newsfirstkannada.com

VIDEO: ’ಅದು ಕನ್ನಡ್​ ಅಲ್ಲ, ಕನ್ನಡ’- ಕನ್ನಡವನ್ನು ತಪ್ಪಾಗಿ ಬಳಸಿದವರಿಗೆ KL ರಾಹುಲ್ ಕನ್ನಡ ಪಾಠ

Share :

Published February 23, 2024 at 8:29pm

  ಅದು ಕನ್ನಡ್​ ಅಲ್ಲ, ಕನ್ನಡ ಎಂದ ಕೆ.ಎಲ್​ ರಾಹುಲ್​​

  ಕನ್ನಡ್​ ಎಂದವರಿಗೆ ಕೆ.ಎಲ್​ ರಾಹುಲ್​ ಫುಲ್​ ಕ್ಲಾಸ್​​​!

  ಮತ್ತೊಮ್ಮೆ ಕನ್ನಡಿಗರ ಮನಸ್ಸು ಗೆದ್ದ ಸ್ಟಾರ್​ ಬ್ಯಾಟರ್​​

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​​ಮನ್​​ ಕನ್ನಡಿಗ ಕೆ.ಎಲ್​​ ರಾಹುಲ್​ ಕನ್ನಡಿಗರ ಮನ ಗೆದ್ದಿದ್ದಿದ್ದಾರೆ. ಕನ್ನಡವನ್ನು ತಪ್ಪಾಗಿ ಹೇಳಿದವರಿಗೆ ಮುಲಾಜಿಲ್ಲದೆ ಅದು ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕನ್ನಡವನ್ನು ಹೇಗೆ ಸ್ಪಷ್ಟವಾಗಿ ಉಚ್ಛರಿಸುವುದು ಎಂದು ಹೇಳಿಕೊಟ್ಟಿದ್ದು, ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಆ್ಯಡ್​ ಶೂಟ್​ವೊಂದರಲ್ಲಿ ಕೆ.ಎಲ್​ ರಾಹುಲ್​ ಸ್ಕ್ರಿಪ್ಟ್​ ಓದುತ್ತಿದ್ದರು. ಆಗ ಡೈರೆಕ್ಷನ್​ ಡಿಪಾರ್ಟ್​ಮೆಂಟ್​ ಹುಡುಗ ‘ಕನ್ನಡ್’ ಎಂದಿದ್ದಾರೆ. ಕೂಡಲೇ ಕೆ.ಎಲ್​ ರಾಹುಲ್​​ ಅದು ಕನ್ನಡ್​​ ಅಲ್ಲ, ಕನ್ನಡ ಎಂದಿದ್ದಾರೆ. ಹಿಂದಿ ಹೇಗೆ ಹಿಂದ್​ ಆಗುವುದಿಲ್ಲವೋ ಹಾಗೇ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ ಎಂದು ಮುಖದ ಮೇಲೆ ನೇರವಾಗಿ ಹೇಳಿದ್ದಾರೆ.

ತಮಿಳು, ತೆಲುಗು ಹೆಸರನ್ನು ಸರಿಯಾಗಿ ಹೇಳುತ್ತೀರಿ. ಆದರೆ ಕನ್ನಡದ ಹೆಸರನ್ನು ಮಾತ್ರ ಸರಿಯಾಗಿ ಹೇಳುವುದಿಲ್ಲ. ಮೊದಲು ಕನ್ನಡ ಎಂದು ಹೇಳುವುದು ಕಲಿಯಿರಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಸದ್ಯ ಯಾರ ಮೊಬೈಲ್​ ವಾಟ್ಸಪ್​​ ಸ್ಟೇಟಸ್​ ನೋಡಿದ್ರೂ ಇದೇ ವಿಡಿಯೋ ರಾರಾಜಿಸುತ್ತಿದೆ. ಕನ್ನಡ ಬಗ್ಗೆ ಕೆ.ಎಲ್​ ರಾಹುಲ್​ಗಿರೋ ಅಭಿಮಾನ ಕಂಡು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ’ಅದು ಕನ್ನಡ್​ ಅಲ್ಲ, ಕನ್ನಡ’- ಕನ್ನಡವನ್ನು ತಪ್ಪಾಗಿ ಬಳಸಿದವರಿಗೆ KL ರಾಹುಲ್ ಕನ್ನಡ ಪಾಠ

https://newsfirstlive.com/wp-content/uploads/2024/01/KL-Rahul_IND.jpg

Load More