ಮದುವೆ ಯಾಕೆ ಆಗಬೇಕು ಎಂಬ ಪ್ರಶ್ನೆಗೆ ಮುತ್ತಿನಂಥ ಮಾತು ಹೇಳಿದ ಕ್ರೇಜಿಸ್ಟಾರ್​​.. ಏನದು?

author-image
Veena Gangani
Updated On
ಮದುವೆ ಯಾಕೆ ಆಗಬೇಕು ಎಂಬ ಪ್ರಶ್ನೆಗೆ ಮುತ್ತಿನಂಥ ಮಾತು ಹೇಳಿದ ಕ್ರೇಜಿಸ್ಟಾರ್​​.. ಏನದು?
Advertisment
  • ಕ್ರೇಜಿಸ್ಟಾರ್ ರವಿಚಂದ್ರನ್ ಮಾತಿಗೆ ಎಲ್ಲರಿಂದ ಜೋರಾದ ಚಪ್ಪಾಳೆ
  • ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಜಡ್ಜ​ ಆಗಿರೋ ಸ್ಟಾರ್ ನಟ
  • ನಿಮಗೆಲ್ಲಾ ಬೇಕಾಗಿರೋದು ಒಬ್ಬ ಜೊತೆಗಾರ ಎಂದ ರವಿಚಂದ್ರನ್

ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ಕಂಗೊಳಿಸುತ್ತಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಇದೇ ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಲ್ಲರು ಮೆಚ್ಚುವಂತೆ ಮಾತನಾಡಿದ್ದಾರೆ.

ಇದನ್ನೂ ಓದಿ:ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು

publive-image

ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಜಡ್ಜಸ್​ ಸ್ಥಾನದಲ್ಲಿದ್ದಾರೆ ರವಿಚಂದ್ರನ್ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್. ಆಗಾಗ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆ ಹಾಗೂ ಅನುಭವಗಳನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಎಲ್ಲರು ಮೆಚ್ಚುವಂತೆ ಮಾತಾಡಿದ್ದಾರೆ ರವಿಚಂದ್ರನ್. ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಮದುವೆ ಏಕೆ ಆಗಬೇಕು ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಮದುವೆ ಅನ್ನೋದು ಜೀವನದಲ್ಲಿ ಒಂದು ಕಂಪ್ಯಾನಿಯನ್ (ಜತೆಗಾರ) ಬೇಕು. ನೀವು ನಿಮ್ಮ ಭಾವನೆಗಳನ್ನು ಶೇರ್ ಮಾಡಿಕೊಳ್ಳಬೇಕು. ನಿಮಗೆ ಕೆಲಸಗಾರ ಬೇಕು. ಇಲ್ಲ ಅಂದ್ರೆ ನಿಮ್ಮ ಖರ್ಚನ್ನು ನಿಭಾಸೋಕೆ ಬೇಕು ಅಂತೀರಾ ಇದಲ್ಲ ಬೇಕಾಗಿರೋದು. ನಿಮಗೆಲ್ಲಾ ಬೇಕಾಗಿರೋದು ಒಬ್ಬ ಜೊತೆಗಾರ. ನಿಮ್ಮ ಫಿಲಿಂಗ್ಸ್​, ನಿಮ್ಮ ಯೋಚನೆಗಳನ್ನು ಶೇರ್ ಮಾಡಿಕೊಳ್ಳುವುದಕ್ಕೆ ಬೇಕು. ಸಂಜೆ ಮನೆಗೆ ಹೋದಾಗ ನಮಗೆ ಅಂತ ಯಾತಿ ಕಾಯ್ತಾ ಇರುತ್ತಾರೆ. ಆ ತಾಯಿಗೆ ಒಂದು ವಯಸ್ಸು ಆಗುತ್ತೆ, ಆ ವಯಸ್ಸಿನ ಜೊತೆಗೆ ಒಂದು ಕಂಪನಿ ಬೇಕು. ಅದಕ್ಕೆ ನನ್ನ ಹೆಂಡತಿ ಆದ್ರೆ ನನ್ನ ತಾಯಿಗೆ ಜೊತೆಯಾಗುತ್ತಾಳೆ, ಅವರ ಕೆಲಸಕ್ಕೆ ಸಹಾಯ ಮಾಡುತ್ತಾಳೆ, ಇಬ್ಬರು ಒಬ್ಬರಿಗೊಬ್ಬರು ವಿಚಾರದ ಬಗ್ಗೆ ಮಾತಾಡುತ್ತಾರೆ. ಒಂದು ಹೆಣ್ಣು ಮನೆಯೊಳಗೆ ಕಾಲಿಟ್ಟರೆ ಒಂದು ಲಕ್ಷ್ಮೀ ಬಂದ ಹಾಗೇ ಎಂದಿದ್ದಾರೆ. ಇದೇ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನರೆದಿದ್ದ ಎಲ್ಲಾರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment