/newsfirstlive-kannada/media/post_attachments/wp-content/uploads/2024/11/NIKHIL_CPY-1.jpg)
ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ರನ್ನ ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಗೆಲುವು ಸಾಧಿಸಿದ್ದಾರೆ. 25,515 ಮತಗಳ ಅಂತರದಿಂದ ಸಿ.ಪಿ ಯೋಗೇಶ್ವರ್ ಅವರು ವಿಜಯ ದಾಖಲಿಸಿದ್ದಾರೆ.
ಚನ್ನಪಟ್ಟಣ ಮತ ಎಣಿಕೆಯಲ್ಲಿ ಮೊದಲು ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಮತ ಎಣಿಕೆ ಮುಂದುವರೆದಂತೆ ಸಿ.ಪಿ ಯೋಗೇಶ್ವರ್ ಅವರು ನಿಖಿಲ್ ಅವರನ್ನು ಹಿಂದಿಕ್ಕಿ ಮುನ್ನಡೆಗೆ ಬಂದರು. ಇವರು ಮುನ್ನಡೆಗೆ ಬಂದ ಬಳಿಕೆ ಹಿಂದಕ್ಕೆ ಹೋಗಲೇ ಇಲ್ಲ. ಇಡೀ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದರಿಂದ ಯಾರು ಗೆಲ್ಲುತ್ತಾರೆಂದು ಇದ್ದ ಜನರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇದನ್ನೂ ಓದಿ:ಸಂಡೂರಿನಲ್ಲಿ ಕಾಂಗ್ರೆಸ್ಗೆ ಗೆಲುವು ಖಚಿತ.. ಸೋಲು ಒಪ್ಪಿಕೊಂಡ ಬಿಜೆಪಿ ಅಭ್ಯರ್ಥಿ
ಸದ್ಯ ಎಲ್ಲ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಗೆಲುವು ಪಡೆದಿದ್ದಾರೆ. 15ನೇ ಸುತ್ತಿನ ವೇಳೆ ಯೋಗೇಶ್ವರ್ ಅವರು 89,714 ಮತಗಳನ್ನು ಪಡೆದಿದ್ರೆ, ಇತ್ತ ನಿಖಿಲ್ ಅವರು ಕೇವಲ 64,688 ವೋಟ್ ಪಡೆದಿದ್ದರು. ಈ ಮೂಲಕ ಯೋಗೇಶ್ವರ್ ಅವರು 25,026 ಮತಗಳು ಮುನ್ನಡೆಯಲ್ಲಿದ್ದವರು ಕೊನೆವರೆಗೂ ಸತತ ಮುನ್ನಡೆಯಲ್ಲಿದ್ದರು. ನಿಖಿಲ್ ಮೊದಲು ಮುನ್ನಡೆ ಕಾಯ್ದುಕೊಂಡವರು ನಂತರ ಹಿನ್ನಡೆಗೆ ಬಂದರು. ನಂತರದ ಎಣಿಕೆಯಲ್ಲಿ ಯಾವ ಹಂತದಲ್ಲೂ ನಿಖಿಲ್ ಮುನ್ನಡೆಯನ್ನು ನೋಡಲೇ ಇಲ್ಲ. ಹೀಗಾಗಿ ಅವರು ಉಪಚುನಾವಣೆಯಲ್ಲಿ ಭಾರೀ ಅಂತರದಿಂದ ಕಾಂಗ್ರೆಸ್ ವಿರುದ್ಧ ಸೋಲನ್ನು ಒಪ್ಪಿಕೊಂಡರು.
ಸಿ.ಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡದ ಕಾರಣ ಅವರು ಕಾಂಗ್ರೆಸ್ ಅನ್ನು ಸೇರ್ಪಡೆಗೊಂಡರು. ಇದರಿಂದ ಜೆಡಿಎಸ್ ಕಡೆಯಿಂದ ನಿಖಿಲ್ರನ್ನ ಕಣಕ್ಕೆ ಇಳಿಸಲಾಗಿತ್ತು. ಕ್ಷೇತ್ರದಲ್ಲಿ ಇಬ್ಬರ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿತ್ತು. ಆದರೆ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಿಖಿಲ್ ತಲೆ ಬಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ