/newsfirstlive-kannada/media/post_attachments/wp-content/uploads/2025/04/RAJAT-PATIDAR-1.jpg)
ಪಂಜಾಬ್ ವಿರುದ್ಧ ಕೊನೆಗೂ ಆರ್ಸಿಬಿ ತನ್ನ ಸೇಡು ತೀರಿಸಿಕೊಂಡಿದೆ. ನಿನ್ನೆ ಮಧ್ಯಾಹ್ನ ಚಂಡಿಗಡದಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಹೊಸ ದಾಖಲೆ ಬರೆದಿದೆ.
ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್.. ಗೆಲುವಿನ ಕ್ರೆಡಿಟ್ ಬೌಲರ್ಗಳಿಗೆ ಸಲ್ಲುತ್ತದೆ. ದೇವ್ ಮತ್ತು ಕೊಹ್ಲಿ ಪ್ಲಾನ್ ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿತ್ತು. ಜೊತೆಗೆ ನಮ್ಮ ಬೌಲರ್‌ಗಳು ವಿಭಿನ್ನ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: RCB ಭರ್ಜರಿ ಗೆಲುವು.. ಐಪಿಎಲ್ನಲ್ಲಿ ಐತಿಹಾಸಿಕ ರೆಕಾರ್ಡ್ ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ!
ವಿಕೆಟ್ ಸ್ವಲ್ಪ ನಿಧಾನವಾಗಿದ್ದರಿಂದ ಟೈಟ್ಲೈನ್ನಲ್ಲಿ ಬೌಲಿಂಗ್ ಮಾಡಬೇಕಾಗಿತ್ತು. ಅದರ ಬಗ್ಗೆ ಎಲ್ಲಾ ಬೌಲರ್ಗಳಿಗೂ ಮಸೇಜ್ ಹೋಗಿತ್ತು. ಫೀಲ್ಡಿಂಗ್ ಕಳೆದ ರಾತ್ರಿಯೇ ಪ್ಲಾನ್ ಮಾಡಿದ್ದೆವು. ಎಲ್ಲರೂ ತಮ್ಮ ಪ್ರಯತ್ನಗಳನ್ನು ಮಾಡಿದರು. ನಿನ್ನೆಯ ಪಂದ್ಯ ಅದ್ಭುತವಾಗಿತ್ತು. ಚಿನ್ನಸ್ವಾಮಿಯಲ್ಲಿ ನಾನು ಮೊದಲು ಟಾಸ್ ಗೆಲ್ಲಲು ಬಯಸುತ್ತೇನೆ. ತವರಿನಲ್ಲಿ ಅದ್ಭುತ ಆಟವಾಡಲು ಬಯಸುತ್ತೇನೆ. ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಪಾಟೀದಾರ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್, 6 ವಿಕೆಟ್ ಕಳೆದುಕೊಂಡು 157 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಆರ್ಸಿಬಿ ಮೂರು ವಿಕೆಟ್ ಕಳೆದುಕೊಂಡು 159 ರನ್ಗಳಿಸಿತು. ಆರ್ಸಿಬಿ ಪರ 54 ಬಾಲ್ನಲ್ಲಿ 73, ದೇವದತ್ತ ಪಡಿಕ್ಕಲ್ 35 ಬಾಲ್ನಲ್ಲಿ 61 ರನ್ಗಳಿಸಿದರು. ಆ ಮೂಲಕ ಆರ್ಸಿಬಿ ಸುಲಭವಾಗಿ ಗೆಲುವು ಸಾಧಿಸಿತು.
ಇದನ್ನೂ ಓದಿ: CSKಗೆ ಹಿಗ್ಗಾಮುಗ್ಗಾ ಬಾರಿಸಿದ ರೋಹಿತ್, ಸೂರ್ಯಕುಮಾರ್.. ಧೋನಿಗೆ ಭಾರೀ ಅವಮಾನ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್