ಸಿರಾಜ್​ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!

author-image
Ganesh
Updated On
ಸಿರಾಜ್​ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!
Advertisment
  • 2ನೇ ಟೆಸ್ಟ್​ ಮುನ್ನ ಟೀಮ್ ಇಂಡಿಯಾಗೆ ಜ್ಞಾನೋದಯ
  • ಎಡ್ಜ್​​​ಬಾಸ್ಟನ್​​​ನಲ್ಲಿ ಬಾಲ್ ಬದಲಿಗೆ ಬ್ಯಾಟ್​ ಹಿಡಿದ ಸಿರಾಜ್
  • ಮೊಹಮ್ಮದ್ ಸಿರಾಜ್ ಸ್ಪೆಷಲ್​ ಬ್ಯಾಟಿಂಗ್ ಪ್ರಾಕ್ಟೀಸ್​

ಲೀಡ್ಸ್​ ಟೆಸ್ಟ್​ ಮುಗಿದಿದ್ದಾಯ್ತ. 2ನೇ ಟೆಸ್ಟ್​ ಪಂದ್ಯಕ್ಕೆ ಟೀಮ್ ಇಂಡಿಯಾ ಸಮರಾಭ್ಯಾವೂ ಆರಂಭಿಸಿದ್ದಾಯ್ತು. ಟೀಮ್ ಇಂಡಿಯಾದ ಬ್ಯಾಟಿಂಗ್ ಕೊಲ್ಯಾಪ್ಸ್, ಟೀಮ್ ಮ್ಯಾನೇಜ್​ಮೆಂಟ್​ಗೆ ಮಾತ್ರವಲ್ಲ. ಕ್ರಿಕೆಟ್ ಅಭಿಮಾನಿಗಳ ಕನಸಲ್ಲೂ ಬೆಚ್ಚಿ ಬೀಳಿಸುತ್ತೆ.

ಬ್ಯಾಟಿಂಗ್ ವೈಫಲ್ಯದ ಬೆನ್ನಲ್ಲೇ ಜ್ಞಾನೋದಯ

ಲೀಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಆಕ್ಷರಶಃ ಗೆಲ್ಲೋ ಚಾನ್ಸ್​ ಇತ್ತು. ಆ ಸುವರ್ಣಾವಕಾಶ ಕೈತಪ್ಪಲು ಕಾರಣ ಕ್ಯಾಚ್ ಡ್ರಾಪ್ ಮಾತ್ರವೇ ಅಲ್ಲ. ಟೀಮ್ ಇಂಡಿಯಾದ ಮಿಡಲ್ ಆರ್ಡರ್​, ಲೋವರ್ ಆರ್ಡರ್​ ಬ್ಯಾಟಿಂಗ್ ಕೊಲ್ಯಾಪ್ಸ್ ಕೂಡ ಒಂದು.
ಮೊದಲ ಇನ್ನಿಂಗ್ಸ್​ನಲ್ಲಿ 41 ರನ್​ ಅಂತರಕ್ಕೆ 7 ವಿಕೆಟ್, 2ನೇ ಇನ್ನಿಂಗ್ಸ್​ನಲ್ಲಿ 31 ರನ್ ಅಂತರಕ್ಕೆ 6 ವಿಕೆಟ್ ಕಳೆದುಕೊಳ್ತು. ಪರಿಣಾಮ ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಎಡವಿ ಸೋಲೋಪ್ಪಿಕೊಳ್ಳಬೇಕಾಯ್ತು. ಈ ಸೋಲಿನ ಬಳಿಕ ಟೀಮ್ ಇಂಡಿಯಾಗೆ ಜ್ಞಾನೋದಯವಾಗಿದೆ.

ಇದನ್ನೂ ಓದಿ: ಸಾಲು ಸಾಲು ಸೋಲು.. ಹೆಡ್ ಕೋಚ್​ ಗೌತಮ್ ಗಂಭೀರ್​ ಸಹಾಯಕ ಸಿಬ್ಬಂದಿ ಏನ್​​ ಮಾಡ್ತಿದ್ದಾರೆ?

ಎಡ್ಜ್ ಬಾಸ್ಟನ್​​​ನಲ್ಲಿ ಸಿರಾಜ್ ಬ್ಯಾಟಿಂಗ್ ಅಭ್ಯಾಸ

ಎಡ್ಜ್​ ಬಾಸ್ಟನ್​​ ಟೆಸ್ಟ್​ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಈ ನಿಟ್ಟಿನಲ್ಲಿ ಆಟಗಾರರು ಎಲ್ಲಾ ಅಭ್ಯಾಸದ ಅಖಾಡಕ್ಕಿಳಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್​ ಮಾತ್ರ, ಬಾಲ್​ ಬದಲಿಗೆ ಬ್ಯಾಟ್​ ಹಿಡಿದು ಬ್ಯಾಟಿಂಗ್ ಅಭ್ಯಾಸದತ್ತ ದೃಷ್ಟಿ ನೆಟ್ಟಿದ್ದಾರೆ.

ಬೌನ್ಸರ್​ಗಳ ಮೇಲೆ ಮೊಹಮ್ಮದ್​ ಸಿರಾಜ್ ದೃಷ್ಟಿ

ಬ್ಯಾಟ್​ ಹಿಡಿದು ಅಭ್ಯಾಸ ನಡೆಸ್ತಿದ್ದ ಸಿರಾಜ್​ಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಸಹಾಯಕ ಕೋಚ್ ರಿಯಾನ್ ಟೆನ್ ಡೆಸ್ಕೋಟ್​ ಸಾಥ್ ನೀಡಿದ್ರು. ಪ್ರಮುಖವಾಗಿ ಬೌನ್ಸರ್​ ಎಸೆತಗಳ ಮೇಲೆಯೇ ಫೋಕಸ್ ಮಾಡಿದರು. ಇಂಗ್ಲೆಂಡ್ ಕಂಡೀಷನ್ಸ್​ಗೆ ಹೊಂದಿಕೊಳ್ಳುವ ನಿಟ್ಟಿನಲ್ಲೇ ಅಭ್ಯಾಸ ನಡೆಸಿದ್ದಾರೆ.

ಸ್ಪೆಷಲ್ ಪ್ರಾಕ್ಟೀಸ್​.. ಸಿತಾಂಶು ಕೊಟಕ್ ಟಿಪ್ಸ್​

ಅಭ್ಯಾಸದ ವೇಳೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಮಹತ್ವದ ಟಿಪ್ಸ್ ನೀಡಿದ್ರು. ಪ್ರಮುಖವಾಗಿ ಬಾಲ್​ ಡಿಫೆನ್ಸ್ ಜೊತೆಗೆ ದೇಹದತ್ತ ಮುನ್ನುಗ್ಗಿಬರುವ ಚೆಂಡುಗಳನ್ನು ಎದುರಿಸುವ ಕುರಿತು ಮಹತ್ವದ ಸಲಹೆ ನೀಡಿದ್ರು. ನಂತರ ಸಿರಾಜ್ ದೇಹದತ್ತಲೇ ಚೆಂಡನ್ನು ಎಸೆಯುವ ಮೂಲಕ ಸ್ಪೆಷಲ್ ಟ್ರೈನಿಂಗ್ ನೀಡಿದ್ರು. ಆ ಮೂಲಕ 2ನೇ ಟೆಸ್ಟ್​ನಲ್ಲಿ ಬ್ಯಾಟ್​ನಿಂದ ಕಾಣಿಕೆ ನೀಡುವ ನಿಟ್ಟಿನಲ್ಲಿ ಸಿರಾಜ್ ಸಜ್ಜಾಗ್ತಿದ್ದಾರೆ.

ಇದನ್ನೂ ಓದಿ: 27 ಶತಕ, 31 ಅರ್ಧಶತಕ.. ಅವಕಾಶಕ್ಕಾಗಿ ಕಾಯುತ್ತಿರೋ ಯಂಗ್ ಬ್ಯಾಟರ್ ಅಭಿಮನ್ಯು!

ಸ್ಪೆಷಲ್ ಟ್ರೈನಿಂಗ್ ಹಿಂದಿದೆ ಮಾಸ್ಟರ್ ಪ್ಲಾನ್

ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಅಭ್ಯಾಸದ ಹಿಂದೆ ಮಾಸ್ಟರ್ ಪ್ಲಾನ್ ಅಡಗಿದೆ. ಯಾಕಂದ್ರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಟೈಲೆಂಡರ್​​ಗಳ ಆಟ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತೆ. ಕನಿಷ್ಠ 20ರಿಂದ 30 ಎಸೆತ ಎದುರಿಸಿ, 10 ರನ್ ಗಳಿಸಿದ್ರೆ ಪಂದ್ಯದ ಫಲಿತಾಂಶವೇ ಬದಲಾಗುತ್ತೆ. ಅಷ್ಟೇ ಅಲ್ಲ.! ಮತ್ತೊಂದು ಎಂಡ್​ನಲ್ಲಿ ಬ್ಯಾಟರ್​​ ರನ್ ಗಳಿಸಲು ಸಹಾಯವಾಗುತ್ತೆ. ಆದ್ರೆ, ಮೊದಲ ಟೆಸ್ಟ್​ನಲ್ಲಿ ಇದೆಲ್ಲವೂ ಹುಸಿಯಾಗಿತ್ತು. ಹೀಗಾಗಿ 2ನೇ ಟೆಸ್ಟ್​ನಲ್ಲಿ ಪುನರಾವರ್ತನೆ ಆಗಬಾರದು ಎಂಬ ಕಾರಣಕ್ಕೆ ಈ ಸ್ಪೆಷಲ್ ಪ್ರ್ಯಾಕ್ಟೀಸ್ ನಡೆಸಲಾಗ್ತಿದೆ.

ಇದನ್ನೂ ಓದಿ: ಬ್ಯುಸಿನೆಸ್​​ ಲೋಕಕ್ಕೆ ಕೊಹ್ಲಿ ಗ್ರ್ಯಾಂಡ್​​​ ಎಂಟ್ರಿ.. 40 ಕೋಟಿಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment