ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್​ದೀಪ್ ಯಾದವ್ ನಿಶ್ಚಿತಾರ್ಥ ಸಮಾರಂಭ.. ಹುಡುಗಿ ಯಾರು?

author-image
Bheemappa
Updated On
ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್​ದೀಪ್ ಯಾದವ್ ನಿಶ್ಚಿತಾರ್ಥ ಸಮಾರಂಭ.. ಹುಡುಗಿ ಯಾರು?
Advertisment
  • ಕುಲ್​ದೀಪ್ ಯಾದವ್ ಕೈ ಹಿಡಿಯುತ್ತಿರುವ ಯುವತಿ ಹೆಸರು?
  • ರಿಂಕು ಸಿಂಗ್ ಅವರ ನಿಶ್ಚಿತಾರ್ಥ ಸಮಾರಂಭ ಯಾವಾಗ..?
  • ಕುಲ್​ದೀಪ್ ನಿಶ್ಚಿತಾರ್ಥ ಸಮಾರಂಭದಲ್ಲಿ ರಿಂಕು, ಪ್ರಿಯಾ

ಟೀಮ್ ಇಂಡಿಯಾದ ಬ್ಯಾಟರ್​ ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲ್ಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಇದರ ಬೆನ್ನಲ್ಲೇ ಭಾರತ ತಂಡದ ಮತ್ತೊಬ್ಬ ಆಟಗಾರನ ನಿಶ್ಚಿತಾರ್ಥ ಸಮಾರಂಭ ಮುಗಿದೇ ಹೋಗಿದೆ. ಇಷ್ಟಕ್ಕೂ ಅವರು ಯಾರು ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ.

publive-image

ರಿಂಕು ಸಿಂಗ್ ಅವರ ಗೆಳೆಯ ಹಾಗೂ ಟೀಮ್ ಇಂಟಿಯಾದ ಸ್ಟಾರ್ ಸ್ಪಿನ್ನರ್ ಕುಲ್​ದೀಪ್ ಯಾದವ್ ಅವರು ತನ್ನ ಬಹುದಿನಗಳ ಗೆಳತಿ ವಂಶಿಕಾ ಅವರ ಜೊತೆ ಜೂನ್ 4 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಖಾಸಗಿ ಹೋಟೆಲ್​​ವೊಂದರಲ್ಲಿ ನಡೆದ ಎಂಗೇಜ್​ಮೆಂಟ್​ ಸಮಾರಂಭಕ್ಕೆ ಕುಟುಂಬಸ್ಥರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗಿದೆ.

ಕುಲ್​ದೀಪ್ ಯಾದವ್ ಹಾಗೂ ವಂಶಿಕಾ ಇಬ್ಬರು ಬಾಲ್ಯದಿಂದಲೂ ಸ್ನೇಹಿತರು ಆಗಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಶ್ಯಾಮ್ ನಗರದಲ್ಲಿ ಕುಟುಂಬದೊಂದಿಗೆ ವಂಶಿಕಾ ವಾಸವಾಗಿದ್ದಾರೆ. ಸ್ನೇಹಿತರು ಆಗಿದ್ದ ಇವರು ನಂತರದ ದಿನಗಳಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ವಂಶಿಕಾ ಅವರು ಎಲ್ಐಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕುಲ್​ದೀಪ್ ಯಾದವ್ ಮತ್ತು ವಂಶಿಕಾ ನಿಶ್ಚಿತಾರ್ಥ ಸಮಾರಂಭಕ್ಕೆ ರಿಂಕು ಸಿಂಗ್ ಅವರು ತನ್ನ ಭಾವಿ ಪತ್ನಿ ಸಂಸದೆ ಪ್ರಿಯಾ ಸರೋಜರನ್ನು ಕರೆದುಕೊಂಡು ಬಂದಿದ್ದರು. ಇದರಿಂದ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ ನಡುವೆ ಇದ್ದಂತಹ ಎಲ್ಲ ವದಂತಿಗಳಿಗೆ ಅಂತಿಮವಾಗಿ ತೆರೆ ಎಳೆದಂತೆ ಆಗಿದೆ. ಇನ್ನು ಇದೇ ಜೂನ್ 8 ರಂದು ರಿಂಕು ಸಿಂಗ್, ಪ್ರಿಯಾ ಸರೋಜ ಕೂಡ ನಿಶ್ಚಿತಾರ್ಥ ಸಮಾರಂಭ ಮಾಡಿಕೊಳ್ಳಲ್ಲಿದ್ದಾರೆ.

ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ

publive-image

ಜೂನ್ 29 ರಂದು ಕುಲ್​ದೀಪ್ ಯಾದವ್ ಮತ್ತು ವಂಶಿಕಾ ಅವರ ವಿವಾಹವು ನಡೆಯಬೇಕಿತ್ತು. ಆದರೆ ಮುಂಬರುವ ಇಂಗ್ಲೆಂಡ್ ಪ್ರವಾಸದ ಕಾರಣ ಮದುವೆ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ ಕುಲ್​ದೀಪ್ ಯಾದವ್ ಮತ್ತು ವಂಶಿಕಾ ಇಬ್ಬರೂ ಈ ವರ್ಷದ ಅಂತ್ಯದ ವೇಳೆಗೆ ಹಸೆಮಣೆ ಏರಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment