/newsfirstlive-kannada/media/post_attachments/wp-content/uploads/2025/01/HEELS.jpg)
ಚಳಿಗಾಲ ಉತ್ತುಂಗದಲ್ಲಿದೆ. ದೇಶದ ಹಲವು ಭಾಗಗಳಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆಯಿದೆ. ಹಲವೆಡೆ ತಾಪಮಾನ 4-5 ಡಿಗ್ರಿ ತಲುಪಿದೆ. ಚಳಿಗಾಲದಲ್ಲಿ ಹಿಮ್ಮಡಿಗಳು ಒಡೆಯೋದು (cracked heels) ಸಾಮಾನ್ಯ ಸಮಸ್ಯೆ. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಈ ಕಾರಣದಿಂದ ಚರ್ಮವು ಹೆಚ್ಚು ಒಣಗುತ್ತದೆ. ಚರ್ಮ ಒಣಗಿದಾಗ ಬಿರುಕು ಬಿಡುತ್ತದೆ. ಅದನ್ನೇ ಕ್ರ್ಯಾಕ್ಡ್ ಹೀಲ್ಸ್ ಎಂದು ಕರೆಯಲಾಗುತ್ತದೆ.
ಬಿರುಕು ಹಿಮ್ಮಡಿಗೆ ಕಾರಣ
ಹಿಮ್ಮಡಿಗಳು ಬಿರುಕು ಬಿಡಲು ಅನೇಕ ಕಾರಣಗಳಿವೆ. ಚಳಿಗಾಲದಲ್ಲಿ ಜನ ಕಡಿಮೆ ನೀರು ಕುಡಿಯುತ್ತಾರೆ. ಇದರಿಂದ ದೇಹದಲ್ಲಿ ತೇವಾಂಶ ಕಡಿಮೆ ಆಗುತ್ತದೆ. ಸ್ಕಿನ್ ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಅನೇಕರು ತಣ್ಣೀರಿನಲ್ಲಿ ಸ್ನಾನ ಮಾಡ್ತಾರೆ. ಇದು ಚರ್ಮವನ್ನು ಒಣಗಿಸುತ್ತದೆ. ಕೆಲವರಿಗೆ ಶೂ ಧರಿಸುವುದರಿಂದ ಹಿಮ್ಮಡಿಗಳ ಚರ್ಮದ ಮೇಲೆ ಒತ್ತಡ ಬೀಳುತ್ತದೆ. ಬಿರುಕು ಬಿಡುವ ಸಾಧ್ಯತೆ ಹೆಚ್ಚಿಸುತ್ತದೆ. ನೀವು ನಿಯಮಿತವಾಗಿ ಮಾಯಿಶ್ಚರೈಸರ್ ಬಳಸದಿದ್ದರೆ ಬಿರುಕು ಬಿಡಲು ದಾರಿ ಮಾಡಿಕೊಡುತ್ತದೆ. ಚಳಿಗಾಲದಲ್ಲಿ ಪಾದದ ಚರ್ಮಕ್ಕೆ ವಿಶೇಷ ಕಾಳಜಿ ಬೇಕು.
ಇದನ್ನೂ ಓದಿ:Breaking news: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಎರಡು ಅಂತಸ್ತಿನ ಕಟ್ಟಡದಲ್ಲಿ ಬ್ಲಾಸ್ಟ್
ಮಾಯಿಶ್ಚರೈಸಿಂಗ್
ಪಾದಗಳನ್ನು ತೊಳೆದ ನಂತರ ಮಾಯಿಶ್ಚರೈಸರ್ ಬಳಸಿ. ಅದು ಗ್ಲಿಸರಿನ್ ಹೊಂದಿರುತ್ತದೆ. ಮಾಯಿಶ್ಚರೈಸರ್ ಚರ್ಮವನ್ನು ತೇವಗೊಳಿಸುತ್ತದೆ. ಒಡೆಯುವಿಕೆಯನ್ನು ತಡೆಯುತ್ತದೆ. ಮಲಗುವ ಮುನ್ನ ಪಾದಗಳನ್ನು ಎಣ್ಣೆಯಿಂದ ಮಸಾಜ್ ಮಾಡಿ. ನಂತರ ಸಾಕ್ಸ್‌ಗಳನ್ನು ಹಾಕಿ. ಹೀಗೆ ಮಾಡಿದರೆ ನಿಮ್ಮ ಚರ್ಮವು ತೇವವಾಗಿರುತ್ತದೆ.
ಆರಾಮದಾಯಕ ಶೂ ಧರಿಸಿ
ಚಳಿಗಾಲದಲ್ಲಿ ಒತ್ತಡವನ್ನು ತಪ್ಪಿಸಲು ಆರಾಮದಾಯಕವಾದ ಶೂಗಳನ್ನು ಧರಿಸಿ. ಬಿಗಿಯಾದ ಶೂಗಳು ಒಳ್ಳೆಯದಲ್ಲ. ಶೂಗಳ ಹಿಮ್ಮಡಿಗಳು ಸವೆಯದಂತೆ ನೋಡಿಕೊಳ್ಳಿ.
ಇದನ್ನೂ ಓದಿ:ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕಿಗೆ ಮೂರು ಕಾರಣಗಳು..!
ಪಾದಗಳ ಬಗ್ಗೆ ಇರಲಿ ಜಾಗೃತೆ:
ಪ್ರತಿದಿನ ಪಾದಗಳನ್ನು ತೊಳೆಯಿರಿ. ಬಿಸಿ ನೀರಿನೊಂದಿಗೆ ಅಲ್ಲ. ಬೆಚ್ಚಗಿನ ನೀರಿನಿಂದ ತೊಳೆಯುವುದು ಉತ್ತಮ. ಪಾದಗಳು ಬೆವರುವುದರಿಂದ ಹೊರಗಿನಿಂದ ಬಂದಾಗ ಅಥವಾ ಬೂಟುಗಳನ್ನು ಧರಿಸಿದಾಗ ಪಾದಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ತೊಳೆದ ನಂತರ ಪಾದಗಳನ್ನು ಚೆನ್ನಾಗಿ ಒರೆಸಿ.
ಸ್ಕ್ರಬ್: ಪಾದಗಳ ಸತ್ತ ಚರ್ಮವನ್ನು ತೆಗೆದುಹಾಕಲು ವಾರಕ್ಕೊಮ್ಮೆ ಸ್ಕ್ರಬ್ ಮಾಡಿ.
ಆರೋಗ್ಯಕರ ಆಹಾರ ಸೇವಿಸಿ
ವಿಟಮಿನ್ ಇ, ಒಮೆಗಾ -3 ಕೊಬ್ಬಿನ ಆಮ್ಲಗಳು ಮತ್ತು ನೀರು ಸಮೃದ್ಧವಾಗಿರುವ ಆಹಾರ ಸೇವಿಸಿ. ಇದರಿಂದ ಚರ್ಮವು ಒಳಗಿನಿಂದ ತೇವಾಂಶ ಪಡೆಯಬಹುದು. ಹಸಿ ತರಕಾರಿಗಳು, ಬೇಳೆಕಾಳುಗಳು, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ಒಳ್ಳೆಯದು.
ಇದನ್ನೂ ಓದಿ:ಗಿಲ್ ಅಲ್ಲ, ಟೀಮ್ ಇಂಡಿಯಾ ಕ್ಯಾಪ್ಟನ್ ರೇಸ್ನಲ್ಲಿ ಸ್ಟಾರ್ ಪ್ಲೇಯರ್ ಹೆಸ್ರು; ಕೊಹ್ಲಿ ಆಪ್ತನಿಗೆ ಜಾಕ್ಪಾಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ