/newsfirstlive-kannada/media/post_attachments/wp-content/uploads/2025/04/archanakottige1.jpg)
ಡಿಯರ್ ಸತ್ಯ ಸಿನಿಮಾದ ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಅವರು ಕ್ರಿಕೆಟರ್ ಶರತ್ ಬಿ.ಆರ್ ಅವರ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
/newsfirstlive-kannada/media/post_attachments/wp-content/uploads/2025/04/archanakottige3.jpg)
ಶರತ್ ಬಿ.ಆರ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಈಗಾಗಲೇ ಶರತ್ ಬಿ. ಆರ್ ಅವರು ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಳೆದ ವರ್ಷ ಗುಜರಾತ್ ಟೈಟನ್ಸ್ ತಂಡದ ಆಟಗಾರ ಕೂಡ ಆಗಿದ್ದರು.
/newsfirstlive-kannada/media/post_attachments/wp-content/uploads/2025/04/archanakottige.jpg)
ಇನ್ನೂ, ನಟಿ ಅರ್ಚನಾ ಕೊಟ್ಟಿಗೆ ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗಾಗಲೇ ನಟಿ ಅರ್ಚನಾ ಕೊಟ್ಟಿಗೆ ಇಂಡಸ್ಟ್ರಿಯ ಪ್ರಾಮಿಸಿಂಗ್ ಫೇಸ್ ಎನ್ನುವ ಬಿರುದು ಕೂಡ ಪಡೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/04/archanakottige2.jpg)
ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳಿಯತ್ತೆ ಕಾಲ” ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆಗೆ ನಾಯಕಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಒಂದು ಅಲಂಕಾರ ವಿದ್ಯಾರ್ಥಿ ಹಾಗೂ ಶಬರಿ ಸಿನಿಮಾದಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us