/newsfirstlive-kannada/media/post_attachments/wp-content/uploads/2025/01/Rinku-Singh-and-MP-Priya.jpg)
ಟೀಮ್​​ ಇಂಡಿಯಾದ ಸ್ಟಾರ್​​ ಆಲ್​ರೌಂಡರ್​​​ ರಿಂಕು ಸಿಂಗ್​​. ಇವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಂಬಿಕಸ್ಥ ಕ್ರಿಕೆಟರ್​​. 2023ರ ಐಪಿಎಲ್ ಸೀಸನ್​​ನಲ್ಲಿ ರಿಂಕು ಸಿಂಗ್ ಯಶ್ ದಯಾಳ್‌ಗೆ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸೋ ಮೂಲಕ ಗಮನ ಸೆಳೆದರು. ಇಷ್ಟೇ ಅಲ್ಲ ಅಂದು ರಾತ್ರೋರಾತ್ರಿ ಐಪಿಎಲ್​ ಸ್ಟಾರ್​ ಆಗಿ ಹೋದ್ರು.
ಇತ್ತೀಚೆಗೆ ನಡೆದ 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ರಿಂಕು ಸಿಂಗ್ ಅವರನ್ನು 13 ಕೋಟಿಗೆ ರೀಟೈನ್​ ಮಾಡಿಕೊಂಡಿದೆ. ಇವರು ಮುಂದಿನ ಸೀಸನ್​ಗೆ ಕೆಕೆಆರ್​ ಕ್ಯಾಪ್ಟನ್​ ಆದ್ರೂ ಅಚ್ಚರಿ ಇಲ್ಲ. ಇದರ ಮಧ್ಯೆ ಮತ್ತೊಂದು ವಿಚಾರಕ್ಕೆ ರಿಂಕು ಸಿಂಗ್​ ಸುದ್ದಿಯಾಗಿದ್ದಾರೆ.
SP ಪ್ರಿಯಾ ಜತೆ ರಿಂಕು ಸಿಂಗ್​ ಎಂಗೇಜ್ಮೆಂಟ್​​​
ರಿಂಕು ಸಿಂಗ್ ಹೊಸ ಇನ್ನಿಂಗ್ಸ್ ಆಡಲು ಸಜ್ಜಾಗಿದ್ದಾರೆ. ತೀರಾ ಕಡುಬಡನತದಿಂದ ಬಂದ ಇವರು ದೇಶದ ಅತಿ ಕಿರಿಯ ಸಂಸದೆ ಆಗಿರೋ ಸಮಾಜವಾದಿ ಪಕ್ಷದ ಪ್ರಿಯಾ ಸರೋಜಾ ಅವರೊಂದಿಗೆ ಎಂಗೇಜ್ಮೆಂಟ್​ ಮಾಡಿಕೊಂಡಿದ್ದಾರೆ.
ಯಾರು ಈ ಪ್ರಿಯಾ?
ಪ್ರಿಯಾ ಸರೋಜಾ ಸಮಾಜವಾದಿ ಪಕ್ಷದ ಲೋಕಸಭಾ ಸಂಸದೆ. ಈಗ ಇವರು ರಿಂಕು ಸಿಂಗ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಸಮಾಜವಾದಿ ಪಕ್ಷದ ಯುವ ನಾಯಕಿ ಪ್ರಿಯಾ ಸರೋಜಾ ಕೇವಲ 25 ವರ್ಷಕ್ಕೆ ಲೋಕಸಭಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us