಲಿ 6.65 ಕೋಟಿ ಮೌಲ್ಯದ ಕೃಷಿಯೇತರ ಭೂಮಿಯಿದ್ದು ಸಿ.ಪಿ.ಯೋಗೇಶ್ವರ ಹೆಸರಲ್ಲಿ 2,37,62,000 ಕೋಟಿ ಮೌಲ್ಯದ ಮತ್ತು ಪತ್ನಿ ಶೀಲಾ ಹೆಸರಲ್ಲಿ 15.45 ಕೋಟಿ ಮೌಲ್ಯದ ಮನೆಗಳಿವೆ.
ಯೋಗೇಶ್ವರ್ ಹೆಸರಲ್ಲಿ 25 ಕೋಟಿ 86 ಲಕ್ಷ 31 ಸಾವಿರದ 284 ಕೋಟಿ ರೂಪಾಯಿ ಸಾಲ ಇದ್ದು ಇನ್ನು ಪತ್ನಿ ಶೀಲಾ ಹೆಸರಿನಲ್ಲಿ 3,41,42,184 ರೂ ಸಾಲವಿದೆ.
ಇದನ್ನೂ ಓದಿ:ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯೇ ಯಾಕೆ? ಬಿ.ಎಸ್ ಯಡಿಯೂರಪ್ಪ ಹೇಳಿದ್ದು ನಿಜವಾಗುತ್ತಾ?
250 ಗ್ರಾಂ ಚಿನ್ನಾಭರಣವನ್ನು ಯೋಗೇಶ್ವರ್ ಹೊಂದಿದ್ದಾರೆ. ಶೀಲಾ ಬಳಿ 1 ಕೆಜಿ 500 ಗ್ರಾಂ ಚಿನ್ನಾಭರಣ ಹಾಗೂ 20 ಕೆಜಿ ಬೆಳ್ಳಿ ಇದೆ. ಸಾರ್ವಜನಿಕರಿಂದ 1 ಕೆಜಿ ಚಿನ್ನವನ್ನು ಶೀಲಾ ಅವರು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ ಎಂದು ಅಫಿಡವಿಟ್​ನಲ್ಲಿ ಉಲ್ಲೇಖವಾಗಿದೆ. ಯೋಗೇಶ್ವರ್ ಹೆಸರಲ್ಲಿ ಒಟ್ಟು 10 ಕ್ರಿಮಿನಲ್ ಕೇಸ್​ಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಜೊತೆಗೆ ಯೋಗೇಶ್ವರ್ ಹೆಸರಲ್ಲಿ ಒಂದು ಮರ್ಸಿಡಿಸ್​ ಬೆಂಜ್ ಹಾಗೂ ಒಂದು ಬಿಎಂಡಬ್ಲ್ಯೂ ಕಾರ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us