/newsfirstlive-kannada/media/post_attachments/wp-content/uploads/2023/07/Money-1.jpg)
ಎಲ್ಲರಿಗೂ ಒಂದಲ್ಲ, ಒಂದು ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಈ ಹಿಂದೆ ಎಲ್ಲರೂ ಎಮರ್ಜೆನ್ಸಿ ಫಂಡ್ ಅಂತಾ ಒಂದು ಕಡೆ ಸೇವಿಂಗ್ಸ್ ಇಡುತ್ತಿದ್ದರು. ಇದು ಕಷ್ಟಕಾಲಕ್ಕೆ ಆಗುತ್ತಿತ್ತು. ಆದರೆ, ಯಾವಾಗ ಕ್ರೆಡಿಟ್ ಕಾರ್ಡ್ ಜಮಾನ ಶುರುವಾಯ್ತೋ ಅಂದಿನಿಂದ ಜನ ಎಮರ್ಜೆನ್ಸಿ ಫಂಡ್ ಮೊರೆ ಹೋಗುತ್ತಿಲ್ಲ. ಕಾರಣ ಕ್ರೆಡಿಟ್ ಕಾರ್ಡ್ನಿಂದಲೇ ಎಮರ್ಜೆನ್ಸಿ ಸಾಲ ಸಿಗುತ್ತದೆ.
ಕ್ರೆಡಿಟ್ ಕಾರ್ಡ್ ಜತೆಗೆ ಪರ್ಸನಲ್ ಲೋನ್!
ಕಷ್ಟ ಎಂದು ಬಂದಾಗ ಕೇವಲ ಕ್ರೆಡಿಟ್ ಕಾರ್ಡ್ ಮಾತ್ರವಲ್ಲ ಪರ್ಸನಲ್ ಲೋನ್ ಕೂಡ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಮತ್ತು ಪರ್ಸನಲ್ ಲೋನ್ ಎರಡು ಕೂಡ ಜನರಿಗೆ ಸಿಗೋ ಬೆಸ್ಟ್ ಆಪ್ಷನ್ಸ್ ಎಂದು ಹೇಳಬಹುದು. ನೀವು ಎರಡಕ್ಕೂ ಏನು ಅಡಮಾನ ಇಡೋ ಅಗತ್ಯವಿಲ್ಲ. ಆದರೆ, ನಿಮಗೆ ಎರಡರಲ್ಲಿ ಯಾವುದು ಬೆಸ್ಟ್ ಎಂದು ತಿಳಿಸೋ ಪ್ರಯತ್ನ ಈ ಲೇಖನದ್ದು.
ಎಲ್ಲರ ಬಳಿಯೂ ಕ್ರೆಡಿಟ್ ಕಾರ್ಡ್ ಇದೆ!
ಬಹುತೇಕ ಎಲ್ಲರ ಬಳಿ ಈಗ ಕ್ರೆಡಿಟ್ ಕಾರ್ಡ್ ಇದೆ. ಇಲ್ಲದೆ ಹೋದ್ರೂ ಬ್ಯಾಂಕಿನವರೇ ಕಾಲ್ ಮಾಡಿ ಕ್ರೆಡಿಟ್ ಕಾರ್ಡ್ ಕೊಡುತ್ತಾರೆ. ಜೇಬಲ್ಲಿ ಹಣ ಇಲ್ಲದಿದ್ರೂ ನೀವು ಶಾಪಿಂಗ್ ಮಾಡಬಹುದು. ಬಿಲ್ ಪಾವತಿಸಲು, ಎಟಿಎಂನಿಂದ ಹಣ ಡ್ರಾ ಮಾಡಲು ಸೇರಿ ಹಲವು ಕಡೆ ಕ್ರೆಡಿಟ್ ಕಾರ್ಡ್ ಬಳಕೆ ಆಗಲಿದೆ. ಇದಕ್ಕೆ ಹೆಚ್ಚಿನ ಶುಲ್ಕ ಕಟ್ಟಬೇಕು. ಆದರೆ, ರಿವಾರ್ಡ್ ಪಾಯಿಂಟ್ಸ್, ವೋಚರ್, ಗಿಫ್ಟ್ ಕಾರ್ಡ್, ಕ್ಯಾಶ್ ಬ್ಯಾಕ್ ಮೂಲಕ ಒಂದಷ್ಟು ಲಾಭ ಪಡೆಯಬಹುದು.
ಇದನ್ನೂ ಓದಿ:PHOTOS: ಬಿಗ್ಬಾಸ್ನಿಂದ ಹೊರಬಂದ ಲಾಯರ್ ಜಗದೀಶ್ ದಿಢೀರ್ ಪ್ರತ್ಯಕ್ಷ ಆಗಿದ್ದು ಎಲ್ಲಿ?
45 ದಿನದಲ್ಲಿ ರೀಪೇಮೆಂಟ್ ಮಾಡಬೇಕು
ಕ್ರೆಡಿಟ್ ಕಾರ್ಡ್‌ನಲ್ಲಿ ಬಿಲ್ ಪಾವತಿಸುವುದು ಎಂದರೆ ಸಾಲ ತಲೆ ಮೇಲೆ ಇಟ್ಟುಕೊಂಡಂತೆ. ನೀವು 45 ದಿನಗಳಲ್ಲಿ ರೀಪೇಮೆಂಟ್ ಮಾಡಲೇಬೇಕು. ಇಲ್ಲದೆ ಹೋದಲ್ಲಿ ಬಡ್ಡಿ ಮೇಲೆ ಬಡ್ಡಿ ಕಟ್ಟಬೇಕಾಗುತ್ತದೆ. ಒಂದು ವೇಳೆ ನಿಗದಿತ ಸಮಯದೊಳಗೆ ಬಿಲ್ ಕಟ್ಟಿದ್ರೆ ಯಾವುದೇ ಸಮಸ್ಯೆ ಆಗೋದಿಲ್ಲ.
ಪರ್ಸನಲ್ ಲೋನ್!
ಯಾರಿಗಾದ್ರೂ ಕ್ಯಾಶ್ ಅಗತ್ಯಬಿದ್ದಾಗ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು. ಇದಕ್ಕಾಗಿ ಕೆಲವು ದಾಖಲೆಗಳನ್ನು ನೀಡಬೇಕು. ಗ್ರಾಹಕರಿಗೆ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದೆಯೇ ಅನ್ನೋದು ಸಿಬಿಲ್ ಸ್ಕೋರ್ ಪರಿಶೀಲಿಸಿದ ನಂತರ ಬ್ಯಾಂಕ್ ಪರ್ಸನಲ್ ಲೋನ್ ಕೊಡುತ್ತದೆ. ಇದಕ್ಕೂ ನೀವು ಪ್ರಾಸೆಸಿಂಗ್ ಫೀ ಪೇ ಮಾಡಬೇಕು. ಕಾರ್ ಮತ್ತು ಗೃಹ ಸಾಲಕ್ಕಿಂತಲೂ ಹೆಚ್ಚು ಬಡ್ಡಿ ಪರ್ಸನಲ್ ಲೋನ್ ಮೇಲೆ ಇರಲಿದೆ.
20-30 ಸಾವಿರ ರೂ. ಕಡಿಮೆ ಸಮಯಕ್ಕೆ ಬೇಕು ಎನ್ನುವಾಗ ಕ್ರೆಡಿಟ್ ಕಾರ್ಡ್ ಬೆಸ್ಟ್. ದೊಡ್ಡ ಮೊತ್ತದ ಹಣ ಬೇಕಿದ್ದರೆ ಪರ್ಸನಲ್ ಲೋನ್ ಉತ್ತಮ ಎನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ