Advertisment

ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ನಟಿ ಸುಕೃತಾಳ ಆಸೆ ಈಡೇರಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್; ಏನದು?

author-image
Veena Gangani
Updated On
ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ನಟಿ ಸುಕೃತಾಳ ಆಸೆ ಈಡೇರಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್; ಏನದು?
Advertisment
  • ಪ್ರವೀಣ್ ಕೊಟ್ಟ ಸರ್​ಪ್ರೈಸ್​ ಗಿಫ್ಟ್​ ನೋಡಿ ಕಣ್ಣೀರು ಹಾಕಿದ ಸುಕೃತಾ
  • 10 ಮಂದಿ ಬ್ಯಾಚುಲರ್ಸ್​ಗಳಿಗೆ ಮೆಂಟರ್ಸ್ ಆದ 10 ಸುಂದರಿಯರು
  • ವೇದಿಕೆ ಮೇಲೆ ಸುಕೃತಾ ನಾಗ್​ ಆಸೆ ಈಡೇರಿಸಿದ ಕನ್ನಡದ ಕ್ರೇಜಿ ಸ್ಟಾರ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್ ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ.

Advertisment

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

publive-image

ಅದರಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಖತ್ ಫೇಮಸ್​ ಆಗಿದ್ದ ಸುಕೃತಾ ನಾಗ್​ ಅವರು ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಸುಕೃತಾ ನಾಗ್​ಗೆ ಪ್ರವೀಣ್ ಜೋಡಿಯಾಗಿದ್ದಾರೆ. ಈ ವಾರ ಬ್ಯಾಚುಲರ್ಸ್​ಗಳಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ ಜಡ್ಜಸ್.

publive-image

ಬ್ಯಾಚುಲರ್ಸ್​ಗಳು ತಮ್ಮ ತಮ್ಮ ಜೋಡಿಗೆ ಸರ್​ಪ್ರೈಸ್​ ಕೊಡಬೇಕು ಅಂತ ಹೇಳಿದ್ದರು. ಆಗ ಪ್ರವೀಣ್ ಅವರು ಸುಕೃತಾ ನಾಗ್​ಗೆ ಅವರ ತಂದೆಯ ಫೋಟೋ ಫ್ರೇಮ್​ವೊಂದನ್ನು ಕೊಟ್ಟಿದ್ದಾರೆ. ಇದಾದ ಬಳಿಕ ಸುಕೃತಾ ನಾಗ್​ ಅವರು ಬಹು ದಿನದ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ. ಅದರಲ್ಲೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಸುಕೃತಾ ಆಚೆ ಈಡೇರಿಸಿದ್ದಾರೆ.

Advertisment

​ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ನಿಂತುಕೊಂಡಿದ್ದ ಸುಕೃತಾ ನಾಗ್​ ಅವರು ರವಿ ಸರ್ ಜೊತೆ ಡ್ಯಾನ್ಸ್ ಮಾಡಬೇಕು. ಅದಕ್ಕೆ ನಾನು ಸೀರೆ ಹಾಕಿಕೊಂಡು ಬಂದಿದ್ದೇನೆ ಎಂದರು. ಆ ಕೂಡಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ವೇದಿಕೆಗೆ ಹೋಗಿ ಬಂಗಾರದಿಂದ ಬಣ್ಣಾನ ತಂದ ಹಾಡಿಗೆ ಡ್ಯಾನ್ಸ್​ ಮಾಡಿ ಸುಕೃತಾ ನಾಗ್​ ಆಸೆ ಈಡೇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment