ದೀಪಾವಳಿ ದೀಪಾಲಂಕಾರದಲ್ಲಿ ಎಷ್ಟು ಬಗೆಗಳಿವೆ ಗೊತ್ತಾ? ಇಲ್ಲಿದೆ ಸಖತ್ ಇಂಟ್ರೆಸ್ಟಿಂಗ್ ಮಾಹಿತಿ!

author-image
Gopal Kulkarni
Updated On
ದೀಪಾವಳಿ ದೀಪಾಲಂಕಾರದಲ್ಲಿ ಎಷ್ಟು ಬಗೆಗಳಿವೆ ಗೊತ್ತಾ? ಇಲ್ಲಿದೆ ಸಖತ್ ಇಂಟ್ರೆಸ್ಟಿಂಗ್ ಮಾಹಿತಿ!
Advertisment
  • ದೀಪಾವಳಿಯಂದು ನೀವು ಮನೆಯನ್ನು ಹಲವು ರೀತಿ ಸಿಂಗರಿಸಬಹುದು?
  • ಮಣ್ಣಿನ ಹಣತೆಗಳಿಂದ ಯಾವೆಲ್ಲಾ ಅಲಂಕಾರ ಮಾಡಬಹುದು ಅಂತ ಗೊತ್ತಾ?
  • ವಿದ್ಯುತ್ ದೀಪಗಳು, ಕ್ಯಾಂಡಲ್​ಗಳಿಂದ ಬೆಳಕಿನ ಸಿಂಗಾರ ಎಷ್ಟು ಚೆಂದ ನೋಡಿ

ದೀಪಾವಳಿ, ಬೆಳಕಿನ ಹಬ್ಬವೆಂದೇ ನಾವು ಕರೆಯುತ್ತೇವೆ. ಕಾರ್ತಿಕದ ಕಿರುಚಳಿ, ಬೆಳದಿಂಗಳ ಬಿಳಿ ಮಳೆ, ಎದೆಯ ಭಾವದಲ್ಲಿ ಕತ್ತಲೆ ಅಳೆದು ಹೊಸ ಬೆಳಕಿನತ್ತ ಮನವನ್ನು ನಡೆಸುವ ಹಬ್ಬವದು. ತಮಸೋಮಾ ಜ್ಯೋತಿರ್ಗಮಯ. ಕತ್ತಲನಿಂದ ಬೆಳಕಿನೆಡೆಗೆ ನಡೆಯುವುದರ ಪ್ರತೀಕವಾಗಿ ದೀಪಾವಳಿ ಇರುತ್ತದೆ. ಎಲ್ಲೆಲ್ಲೂ ದೀಪಗಳ ಸಡಗರ, ಎಲ್ಲೆಲ್ಲೂ ಬೆಳಕಿನ ಆಟ ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿ ಬೀದಿಯಲ್ಲೂ ಕಾಣಲಿವೆ. ಹಾಗೆ ಯಾವ ರೀತಿಯಲ್ಲೆಲ್ಲಾ ನಾವು ದೀಪಗಳನ್ನು ಬೆಳಗಬಹುದು. ಬೆಳಕಿಗೆ ಹೊಸ ರೂಪ ಕೊಡಬಹುದು ಅನ್ನೋದರ ಬಗ್ಗೆ ಒಂದು ಸಣ್ಣ ಪಕ್ಷಿನೋಟ ಇಲ್ಲಿದೆ.

ಇದನ್ನೂ ಓದಿ:ಈ ದೇಗುಲದಲ್ಲಿ ನಡೆಯುತ್ತೆ ಅಚ್ಚರಿಯ ಪವಾಡ; ಎಣ್ಣೆ, ತುಪ್ಪ ಅಲ್ಲ.. ನೀರಿನಿಂದಲೇ ಉರಿಯುತ್ತೆ ದೀಪ ಅದು ಹೇಗೆ?

ಮಣ್ಣಿನ ಹಣತೆಗಳು
ಎಕೊ ಫ್ರೆಂಡ್ಲಿ ಹಣತೆಗಳು ಅಂದ್ರೆ ಅವು ಮಣ್ಣಿನ ಹಣತೆಗಳೇ. ದೀಪಾವಳಿಯಲ್ಲಿ ಹೆಚ್ಚು ಮಾರಾಟವವಾಗುತ್ತವೆ ಈ ಹಣತೆಗಳು ಅವುಗಳಲ್ಲಿಯೂ ಕೂಡ ಹಲವು ರೀತಿಯಲ್ಲಿ ನಾವು ಅಲಂಕಾರ ಮಾಡಬಹುದು

publive-image

ತೇಲುವ ಹಣತೆ: ಒಂದು ಅಗಲವಾದ ತಟ್ಟೆಯಲ್ಲಿ ನೀರನ್ನು ಹಾಕಿ.ಅದರಲ್ಲಿ ಒಂದಿಷ್ಟು ರಂಗು ರಂಗಿನ ಹೂವುಗಳನ್ನು ಹಾಕಿ ಅದರ ಮೇಲೆ ಹಣತೆಗಳನ್ನು ಹಚ್ಚಿಟ್ಟು. ಅದನ್ನು ಒಂದು ಟೇಬಲ್ ಇಲ್ಲವೇ ಪ್ರವೇಶ ದ್ವಾರದಲ್ಲಿ ಇಡಿ. ಅದರ ಚೆಲುವು ಬೇರೆಯದ್ದೇ ಆಗಿ ಕಾಣುತ್ತದೆ.

ಇದನ್ನೂ ಓದಿ:ಲಿಫ್ಟ್​ಗಳಲ್ಲಿ ಕನ್ನಡಿಯನ್ನೇಕೆ ಫಿಟ್ ಮಾಡಿರುತ್ತಾರೆ.? ಕಾರಣ ತಿಳಿದ್ರೆ ನೀವು ಅಚ್ಚರಿಗೊಳ್ತೀರಿ

ರಂಗು ರಂಗಿನ ಹಣತೆ: ನೀವು ಮಣ್ಣಿನ ಹಣತೆ ತಂದು ಅವುಗಳಿಗೆ ನಿಮಗಿಷ್ಟವಾದ ಬಣ್ಣಗಳನ್ನು ಲೇಪಿಸಿ. ಅದರಲ್ಲಿ ಎಣ್ಣೆ, ಬತ್ತಿ ಹಾಕಿಟ್ಟು ಕಿಟಕಿ, ಮನೆಯ ಎಲ್ಲ ಮೂಲೆಗಳು ಹಾಗೂ ಶೆಲ್ವ್​ಗಲ್ಲಿ ಇಡುವುದರಿಂದ ಅಲಂಕಾರಕ್ಕೆ ಮತ್ತಷ್ಟು ಮೆರಗು ಬರುತ್ತದೆ.

publive-image

ತೂಗದೀಪದ ಹಣತೆ: ಮಾರುಕಟ್ಟೆಯಲ್ಲಿ ದೀಪಗಳನ್ನು ತೂಗು ಬಿಡಲು ಎಂದೇ ಕೆಲವು ಹುಕ್ಸ್​ಗಳು ಸಿಗುತ್ತವೆ. ಅಂತಹ ಹುಕ್ಸ್​ಗಳನ್ನು ತಂದು ಅವುಗಳಲ್ಲಿ ದೀಪವನ್ನು ಬೆಳಗಿಸಿ ಬಾಲ್ಕನಿ ಇಲ್ಲವೇ ಮನೆ ಪ್ರವೇಶ ದ್ವಾರದಲ್ಲಿ ತೂಗು ಬಿಡುವುದು ಕೂಡ ಚೆಂದದ ಅಲಂಕಾರ.
ಇನ್ನು ಹಣತೆ ಒಂದು ರೀತಿಯ ಅಲಂಕಾರವಾದಲ್ಲಿ ಮತ್ತೊಂದು ರೀತಿಯ ಅಲಂಕಾರವೆಂದರೆ ಅವು ವಿದ್ಯುತ್​ ದೀಪಗಳಿಂದ ಅಲಂಕಾರ ಮಾಡುವುದು.

publive-image
ಪೇಪರ್ ಲ್ಯಾಂಟರ್ನ್​​ಗಳು: ಇವು ಅತ್ಯಂತ ಬಜೆಟ್ ಫ್ರೆಂಡ್ಲಿ. ಇವುಗಳುಅನೇಕ ವಿನ್ಯಾಸ ಹಾಗೂ ಗಾತ್ರದಲ್ಲಿ ನಮಗೆ ಲಭ್ಯವಾಗುತ್ತವೆ. ಇವುಗಳನ್ನು ಅದ್ಭುತ ಬೆಳಕಿನ ಅಲಂಕಾರಕ್ಕಾಗಿ ಮನೆ ಹಾಗೂ ಅಂಗಡಿಗಳಲ್ಲಿ ಹಲವು ರೀತಿಯ ಆಕಾರಗಳಲ್ಲಿ ಬಳಸಬಹುದು

publive-image

ಮೇಣದ ಬತ್ತಿಯ ಅಲಂಕಾರ
ಮೇಣದ ಬತ್ತಿಯನ್ನು ಬೆಳಗುವ ಮೂಲಕವೂ ನಾವು ದೀಪಾವಳಿಯನ್ನು ಇನ್ನಷ್ಟು ಬೆಳಗಬಹುದು. ಅವುಗಳಲ್ಲಿಯೂ ಕೂಡ ಹಲವು ಬಗೆಯ ಮೇಣದ ಬತ್ತಿಗಳನ್ನು ನಾವು ಕಾಣುತ್ತವೆ. ಸೆಂಟೆಡ್ ಕ್ಯಾಂಡಲ್ಸ್​, ಕ್ಲಸ್ಟರ್ ಕ್ಯಾಂಡಲ್ಸ್ , ಟೀ ಲೈಟ್ಸ್ ಇನ್ ಗ್ಲಾಸ್ ಹೋಲ್ಡರ್ಸ್​ ರೀತಿಯಲ್ಲಿ ಅನೇಕ ನಾನಾ ಬಗೆಯ ಕ್ಯಾಂಡಲ್​ಗಳು ಮಾರುಕಟ್ಟೆಯಲ್ಲಿವೆ. ಸೆಂಟೆಡ್ ಕ್ಯಾಂಡಲ್​ಗಳಲ್ಲಿ ಶ್ರೀಗಂಧ, ಗುಲಾಬಿ, ಮಲ್ಲಿಗೆ ಪರಿಮಳ ಹೊಮ್ಮಿಸುವಂತಹ ಮೇಣದಬತ್ತಿಗಲು ಸಿಗುತ್ತವೆ. ಇದರಿಂದ ಚೆಂದದ ಬೆಳಕು ಬರುವುದರ ಜೊತೆಗೆ ಇಡೀ ವಾತಾವರಣವನ್ನೇ ಒಂದು ಸುಂದರ ಪರಿಮಳದೊಂದಿಗೆ ತುಂಬಿಸುತ್ತದೆ.

ರಂಗೋಲಿಯ ಮೂಲಕವೂ ಮನೆಯನ್ನು ಸಿಂಗರಿಸಬಹುದು. ರಂಗೋಲಿಯನ್ನು ಹಾಕಿ ನಾವು ಹಚ್ಚಿದ ಹಣತೆಗಳನ್ನು ಅದರಲ್ಲಿ ಇಡುವುದರ ಮೂಲಕ ಇಲ್ಲವೇ ದೀಪಗಳನ್ನೇ ರಂಗೋಲಿಯ ಆಕೃತಿಯಲ್ಲಿ ಹೊಂದಿಸುವುದರ ಮೂಲಕ ನಾವು ದೀಪಗಳನ್ನು ಬೆಳಗಿ ದೀಪವಾಳಿಯನ್ನು ಆಚರಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment