/newsfirstlive-kannada/media/post_attachments/wp-content/uploads/2024/10/Axar-Patel.jpg)
ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಮನೆಯಲ್ಲಿ ಸಂಭ್ರಮವೋ. ಸಂಭ್ರಮ. ಮನೆ ಹಾಗೂ ಮನೆಮಂದಿಯ ಮನದಲ್ಲಿ ಸಂಭ್ರಮ, ಸಂತೋಷವೇ ಮನೆ ಮಾಡಿದೆ. ಹೊಸ ಅತಿಥಿಯ ಆಗಮನದ ನಿರೀಕ್ಷೆ ಎಲ್ಲರಲ್ಲೂ ಹೆಚ್ಚಾಗಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ವಿಶ್ರಾಂತಿಗೆ ಜಾರಿದ್ದಾರೆ. ಸಿಕ್ಕಿರುವ ಬಿಡುವಿನಲ್ಲಿ ಫಾರಿನ್ ಟ್ರಿಪ್ಗಳನ್ನ ಮಾಡ್ತಾ ಏಂಜಾಯ್ ಮಾಡ್ತಿದ್ದಾರೆ. ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಲಂಡನ್ನಲ್ಲಿದ್ರೆ, ರೋಹಿತ್ ಶರ್ಮಾ ಅಬುಧಾಬಿ ಟೂರ್ನಲ್ಲಿದ್ದಾರೆ. ಜಸ್ಪ್ರಿತ್ ಬೂಮ್ರಾ ದುಬೈನಲ್ಲಿದ್ದಾರೆ. ಇನ್ನು ಕೆಲ ಆಟಗಾರರು ತವರಿನಲ್ಲೇ ಬೀಡು ಬಿಟ್ಟಿದ್ದಾರೆ. ಈ ಗ್ಯಾಪ್ನಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ತಾವೇ ಅಡುಗೆ ಮಾಡ್ತಾರೆ ಕೊಹ್ಲಿ, ಅನುಷ್ಕಾ.. ಸ್ಟಾರ್ ಸೆಲೆಬ್ರಿಟಿ ಕಾಳಜಿ ಹೆಂಗಿದೆ ಗೊತ್ತಾ?
ಅಕ್ಷರ್ ಪಟೇಲ್ ಮನೆಯಲ್ಲಿ ಸಂಭ್ರಮ
ಆಲ್ರೌಂಡರ್ ಅಕ್ಷರ್ ಪಟೇಲ್ ಮನೆಯಲ್ಲಿ ಸಂಭ್ರಮದ ಮನೆ ಮಾಡಿದೆ. ಹೊಸ ಅತಿಥಿಯ ಆಗಮನದ ನಿರೀಕ್ಷೆ ಕುಟುಂಬಸ್ಥರಲ್ಲಿ ಮನೆ ಮಾಡಿದೆ. ಅಕ್ಷರ್ ಪಟೇಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಪತ್ನಿ ಮೇಹಾ ಪಟೇಲ್ಗೆ 7 ತಿಂಗಳುಗಳು ತುಂಬುತ್ತಾ ಬಂದಿದೆ. ಹೀಗಾಗಿ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನ ಮಾಡಿದ್ದಾರೆ.
ಸಿನಿಮಾಗೂ ಕಡಿಮೆಯಿಲ್ಲ ಅಕ್ಷರ್ ಲವ್ ಸ್ಟೋರಿ
ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಅಕ್ಷರ್ ಪಟೇಲ್ ಹಾಗೂ ಮೇಹಾ ಪಟೇಲ್ ಲವ್ ಸ್ಟೋರಿ, ಯಾವ ಸಿನಿಮಾಗೂ ಕಡಿಮೆಯಿಲ್ಲ. ಅಂದ್ಹಾಗೆ ಅಕ್ಷರ್ ಲವ್ ಕಹಾನಿ ಒಂದೆರಡು ವರ್ಷದ್ದಲ್ಲ. ಸುದೀರ್ಘ 10 ವರ್ಷಗಳ ಪ್ರೇಮದ ಪಯಣ ಅಕ್ಷರ್ದ್ದು. ಅದು ಅಕ್ಷರ್ ಪಟೇಲ್ ಅಂಡರ್ 19 ಕ್ರಿಕೆಟ್ ಆಡ್ತಿದ್ದ ದಿನಗಳು. ಆ ಸಮಯದಲ್ಲಿ ಗೆಳೆಯರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ, ಇಬ್ಬರ ಮುಖಾಮುಖಿಯಾಗುತ್ತೆ. ಆ ಭೇಟಿಗೂ ಮುನ್ನ ಅಕ್ಷರ್ ಪಟೇಲ್ ಅಂದು ನಡೆದ ಪಂದ್ಯದಲ್ಲಿ ಶತಕ ಸಿಡಿಸಿದ್ರು. ಹೀಗಾಗಿ ಗೆಳೆಯರೆಲ್ಲರೂ ಚಾಕೋಲೆಟ್ಗೆ ಬೇಡಿಕೆ ಇಟ್ಟಿದ್ರಂತೆ. ಅದು ಅಕ್ಷರ್ ಬಳಿ ಚಾಕೋಲೆಟ್ಗೂ ಹಣವಿಲ್ಲದ ಕಾಲ. ಆಗ ಸಾಲ ಮಾಡಿ ಅಕ್ಷರ್ ಎಲ್ಲರಿಗೂ ಚಾಕೋಲೆಟ್ ಕೊಡಿಸಿದ್ರಂತೆ. ಅಲ್ಲಿಂದು ಶುರುವಾಗಿದ್ದು ಗೆಳೆತನ.
ಚಾಕೊಲೇಟ್ನಿಂದ ಆರಂಭವಾದ ಅಕ್ಷರ್-ಮೇಹಾ ಗೆಳೆತನ, ನಂಬರ್ ಎಕ್ಸ್ಚೇಂಜ್ ಆಗಿ ಮೇಸೆಜ್ವರೆಗೂ ತಲುಪಿತ್ತು. ಮುಖತಃ ಭೇಟಿಯಾದಾಗ ಮಾತ್ರ ಅಕ್ಷರ್ ಮಾತೇ ಆಡ್ತಿರಲಿಲ್ವಂತೆ. ಒಳಗೊಳಗೆ ಅಕ್ಷರ್ಗೆ ಶುರುವಾಗಿತ್ತು ಪ್ರೇಮ. ಇತ್ತ ಮೇಹಾ ಕೂಡ ಪ್ರೀತಿಯಲ್ಲಿ ಬಿದ್ದಿದ್ರು. ಬರೋಬ್ಬರಿ 10 ವರ್ಷಗಳ ಕಾಲ ಇಬ್ಬರೂ ತಮ್ಮ ಬಾಂಧವ್ಯಕ್ಕೆ ಗೆಳೆತನದ ಲೇಬಲ್ ಅಂಟಿಸಿಕೊಂಡೆ ಇದ್ರು.
ಹುಟ್ಟುಹಬ್ಬದ ದಿನವೇ ಲವ್ ಪ್ರಪೋಸ್
ಆರಂಭದಿಂದಲೇ ಮೇಹಾ ಪಟೇಲ್ ಮೇಲೆ ಪ್ರೀತಿ ಶುರುವಾಗಿದ್ದರೂ ಅಕ್ಷರ್ ಪಟೇಲ್ ಎಲ್ಲಿಯೂ ಕೂಡ ಅದನ್ನು ವ್ಯಕ್ತಪಡಿಸಿರಲಿಲ್ಲ. ಅಂತಿಮವಾಗಿ 2022ರ ಜನವರಿ 20ರಂದು 28ನೇ ವರ್ಷಕ್ಕೆ ಕಾಲಿಟ್ಟ ಅಕ್ಷರ್, ಬರ್ತ್ ಡೇ ಪಾರ್ಟಿಯಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಅಕ್ಷರ್ ಪ್ರಪೋಸಲ್ನ ಮೇಹಾ ಕ್ಷಣವೂ ಯೋಚಿಸದೇ ಒಪ್ಪಿಕೊಂಡಿದ್ರು.
2023ರಲ್ಲಿ ವಡೋದರಾದಲ್ಲಿ ಅದ್ಧೂರಿ ವಿವಾಹ
ಕಳೆದ ವರ್ಷ ಜನವರಿಯಲ್ಲಿ ಅಕ್ಷರ್ ಹಾಗೂ ಮೇಹಾ ವಡೋದರಾದಲ್ಲಿ ಹಸೆಮಣೆ ಏರಿದ್ರು. ಅದ್ಧೂರಿ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು, ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ ಸಾಕ್ಷಿಯಾಗಿದ್ರು. ಅಕ್ಷರ್ ಪಟೇಲ್-ಮೇಹಾ ಪಟೇಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆ-ಮನದಲ್ಲಿ ಸಂಭ್ರಮ, ಸಂತಸ, ಕುತೂಹಲ ಎಲ್ಲವೂ ಇದೆ. ತಾಯಿ-ಮಗುವಿನ ಆರೋಗ್ಯ ಚನ್ನಾಗಿರಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ.
ಇದನ್ನೂ ಓದಿ:24 ಬಾಲ್ ಎಸೆದು ಕೇವಲ 14 ರನ್ ಕೊಟ್ಟ ಅಕ್ಸರ್ ಪಟೇಲ್.. ಅಭಿಮಾನಿಗಳ ಮನಗೆದ್ದ ಯಂಗ್ ಇಂಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್