Advertisment

ಕೂದಲೆಳೆ ಅಂತರ.. ಚನ್ನಪಟ್ಟಣ ಮತದಾನದ ಬಳಿಕ ಸಿ.ಪಿ ಯೋಗೇಶ್ವರ್ ಸ್ಫೋಟಕ ಸುಳಿವು; ಹೇಳಿದ್ದೇನು?

author-image
admin
Updated On
ಚನ್ನಪಟ್ಟಣ ಟಿಕೆಟ್ ಯಾರಿಗೆ..? ಹೆಚ್​.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
Advertisment
  • ಸಚಿವ ಜಮೀರ್ ಸ್ಟೇಟ್ ಮೆಂಟ್‌ನಿಂದ ಸಮುದಾಯಕ್ಕೆ ಹೊಡೆತ
  • H.D ದೇವೇಗೌಡರು, ಕುಮಾರಸ್ವಾಮಿಗೆ ಬೈದರೆ ಸಮುದಾಯ ಸಹಿಸಲ್ಲ
  • ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲಿ ವರ್ಕ್ ಆಗಬಹುದು ಎಂದ ಯೋಗೇಶ್ವರ್

ರಾಮನಗರ: ಜಿದ್ದಾಜಿದ್ದಿನ ಚನ್ನಪಟ್ಟಣ ಉಪಚುನಾವಣೆಯ ಮತದಾನ ಮುಗಿದಿದೆ. ಈಗ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋದಷ್ಟೇ ಬಾಕಿ ಉಳಿದಿದೆ. ಮತದಾರರು ಹಣೆ ಬರಹ ನಿರ್ಧಾರ ಮಾಡಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

Advertisment

ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿ ಹಲವು ಸಚಿವರು, ಸಾಕಷ್ಟು ಕಾಂಗ್ರೆಸ್‌ ಶಾಸಕರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಮಾಜಿ ಸಂಸದ ಡಿ.ಕೆ ಸುರೇಶ್ ವಿಶೇಷವಾಗಿ ಕೆಲಸ ಮಾಡಿದ್ದಾರೆ. ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆ ಇದಾಗಿದ್ದು, ಇಷ್ಟೊಂದು ತೀವ್ರತೆ ಪಡೆಯುತ್ತೆ ಅಂದುಕೊಂಡಿರಲಿಲ್ಲ ಎಂದು ಯೋಗೇಶ್ವರ್ ತಿಳಿಸಿದ್ದಾರೆ.

publive-image

ಲಾಭ-ನಷ್ಟದ ಲೆಕ್ಕಾಚಾರ!
ರಾಜ್ಯ ರಾಜಕೀಯದ ದೈತ್ಯ ನಾಯಕ ಹೆಚ್‌.ಡಿ ದೇವೇಗೌಡರು ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾರೆ. ಎರಡೂ ಕಡೆಯೂ ಸಮಬಲದ ಹೋರಾಟ ಇದೆ. ಆದರೆ ಕೆಲವು ಸ್ಟೇಟ್‌ ಮೆಂಟ್ ಹಾಗೂ ಮಾತುಗಳು ಜನರ ಭಾವನೆಗೆ ಘಾಸಿ ಮಾಡಿದೆ.

ಸಚಿವ ಜಮೀರ್ ಸ್ಟೇಟ್ ಮೆಂಟ್ ಒಂದಷ್ಟು ಲಾಭ ಆದ್ರೆ ಒಂದಷ್ಟು ನಷ್ಟ ಆಗಿದೆ. ಮುಸ್ಲಿಂ ಮತಗಳ ಕ್ರೂಢೀಕರಣ ಒಂದು ಕಡೆ ಆದ್ರೆ ಇನ್ನೊಂದು ಸಮುದಾಯಕ್ಕೆ ಹೊಡೆತ ಬಿದ್ದಿದೆ. ಅದರಿಂದ ಸ್ವಲ್ಪ ಆಘಾತ ಆಗಿದೆ. ನಿರಾಶಾದಾಯಕ ವಿಷಯ ಏನಿಲ್ಲ, ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲ್ಲುತ್ತೇವೆ.

Advertisment

publive-image

ಈವರೆಗೂ ನನ್ನ ಎಲ್ಲಾ ಚುನಾವಣೆಯಲ್ಲೂ 80ರಿಂದ 90 ಸಾವಿರ ಮತಗಳ ಪಡೆಯುತ್ತಿದ್ದೆ. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ. ಬಿಜೆಪಿ-ಜೆಡಿಎಸ್ ಎರಡು ಮೈತ್ರಿ ಇಲ್ಲಿ ವರ್ಕ್ ಆಗಬಹುದು. ಹಾಗಾಂತ ಹತಾಶೆ ಇಲ್ಲ, ಸಮಬಲದ ಹೋರಾಟ ಅಷ್ಟೇ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನ ಕುಮಾರಸ್ವಾಮಿ ನಿರ್ಮಾಣ ಮಾಡಿದ್ರು. ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರುವ ಪರಿಸ್ಥಿತಿ ಬಂತು.

ಇದನ್ನೂ ಓದಿ: ಯೋಗೇಶ್ವರ್ ವಿರುದ್ಧ ಟಿಕೆಟ್​ ಪ್ಲಸ್​ ₹30 ಕೋಟಿ ಕೇಳಿದ ಆರೋಪ- ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ..! 

ನಾನು ಹಿಂದೆ ಗೆದ್ದಿದ್ದು ಬಿಟ್ರೆ ಇಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಇರಲಿಲ್ಲ. ಈಗ ಕಡಿಮೆ ಸಮಯದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಒಂಥರಾ ಐಪಿಎಲ್ ಮ್ಯಾಚ್ ರೀತಿ ಆಗಿದೆ. ಒಂದೊಂದು ಸೀಸನ್‌ನಲ್ಲಿ ಒಂದೊಂದು ಟೀಮ್‌ನಲ್ಲಿ ಆಟ ಆಡುವಂತಾಗಿದೆ.

Advertisment

publive-image

ನಾನು ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ದೈತ್ಯ ಶಕ್ತಿ, ಒಕ್ಕಲಿಗರ ಬೆಂಬಲ ಇರೋ ವಂಶದ ಕುಡಿ ನನ್ನ ವಿರುದ್ಧ ಸ್ಪರ್ಧೆ ಮಾಡಿದೆ. ಕಳೆದ ಚುನಾವಣೆ ಕಾಂಗ್ರೆಸ್ ಪಡೆದ ಮತ 15 ಸಾವಿರ. ಈಗ ನಾವು ಒಂದು ಲಕ್ಷಕ್ಕಿಂತ ಅಧಿಕ ಮತ ಪಡೆದರೆ ಗೆಲುವು ಸಿಗುತ್ತೆ.

ದೇವೇಗೌಡರು ಒಂದು ದೈತ್ಯ ಶಕ್ತಿ. ದೇವೇಗೌಡರಿಗೆ, ಕುಮಾರಸ್ವಾಮಿಗೆ ಬೈದರೆ ಸಹಿಸದ ಸಮುದಾಯ ಇದೆ. ಜನ ದೇವೇಗೌಡರು, ಕುಮಾರಸ್ವಾಮಿ ಅವರನ್ನ ಮಾತ್ರ ಸಮುದಾಯದ ನಾಯಕ ಅಂತ ಗುರುತಿಸುತ್ತಾರೆ. ನಮ್ಮನ್ನ ಸಮುದಾಯದ ಲೀಡರ್ ಅಂತ ಯಾವಾಗ ಸ್ವೀಕಾರ ಮಾಡ್ತಾರೋ ಗೊತ್ತಿಲ್ಲ ಎಂದ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment