newsfirstkannada.com

Super Six: ಅಖಾಡಕ್ಕೆ ಧುಮುಕಿದ ಪಂತ್​, ಅಭ್ಯಾಸ ಶುರು.. ಹೊಸ ಲುಕ್​ನಲ್ಲಿ ಇಶಾನ್​ ಕಿಶನ್​

Share :

Published August 17, 2023 at 1:16pm

    ಬ್ಯಾಟಿಂಗ್​ ಪ್ರಾಕ್ಟೀಸ್ ನಡೆಸಿದ ರಿಷಬ್​ ಪಂತ್​

    ವಿಶ್ವಕಪ್ ಟೂರ್ನಿ ಅಕ್ಟೋಬರ್​​ 5 ರಿಂದ ಆರಂಭ

    ನಿವೃತ್ತಿ ಹಿಂಪಡೆದ ಸ್ಟಾರ್​ ಆಲ್​ರೌಂಡರ್​ ಬೆನ್​ಸ್ಟೋಕ್ಸ್​​​​

ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

ಐರ್ಲೆಂಡ್​​ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ಐರಿಶ್​ ದೇಶಕ್ಕೆ ಕಾಲಿಟ್ಟ ದಿನವೇ ಅಭ್ಯಾಸ ಆರಂಭಿಸಿದ್ದು, ಬಿಸಿಸಿಐ ಪೋಟೋ, ವಿಡಿಯೋಗಳನ್ನ ಶೇರ್​​ ಮಾಡಿದೆ. ಜಸ್​ಪ್ರೀತ್ ಬೂಮ್ರಾ ಪಡೆ​ ನಿನ್ನೆಯಷ್ಟೇ ಡಬ್ಲಿನ್​​ ತಲುಪಿತ್ತು. ಆಗಸ್ಟ್​ 18 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇಂಜುರಿಯಿಂದ ಗುಣಮುಖರಾಗಿ ತಂಡಕ್ಕೆ ಮರಳಿರುವ ಜಸ್​​ಪ್ರೀತ್ ಬುಮ್ರಾ ನಾಯಕರಾಗಿದ್ದು, ಹೊಸ ಸವಾಲನ್ನ ಎದುರಿಸಲು ಸಜ್ಜಾಗಿದ್ದಾರೆ.

ಪಂತ್ ಬ್ಯಾಟಿಂಗ್ ಅಭ್ಯಾಸ​​.. ಫ್ಯಾನ್ಸ್​​ ಫುಲ್ ಖುಷ್​​..!

ಏಕದಿನ ವಿಶ್ವಕಪ್ ಸಮೀಪಿಸಿರುವ ಈ ಹೊತ್ತಿನಲ್ಲಿ ಟೀಮ್ ಇಂಡಿಯಾಗೆ ಶುಭ ಸುದ್ದಿ ಕೇಳಿ ಬಂದಿದೆ. ಗಂಭೀರ ಕಾರು ಅಪಘಾತಕ್ಕೊಳಗಾಗಿದ್ದ ವಿಕೆಟ್​ ಕೀಪರ್ ರಿಷಬ್​ ಪಂತ್​​ ಕೊನೆಗೂ ಅಖಾಡಕ್ಕೆ ಧುಮುಕಿದ್ದಾರೆ. ವಿಜಯನಗರದ JSW ಸ್ಪೋರ್ಟ್ಸ್ ಗ್ರೌಂಡ್​​ನಲ್ಲಿ ಮೊದಲ ಭಾರಿ ಬ್ಯಾಟಿಂಗ್​ ಪ್ರಾಕ್ಟೀಸ್ ನಡೆಸಿದ್ದಾರೆ. 33 ಸೆಕೆಂಡುಗಳ ವಿಡಿಯೋದಲ್ಲಿ ಪಂತ್​ ಪ್ಯಾಡ್ ಕಟ್ಟಿ ಅಂಗಳ ಪ್ರವೇಶಿಸಿದ್ದು ರಕ್ಷಣಾತ್ಮಕ ಆಟದ ಜೊತೆ ದೊಡ್ಡ ಹೊಡೆತಗಳನ್ನ ಬಾರಿಸಿದ್ದಾರೆ. ಸದ್ಯ ಇಂಜುರಿಯಿಂದ ಗುಣಮುಖರಾಗುತ್ತಿರುವ ಮ್ಯಾಚ್​ ವಿನ್ನರ್​ ಮುಂದಿನ ವರ್ಷ ಟೀಮ್ ಇಂಡಿಯಾಗೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಹೊಸ ಹೇರ್​​ಸ್ಟೈಲ್​ನಲ್ಲಿ ಇಶಾನ್ ಕಿಶನ್​​​​​ ಶೈನಿಂಗ್​​.!

ಸರಣಿಯಿಂದ ಸರಣಿಗೆ ಟೀಮ್ ಇಂಡಿಯಾದಲ್ಲಿ ಹೇರ್​ಸ್ಟೈಲ್ ಬದಲಿಸಿಕೊಳ್ಳುವ ಟ್ರೆಂಡ್​ ಶುರುವಾಗಿದೆ. ವೆಸ್ಟ್​ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ವಿಕೆಟ್ ಕೀಪರ್​ ಇಶಾನ್ ಕಿಶನ್​ ನಯಾ ಹೇರ್​ಸ್ಟೈಲ್​​ ಮಾಡಿಸಿಕೊಂಡಿದ್ದಾರೆ. ಖ್ಯಾತ ಕೇಶ ವಿನ್ಯಾಸಕಾರ ಅಲೀಮ್​ ಹಕೀಮ್​​​ ಅವರು ಕಿಶನ್​ಗೆ ಹೊಸ ಟಚ್​ ನೀಡಿದ್ದಾರೆ. ಈ ವಿಡಿಯೋವನ್ನ ಇಶಾನ್ ಕಿಶನ್​​ ಇನ್​​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಧೋನಿ ಫಾರ್ಮ್ಹೌಸ್​​ನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ.!

ಆಗಸ್ಟ್​​ 15 ರಂದು ಇಡೀ ದೇಶ 77ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ಹಾಗೂ ಗೌರವ ಲೆಫ್ಟಿನಂಟ್​ ಕರ್ನಲ್​ ಆಗಿರುವ ಎಂ,ಎಸ್ ಧೋನಿ ಕೂಡ ಸಂಭ್ರಮದಿಂದ ಸ್ವಾತಂತ್ರ ದಿನವನ್ನ ಆಚರಿಸಿದ್ದಾರೆ. ಧೋನಿಯ ನೆಲೆಸಿರುವ ರಾಂಚಿ ಫಾರ್ಮ್​ಹೌಸ್​​ನಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸಲಾಗಿದೆ. ಈ ವಿಡಿಯೋ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮಾಹಿ ದೇಶಾಭಿಮಾನಕ್ಕೆ ಬಹುಪರಾಕ್ ಎಂದಿದ್ದಾರೆ.

ತಾಜ್​ಮಹಲ್ ತಲುಪಿದ ಏಕದಿನ ವಿಶ್ವಕಪ್​ ಟ್ರೋಫಿ

ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಆರಂಭಕ್ಕೆ 50 ದಿನಗಳಷ್ಟೇ ಬಾಕಿ ಉಳಿದಿದೆ. ಐಕಾನಿಕ್​​ ಐಸಿಸಿ ವಿಶ್ವಕಪ್ ಟ್ರೋಫಿ ಉತ್ತರಪ್ರದೇಶದ ತಾಜ್​ಮಹಲ್​​ಗೆ ಬಂದಿಳಿದಿದೆ. ವಿಶ್ವ ಪ್ರಸಿದ್ಧ ಆಗ್ರಾದ ತಾಜ್​​​ಮಹಲ್​​​ ಎದುರು ಟ್ರೋಫಿ ಇಟ್ಟಿರೋ ವಿಡಿಯೋ ವೈರಲ್ ಆಗುತ್ತಿದೆ. ಜೂನ್​​ 27 ರಿಂದ ವಿಶ್ವಕಪ್ ಟ್ರೋಫಿ ಟೂರ್​ ಶುರುವಾಗಿದ್ದು, ಈಗಾಗಲೇ 18 ದೇಶಗಳಿಗೆ ತೆರಳಿ ಕೊನೆಯದಾಗಿ ಆತಿಥೇಯ ದೇಶ ಭಾರತಕ್ಕೆ ಬಂದಿಳಿದಿದೆ. ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಅಕ್ಟೋಬರ್​​ 5 ರಿಂದ ಆರಂಭಗೊಳ್ಳಲಿದೆ.

ನಿವೃತ್ತಿ ಹಿಂಪಡೆದ ಸ್ಟೋಕ್ಸ್​​​.. ಏಕದಿನ ತಂಡಕ್ಕೆ ಕಮ್​ಬ್ಯಾಕ್​​

ಕಳೆದ ಕೆಲ ದಿನಗಳಿಂದ ಸ್ಟಾರ್ ಆಲ್​ರೌಂಡರ್​ ಬೆನ್​ಸ್ಟೋಕ್ಸ್​​​​ ಇಂಗ್ಲೆಂಡ್​ ಏಕದಿನ ತಂಡಕ್ಕೆ ಮತ್ತೆ ಮರಳಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿತ್ತು. ಆ ಸುದ್ದಿ ಕೊನೆಗೂ ನಿಜವಾಗಿದೆ. ನಿವೃತ್ತಿ ವಾಪಾಸ್​ ಪಡೆದಿರುವ ಬೆನ್ ಸ್ಟೋಕ್ಸ್​, ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದ್ರೊಂದಿಗೆ ಇಂಗ್ಲೆಂಡ್​ ಬ್ಯಾಟರ್ 2023ರ ಏಕದಿನ ವಿಶ್ವಕಪ್ ಆಡುವುದು ಬಹುತೇಕ ಖಚಿತವಾಗಿದೆ. ಬೆನ್ ಸ್ಟೋಕ್ಸ್​ ಕಳೆದ ವರ್ಷ ಏಕದಿನ ಮಾದರಿಗೆ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ, ಟೆಸ್ಟ್​ ಹಾಗೂ ಟಿ20 ತಂಡದಲ್ಲಿ ಮುಂದುವರಿಯೋದಾಗಿ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Super Six: ಅಖಾಡಕ್ಕೆ ಧುಮುಕಿದ ಪಂತ್​, ಅಭ್ಯಾಸ ಶುರು.. ಹೊಸ ಲುಕ್​ನಲ್ಲಿ ಇಶಾನ್​ ಕಿಶನ್​

https://newsfirstlive.com/wp-content/uploads/2023/08/Ishan-Kishan-1.jpg

Load More