Advertisment

ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..!

author-image
Ganesh
Updated On
ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..!
Advertisment
  • ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಡೆವಿಡ್ ಜಾನ್ಸನ್ ನಿಧನ
  • ಕನ್ನಡಿಗನ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು, ದಿಗ್ಗಜರು
  • ಡೆವಿಡ್ ಜಾನ್ಸನ್​ಗೆ ಮುಳುವಾಗಿದ್ದು ಎಲ್ಲಿ? ರೋಚಕ ಜರ್ನಿ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಕನ್ನಡಿಗ ಡೆವಿಡ್ ಜಾನ್ಸನ್ ನಿಧನರಾಗಿದ್ದಾರೆ. ಅವರ ಅಗಲಿಗೆ ಕ್ರಿಕೆಟ್ ಲೋಕ ಕಂಬನಿ ಮಿಡಿಯುತ್ತಿದೆ. ಒಂದು ಕಾಲದಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಡೆವಿಡ್ ಜಾನ್ಸನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಕ್ರಿಕೆಟ್ ತಾರೆಯರು ಮಾತನಾಡಿಕೊಳ್ತಿದ್ದಾರೆ. ಈ ಹಿಂದೆ ಡೆವಿಡ್ ಜಾನ್ಸನ್ ಅವರನ್ನು ನ್ಯೂಸ್​ಫಸ್ಟ್ ಸಂದರ್ಶನ ಮಾಡಿತ್ತು. ವಿಶೇಷ ಸಂದರ್ಶನದಲ್ಲಿ ತಮ್ಮ ಕ್ರಿಕೆಟ್​ ಬದುಕಿನ ರೋಚಕ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

Advertisment

ಇದೇ ಸಂದರ್ಭದಲ್ಲಿ ತಮ್ಮ ಕ್ರಿಕೆಟ್ ಬದುಕಿಗೆ ದೊಡ್ಡ ಹೊಡೆತ ಬೀಳಲು ಕಾರಣವನ್ನೂ ತಿಳಿಸಿದ್ದರು. ಒಂದು ಟೈಮ್​​ನಲ್ಲಿ ಟೀಂ ಇಂಡಿಯಾದಲ್ಲಿ ಕರ್ನಾಟಕದ 7 ಬೌಲರ್​​ಗಳು ಆಡುತ್ತಿದ್ದರು.. ಇದೇ ಡೆವಿಡ್ ಜಾನ್ಸನ್ ಅವರ ಕ್ರಿಕೆಟ್ ಕರಿಯರ್​​ಗೆ ಹಿನ್ನಡೆ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು.. ‘ಖಂಡಿತ ಹೌದು’ ಎನ್ನುತ್ತೇನೆ. ಅನಿಲ್ ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಜೋಶಿ. ದ್ರಾವಿಡ್ ಬ್ಯಾಟ್ಸ್​ಮನ್ ಆಗಿದ್ದರು. ಜೋಶಿ ಆಗಾಗಲೇ ಟೀಂ ಇಂಡಿಯಾದಲ್ಲಿ ಹೆಸರು ಮಾಡಿಕೊಂಡಿದ್ದರು.

ಇದನ್ನೂ ಓದಿ:ಹಾಸನ To ಟೀಂ ಇಂಡಿಯಾ.. ಡೇವಿಡ್​ ಜಾನ್ಸನ್​ ಆತ್ಮಹತ್ಯೆ ದಾರಿ ಹಿಡಿದಿದ್ದೇಕೆ?

publive-image

ಹೊಸಬರು ಯಾರೆಂದರೆ ನಾನು ಮತ್ತು ದೊಡ್ಡ ಗಣೇಶ್. ಇದೇ ಕಾರಣಕ್ಕೆ ಭಾರತ ತಂಡದ ಬಗ್ಗೆ ಬೇಡದ್ದ ಮಾತುಗಳು ಶುರುವಾದವು. ಇದು ಸೌಥ್​ ಝೋನ್ ಟೀಂ. ಇಂಡಿಯಾ ಟೀಂ ಅಲ್ಲ ಎನ್ನುತ್ತಿದ್ದರು. ಯಾಕೆಂದರೆ ನಾವು 7 ಮಂದಿ ಕರ್ನಾಟಕದಿಂದ ಇದ್ದೇವು. ಜೊತೆಗೆ ಹೈದ್ರಾಬಾದ್​ನಿಂದ ಇಬ್ಬರು ಆಟಗಾರರಿದ್ದರು. ಲಕ್ಷ್ಮಣ್ ಮತ್ತು ಮೊಹ್ಮದ್ ಅಜರುದ್ದೀನ್​ ಹೈದ್ರಾಬಾದ್​ನವರಾಗಿದ್ದರು.

Advertisment

ಹೀಗಾಗಿ ಇದೊಂದು ದಕ್ಷಿಣ ವಲಯದ ಆಟಗಾರರು ಎಂದು ಮಾತಾಡಿಕೊಳ್ಳಲು ಶುರುಮಾಡಿದರು. ಈ ಟೀಕೆಗಳು ನನ್ನ ಕ್ರಿಕೆಟ್​ ಕರಿಯರ್​​ಗೆ ಹೊಡೆತ ಬೀಳಲು ಶುರುವಾಯ್ತು. ನನಗೆ ಗೊತ್ತಿತ್ತು, ಸೆಟ್ ಆಗಿರುವ ಆಟಗಾರರ ತೆಗೆಯಲು ಆಗುತ್ತಿರಲಿಲ್ಲ. ಹೊಸ ಆಟಗಾರ ಅಂದರೆ ನಾನು ಮತ್ತು ಗಣೇಶ್. ನನಗೂ ಇನ್ನೂ ಒಂದು ಐದು ಪಂದ್ಯಗಳನ್ನು ಜಾಸ್ತಿ ಆಡಿಸಿದ್ದರೆ ಖಂಡಿತ ನಾನು ಕೂಡ ಐದು ವಿಕೆಟ್ ಜಾಸ್ತಿ ಪಡೆಯುತ್ತಿದ್ದೆ. ಆವಾಗ ನನ್ನನ್ನು ತಂಡದಿಂದ ತೆಗೆಯೋದು ಕಷ್ಟವಾಗುತ್ತಿತ್ತು ಎಂದು ಬೇಸರವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment