newsfirstkannada.com

‘ವೆಂಕಿ’ ಟೆಕ್ನಿಕ್​ಗೆ ದಂಗಾದ ಬೌಲರ್..! ಟ್ವಿಟರ್​ನಲ್ಲಿ ಕೊಹ್ಲಿ ಎರಡೇ ಪದದಲ್ಲಿ ಭಾವನಾತ್ಮಕ ಪೋಸ್ಟ್​..!

Share :

Published August 19, 2023 at 12:59pm

Update August 19, 2023 at 1:00pm

    ಕ್ರಿಕೆಟ್ ಲೋಕದ ಸೂಪರ್ ಸುದ್ದಿಗಳು ಇಲ್ಲಿವೆ

    ಭಾರತ ಏಷ್ಯಾಕಪ್​​ ತಂಡ ಪ್ರಕಟ ಮತ್ತಷ್ಟು ವಿಳಂಬ

    ಸಿಲ್ಲಿಯಾಗಿ ರನೌಟಾದ ರಕೀಮ್​​ ಕಾರ್ನ್​ವಾಲ್​​

ಭಾರತ ಏಷ್ಯಾಕಪ್​​ ತಂಡ ಪ್ರಕಟ ಮತ್ತಷ್ಟು ವಿಳಂಬ?

ಆಗಸ್ಟ್​​​ 30 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿಗೆ ಶುರುವಿಗೆ ಇನ್ನೂ ಹತ್ತು ದಿನಗಳು ಬಾಕಿ ಇದ್ದು, ಟೀಮ್ ಇಂಡಿಯಾ ಪ್ರಕಟಗೊಂಡಿಲ್ಲ. ಭಾನುವಾರ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಅನೌನ್ಸ್ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಆಗಸ್ಟ್​​ 20 ರಂದು ಭಾರತ-ಐರ್ಲೆಂಡ್​ ನಡುವೆ 2ನೇ ಟಿ20 ಪಂದ್ಯ ನಡೆಯಲಿದೆ. ಹೀಗಾಗಿ ಮರುದಿನ ಆಯ್ಕೆ ಸಮಿತಿ ಸಭೆ ಸೇರಲಿದ್ದು ತಂಡ ಪ್ರಕಟಗೊಳ್ಳುವುದು ವಿಳಂಬವಾಗಲಿದೆ. ಸಭೆಯಲ್ಲಿ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್​​ ಆಯ್ಕೆ, ಶ್ರೇಯಸ್ ಅಲಭ್ಯವಾದಲ್ಲಿ ಸೂರ್ಯ ಆಯ್ಕೆಗೆ ಒಲವು ಹಾಗೂ ತಿಲಕ್ ವರ್ಮಾರನ್ನು ತಂಡಕ್ಕೆ ಪರಿಗಣಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗ್ತಿದೆ.

‘ವೆಂಕಿ’ ಟೆಕ್ನಿಕ್​ಗೆ ದಂಗಾದ ಬೌಲರ್..!​​​​

ಟೀಮ್ ಇಂಡಿಯಾ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್​​ ಇನ್​ಡೋರ್​​ನಲ್ಲಿ ಕ್ರಿಕೆಟ್​ ಆಡುತ್ತಿರುವ ವಿಡಿಯೋ ಸಖತ್​ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ನಾನ್​​ಸ್ಟ್ರೈಕರ್​​ನಲ್ಲಿ ವೆಂಕಟೇಶ್ ಅಯ್ಯರ್ ಬೌಲರ್​ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್​ ಬಿಟ್ಟು ಓಡಿ ಬರುತ್ತಾರೆ. ಆಗ ಬೌಲರ್ ರನೌಟ್​ ಮಾಡಲು ಮುಂದಾಗ್ತಾರೆ. ಇದು ಗೊತ್ತಾಗುತ್ತಿದ್ದಂತೆ ವೆಂಕಿ ಸ್ಟ್ರೈಕ್​​​​​ ಬ್ಯಾಟ್ಸ್​​ಮನ್ ಬಳಿ ಓಡಿ ಬಂದು ಏನೋ ಟಿಪ್ಸ್ ನೀಡುತ್ತಾರೆ. ಆಗ ಬೌಲರ್​​ ವೆಂಕಟೇಶ್ ಅಯ್ಯರ್​ ಟೆಕ್ನಿಕ್ ನೋಡಿ ಏನೂ ಮಾತನಾಡದೇ ಮತ್ತೆ ಬೌಲಿಂಗ್ ಮಾಡಲು ಮುಂದಾಗ್ತಾರೆ.

ಸುನೀಲ್ ಶೆಟ್ಟಿ ಭೇಟಿಯಾದ ಶಾಹಿದ್​​ ಅಫ್ರಿದಿ..!

ಯುಎಸ್​​​ಎನಲ್ಲಿ ಖ್ಯಾತ ಬಾಲಿವುಡ್​​ ನಟ ಮತ್ತು ಪಾಕಿಸ್ತಾನ ಕ್ರಿಕೆಟ್​ ತಂಡದ ಸ್ಟಾರ್ ಆಟಗಾರರ ಸಂಗಮವಾಗಿದೆ. ಬಿಟೌನ್​​​​​ನ ಹೆಸರಾಂತ ಸುನೀಲ್ ಶೆಟ್ಟಿ ಅವರನ್ನ ಪಾಕ್​​​ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಭೇಟಿಯಾಗಿದ್ದಾರೆ. ಸುನೀಲ್​​ ಶೆಟ್ಟಿ ಅವರನ್ನ ಅಫ್ರಿದಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಇದೇ ವೇಳೆ ಸ್ಟಾರ್ ಆಲ್​ರೌಂಡರ್ ಅಫ್ರಿದಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನ ಸುನೀಲ್​ ಶೆಟ್ಟಿ ಅವರಿಗೆ ಪರಿಚಯಿಸಿದ್ದಾರೆ.

ಸಿಲ್ಲಿಯಾಗಿ ರನೌಟಾದ ರಕೀಮ್​​ ಕಾರ್ನ್​ವಾಲ್

ಕ್ರಿಕೆಟ್​​ನಲ್ಲಿ ಆಟಗಾರರು ಸಿಲ್ಲಿಯಾಗಿ ವಿಕೆಟ್ ಒಪ್ಪಿಸೋದು ಹೊಸತೇನಲ್ಲ. ಆದರೆ ವೆಸ್ಟ್​ಇಂಡೀಸ್​ ಕ್ರಿಕೆಟ್​ ತಂಡದ ದೈತ್ಯ ಆಟಗಾರ ರಕೀಮ್​ ಕಾರ್ನ್​ವಾಲ್​ ಎಷ್ಟು ಸಿಲ್ಲಿಯಾಗಿ ವಿಕೆಟ್​ ಒಪ್ಪಿಸಬೇಕೋ ಅಷ್ಟು ಸಿಲ್ಲಿಯಾಗಿ ವಿಕೆಟ್​ ಒಪ್ಪಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ಕಾರ್ನ್​ವಾಲಾ ಆದ ರನೌಟ್​​​​​ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಬಾರ್ಬಡೋಸ್​​ ರಾಯಲ್ಸ್​​ ತಂಡದ ಕಾರ್ನ್​ವಾಲ್​​ ಅವರಿಗೆ ಸುಲಭವಾಗಿ 1 ರನ್​ ಕದಿಯುವ ಅವಕಾಶವಿತ್ತು. ವಿಂಡೀಸ್ ಬ್ಯಾಟರ್​ ಅರ್ಧ ಪಿಚ್​​ಗೆ ಓಡುವಷ್ಟರಲ್ಲಿ ಸುಸ್ತಾಗಿ ಹೋದ್ರು. ಎದುರಾಳಿ ತಂಡ ಸುಲಭವಾಗಿ ರನೌಟ್​​ ಬಲೆಗೆ ಬೀಳಿಸಿತು.

ಯಂಗ್​ ಕ್ರಿಕೆಟ್ ಫ್ಯಾನ್ ಮಾತನಾಡಿಸಿದ ಗಿಲ್

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್​​ಮನ್​​​ ಗಿಲ್​​​​​​​ ಕ್ರೇಜ್​ ದಿನೇ ದಿನೇ ಹೆಚ್ಚುತ್ತಿದೆ. ಪುಟ್ಟ ಬಾಲಕನೊಬ್ಬ ಗಿಲ್​ರನ್ನ ಭೇಟಿಯಾಗಿದ್ದಾರೆ. ಈ ವೇಳೆ ಶುಭ್​​ಮನ್ ಗಿಲ್​​ ಯಂಗ್​​ ಫ್ಯಾನ್​ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದಾರೆ. ಕೆನ್ನೆ ಸವರಿ ಕೆಲ ನಿಮಿಷಗಳ ಕಾಲ ಮಾತನಾಡಿಸಿದ್ದು, ಶುಭ್​​ಮನ್ ಗಿಲ್​​​ಗೆ ಗೆಶ್ಚರ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿನ್ನೆಯಿಂದ ಆರಂಭಗೊಂಡಿರುವ ಐರ್ಲೆಂಡ್​ ಟಿ20 ಸರಣಿಯಿಂದ ಗಿಲ್​ಗೆ ವಿಶ್ರಾಂತಿ ನೀಡಲಾಗಿದೆ. ವರ್ಕ್​ಲೋಡ್​ ಕಮ್ಮಿ ಮಾಡುವ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಯುವ ಆಟಗಾರರನಿಗೆ ರೆಸ್ಟ್​ ನೀಡಿದೆ.

‘ಎಂದೆಂದಿಗೂ ಕೃತಜ್ಞನಾಗಿರುತ್ತೇನೆ’

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿದ್ದಾರೆ. ಕ್ರಿಕೆಟ್ ದಿಗ್ಗಜನಿಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಮ್ಮ 15 ವರ್ಷಗಳ ಕ್ರಿಕೆಟ್​​ ಪಯಣವನ್ನ ವಿರಾಟ್ ಕೊಹ್ಲಿ ಕೇವಲ ಎರಡು ಪದಗಳಲ್ಲಿ ಬಣ್ಣಿಸಿದ್ದು, ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಟ್ವಿಟರ್​​​​ನಲ್ಲಿ ಬರೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ 2022ರ ಟಿ20 ವಿಶ್ವಕಪ್​​​​​​​​ ಪಂದ್ಯದ ಗೆಲುವಿನ ಬಳಿಕದ ಫೋಟೋವನ್ನ ಪೋಸ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆಗಸ್ಟ್​​ 18, 2008 ರಂದು ಏಕದಿನ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯು ಮಾಡಿದ್ದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ವೆಂಕಿ’ ಟೆಕ್ನಿಕ್​ಗೆ ದಂಗಾದ ಬೌಲರ್..! ಟ್ವಿಟರ್​ನಲ್ಲಿ ಕೊಹ್ಲಿ ಎರಡೇ ಪದದಲ್ಲಿ ಭಾವನಾತ್ಮಕ ಪೋಸ್ಟ್​..!

https://newsfirstlive.com/wp-content/uploads/2023/08/VIRAT.jpg

Load More