/newsfirstlive-kannada/media/post_attachments/wp-content/uploads/2024/11/RINKU-SINGH.jpg)
ರಿಂಕು ಸಿಂಗ್.. ಟೀಮ್ ಇಂಡಿಯಾದಲ್ಲಿ ಸ್ಟಾರ್ ಪ್ಲೇಯರ್.. ಕಡುಕಷ್ಟದಲ್ಲೇ ಬೆಳೆದು ರಿಂಕು ಸಿಂಗ್, ಈಗ ಸಾಧನೆಯ ಸರದಾರ.. ಸವಾಲುಗಳ ಮೆಟ್ಟಿಲನ್ನೇರಿದ ಅವರು ಇವತ್ತು ಎಂಥವರೀಗೂ ಸ್ಫೂರ್ತಿ. ಇಂಥ ಸ್ಪೂರ್ತಿಯ ಚಿಲುಮೆ ರಿಂಕು ಡ್ರೀಮ್ ಹೌಸ್ ಖರೀಸಿದ್ದಾರೆ.
ಸೀಟಿನ ಮನೆ. ಒಂದು ಟಿವಿ. ಈ ಟಿವಿ ಇರುವ ಜಾಗವೇ ಮನೆಯ ಹಾಲ್. ಮನೆ ಒಂದು ಸಣ್ಣ ಬೆಡ್ ರೂಮ್. ಈ ಇಕ್ಕಟ್ಟಿನ ಸ್ಥಳವೇ ಐದು ಸದಸ್ಯರ ನಿತ್ಯ ಜೀವನ. ಮೊನ್ನೆಯ ತನಕ ಇದೇ ಹಳೇ ಮನೆಯಲ್ಲೇ ಸ್ಟಾರ್ ಕ್ರಿಕೆಟರ್ ರಿಂಕು ಸಿಂಗ್ ಮತ್ತು ಕುಟುಂಬಸ್ಥರ ವಾಸವಾಗಿತ್ತು. ಸ್ಟಾರ್ ಕ್ರಿಕೆಟರ್ ಆಗಿದ್ದರೂ ಇಂಥ ಹಳೇ ಮನೆಯಲ್ಲೇ ಜೀವನ ಸಾಗಿಸ್ತಿದ್ದ ರಿಂಕು ಸಿಂಗ್, ಈಗ ಕನಸಿನ ಮನೆ ಕಟ್ಟಿದ್ದಾರೆ.
ಕನಸಿನ ಮನೆಗೆ ರಿಂಕು ಶಿಫ್ಟ್
ಕಡುಕಷ್ಟದಲ್ಲೇ ಬದುಕು. ಬಡತನದಲ್ಲೇ ಜೀವನ ಕಳೆದ ರಿಂಕು ಸಿಂಗ್, ಈಗ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಆಗಿ ಮಿಂಚುತ್ತಿದ್ದಾರೆ. ಒಂದೊಂದು ರೂಪಾಯಿಗೂ ಕಷ್ಟಪಟ್ಟು ದುಡಿಯುತ್ತಿದ್ದ ಹೆತ್ತವರಿಗೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಮನೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಹೊಸ ಮನೆಯ ಬೀಗದ ಕೀಯನ್ನ ತಂದೆ, ತಾಯಿಗೆ ಹಸ್ತಾಂತರಿಸಿದ ರಿಂಕು ಸಿಂಗ್, ತಮ್ಮ ಕುಟುಂಬ ಸಮೇತ ಹೊಸ ಮನೆಗೆ ಕಾಲಿರಿಸಿದ್ದಾರೆ.
ಇದನ್ನೂ ಓದಿ:ರಿಂಕು ಸಿಂಗ್ ಟ್ಯಾಟೂ ಹಿಂದಿನ ಅಸಲಿ ಸತ್ಯ ಬಯಲು.. ಯಂಗ್ ಲೆಫ್ಟಿ ಬ್ಯಾಟರ್ ಹೇಳಿದ್ದು ಏನು?
ಐಷಾರಾಮಿ ಬಂಗಲೆಯ ವಿಶೇಷತೆ ಏನು?
ರಿಂಕು ಸಿಂಗ್ ಖರೀದಿಸಿರುವ ಈ ಐಷಾರಾಮಿ ಮನೆ ಅಲಿಘರ್‌ದ ಓಝೋನ್ ಸಿಟಿಯ ಗೋಲ್ಡನ್ ಎಸ್ಟೇಟ್‌ನಲ್ಲಿದೆ. ಈ ಗೋಲ್ಡನ್ ಎಸ್ಟೇಟ್ ಅಲಿಘರ್‌ನ ಅತ್ಯಂತ ದುಬಾರಿ, ಐಷಾರಾಮಿ ಸೊಸೈಟಿಗಳಲ್ಲಿ ಒಂದಾಗಿದೆ. 5000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆ ಸುಮಾರು 3.5 ಕೋಟಿ ಎಂದು ಅಂದಾಜಿಸಲಾಗಿದೆ. ರಿಂಕು ಸಿಂಗ್ ಖರೀದಿಸಿರುವ ಈ ವಿಲ್ಲಾದಲ್ಲಿ ಐಷಾರಾಮಿ ಮಲಗುವ ಕೋಣೆ, ಸ್ಟೋರ್ ರೂಂ, ಪ್ಯಾಂಟ್ರಿ, ಅಡುಗೆಮನೆ, ಡೈನಿಂಗ್, ಡ್ರಾಯಿಂಗ್ ಮತ್ತು ಲಿವಿಂಗ್ ರೂಮ್ ಜೊತೆಗೆ ಲಾಂಜ್ ಇದೆ. ಇದಲ್ಲದೇ ಪ್ರವೇಟ್ ಸ್ವಿಮ್ಮಿಂಗ್ ಫೂಲ್, ಹೋಮ್ ಥಿಯೇಟರ್ ಸೇರಿದಂತೆ ಹಲವು ಸೌಲಭ್ಯ ಹೊಂದಿದೆ.
ಹೆತ್ತವರಿಗೆ ಗ್ರೇಟ್ ಸರ್‌ಪ್ರೈಸ್..!
ರಿಂಕು ಸಿಂಗ್ ಹೆತ್ತವರಿಗೆ ಗ್ರೇಟ್ ಸರ್‌ಪ್ರೈಸ್ ನೀಡಿದ್ದಾರೆ. ತನ್ನಪ್ಪ ಯಾವ ಏರಿಯಾದಲ್ಲಿ ಮನೆ ಮನೆಗೆ ಗ್ಯಾಸ್ ಸಪ್ಲೈ ಮಾಡ್ತಿದ್ರೋ ಅದೇ ಏರಿಯಾದಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಇದು ಹೆತ್ತವರ ಸಂಭ್ರಮವನ್ನ ಡಬಲ್ ಮಾಡಿದೆ. ಮಗನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿರುವುದು ಸುಳ್ಳಲ್ಲ.
This is Rinku Singh's house. Shreyas Iyer also buys NEW apartment of 2.90cr in Mumbai.
But Iyer's apartment= 1/20th area of this house. Tier 3 city mein rehne ke apne maze haipic.twitter.com/XmNO6OePYS— Farrago Abdullah Parody (@abdullah_0mar) November 14, 2024
ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ರಿಂಕು ಸಿಂಗ್
ರಿಂಕು ಸಿಂಗ್. ಬಡ ಕುಟುಂಬದಿಂದ ಅರಳಿದ ಪ್ರತಿಭೆ. ಎಲ್‌ಪಿಜಿ ಗ್ಯಾಸ್ ವಿತರಕರಾಗಿದ್ದ ತಂದೆಗೆ ಜೀವನದ ಸಾಗಟಕ್ಕೆ ಹಣ ಹೊಂದಿಸುವುದೇ ಸವಾಲಾಗಿತ್ತು. ಕುಟುಂಬದ ಆರ್ಥಿಕ ಸಂಕಷ್ಟ ಅರಿತಿದ್ದ ರಿಂಕು ಸಿಂಗ್, ನಾನು ದೊಡ್ಡ ಕ್ರಿಕೆಟರ್ ಆಗುತ್ತೇನೆ. ನಿಮ್ಮನ್ನ ಚೆನ್ನಾಗಿ ನೋಡಿ ಕೊಳ್ಳುತ್ತೇನೆಂದು ಮಾತು ಕೊಟ್ಟಿದ್ದರು. ಆ ಮಾತಿನಂತೆಯೇ ಕ್ರಿಕೆಟರ್ ಆದ ರಿಂಕು ಸಿಂಗ್, ಅಮ್ಮನಿಗೆ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ.
ಅಂದು 10 ಲಕ್ಷ.. ಈಗ 13 ಕೋಟಿ ಒಡೆಯ
ರಿಂಕು ಸಿಂಗ್ ಜೀವನ ಇವತ್ತು ಬದಲಾಗಿದೆ ನಿಜ. ಇದರ ಹಿಂದೆ ಕಠಿಣ ಶ್ರಮ ಇದೆ. ನಿದ್ದೆ ಇಲ್ಲದ ರಾತ್ರಿಗಳು ಇವೆ. ನಿರಂತರ ಹೋರಾವೂ ಇದೆ. ಅದು ಮನೆಯವರ ಮಾತು ದಿಕ್ಕರಿಸಿ ಬ್ಯಾಟ್ ಹಿಡಿದಿದ್ದ ರಿಂಕು ಸಿಂಗ್, ಏಳುಬೀಳುಗಳಿಂದಲೇ ಇತ್ತು.
ಇದನ್ನೂ ಓದಿ:ಟೀಂ ಇಂಡಿಯಾಗೆ ಬಂತು ಆನೆಬಲ.. ಬಿಗ್ ಸ್ಟಾರ್ ತಂಡಕ್ಕೆ ಎಂಟ್ರಿ..!
2017ರಲ್ಲಿ ಜಸ್ಟ್ 10 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಸೇರಿದ್ದ ರಿಂಕು ಸಿಂಗ್, 2018ರಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾರೆ. 2022ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ರಿಂಕು, ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಅವತ್ತು ಈತನಿಗೆ ಸಿಕ್ಕ ಹಣ ಜಸ್ಟ್ 55 ಲಕ್ಷವಾಗಿತ್ತು. ಆದ್ರೀಗ ರಿಂಕು ಅದ್ಭುತ ಆಟಕ್ಕೆ ಪ್ರತಿಫಲ ಸಿಕ್ಕಿದೆ. ರಿಂಕು ವೇತನದಲ್ಲಿ ಭಾರೀ ಏರಿಕೆಯಾಗಿದೆ. 55 ಲಕ್ಷ ಪಡೀತಿದ್ದ ರಿಂಕು, ಈಗ 13 ಕೋಟಿಯ ಒಡೆಯರಾಗಿದ್ದಾರೆ. ಇದಾದ ಬೆನ್ನಲ್ಲೇ ರಿಂಕು ಸಿಂಗ್ ಈ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್; ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಘೋಷಣೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್