/newsfirstlive-kannada/media/post_attachments/wp-content/uploads/2025/02/NIRMALA-SITHARAMN.jpg)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂಎಸ್ಎಂಇ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ನೀಡಲಾಗುತ್ತಿದ್ದ 5 ಕೋಟಿ ರೂಪಾಯಿ ಸಾಲದ ಪ್ರಮಾಣವನ್ನು 10 ಕೋಟಿಗೆ ಹೆಚ್ಚಿಸಿದ್ದಾರೆ.
ದೇಶದ ಉತ್ಪಾದನೆ ಹಾಗೂ ಸೇವೆಗಳಲ್ಲಿ ಎಂಎಸ್ಎಂಇಗಳು ಎರಡನೇ ಇಂಜಿನ್ ರೀತಿಯ ಕಾರ್ಯನನಿರ್ವಹಿಸುತ್ತಿವೆ. ದೇಶಲ್ಲಿ ಒಟ್ಟು 5.7 ಕೋಟಿ ಎಂಎಸ್ಎಂಇಗಳಿವೆ.1 ಕೋಟಿ ರಿಜಿಸ್ಟರ್ ಆಗಿರುವ ಎಂಎಸ್ಎಂಇಗಳಲ್ಲಿ ಸುಮಾರು 7.5 ಕೋಟಿ ಜನರು ಉದ್ಯೋಗಿಗಳಿದ್ದಾರೆ.
ಇದನ್ನೂ ಓದಿ:ಬಡವರು, ಅನ್ನದಾತರು, ಯುವಕರು ಹಾಗೂ ನಾರಿಶಕ್ತಿಗೆ ಬಲ; ಬಜೆಟ್ಗೆ ಮೊದಲು ಹೇಳಿದ ನಿರ್ಮಲಾ ಸೀತಾರಾಮನ್
ಉತ್ಪಾದನಾ ವಲಯದಲ್ಲಿ ಎಂಎಸ್ಎಂಇಗಳು ಸುಮಾರು ಶೇಕಡಾ 36 ರಷ್ಟು ಕೊಡುಗೆ ನೀಡುತ್ತಿವೆ. ಇದರಿಂದ ಮುಂದೊಂದು ದಿನ ದೇಶವು ಉತ್ಪಾನಾವಲಯದ ಹಬ್ ಆಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ