/newsfirstlive-kannada/media/post_attachments/wp-content/uploads/2025/06/Shreyanka-Patil.jpg)
ಮಹಿಳಾ ಪ್ರೀಮಿಯರ್ ಲೀಗ್ ನಡೀತಾ ಇಲ್ಲ. ಟೀಮ್ ಇಂಡಿಯಾ ಪರನೋ ಆಡ್ತಿಲ್ಲ. ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಖತ್ ಟ್ರೆಂಡಿಂಗ್ನಲ್ಲಿದ್ದಾರೆ. ಕ್ರಿಕೆಟ್ ಫೀಲ್ಡ್ ಬಿಟ್ಟು ಶ್ರೇಯಾಂಕಾ ಫಿಲ್ಮ್ ಫೀಲ್ಡ್ಗೆ ಬರ್ತಾರಾ ಅಂತಾ ಫ್ಯಾನ್ಸ್ ಚರ್ಚೆ ನಡೆಸ್ತಿದ್ದಾರೆ.
ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್ ಹೀರೋ?
ಶ್ರೇಯಾಂಕಾ ಪಾಟೀಲ್.. ಆರ್ಸಿಬಿ ಅಭಿಮಾನಿಗಳ ಪಾಲಿನ ನೆಚ್ಚಿನ ಟಗರುಪುಟ್ಟಿ. ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ವಿಶ್ವ ಪ್ರಸಿದ್ಧಿ ಪಡೆದ ಆಲ್ರೌಂಡರ್. ಆನ್ಫೀಲ್ಡ್ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿ ಶ್ರೇಯಾಂಕಾ ಮಿಂಚಿದ್ದಾರೆ.
ಆದ್ರೆ, ಆನ್ಫೀಲ್ಡ್ ಆಟಕ್ಕಿಂತ ಶ್ರೇಯಾಂಕಾ ಆಫ್ ದ ಫೀಲ್ಡ್ ಆ್ಯಕ್ಟಿವಿಟಿಗೆ ಫಿದಾ ಆದ ಫ್ಯಾನ್ಸ್ ಹೆಚ್ಚಿದ್ದಾರೆ. ಅದ್ರಲ್ಲೂ, ಕನ್ನಡತಿಯ ಡಾನ್ಸ್ಗೆ ಕಳೆದೇಹೋದ ಅಭಿಮಾನಿಗಳಿದ್ದಾರೆ. ಶ್ರೇಯಾಂಕಾ ಪಾಟೀಲ್ ನಿನ್ನೆ ಇನ್ಸ್ಸ್ಟಾಗ್ರಾಂನಲ್ಲಿ ಒಂದು ಹಳೆಯ ಡಾನ್ಸ್ ವಿಡಿಯೋ ಅಪ್ಲೋಡ್ ಮಾಡಿದ್ರು. ಆರ್ಸಿಬಿ ಕ್ಯಾಂಪ್ನಲ್ಲಿ baby calm down ಸಾಂಗ್ಗೆ ಶ್ರೇಯಾಂಕಾ ಸೊಂಟ ಬಳುಕಿಸಿದ್ದ ವಿಡಿಯೋ ಅದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಅಪ್ಲೋಡ್ ಆದ ಜಸ್ಟ್ 1 ಗಂಟೆಗೆ 1.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈಗ 8.6 ವೀವ್ಸ್ ಪಡೆದುಕೊಂಡಿದೆ.
View this post on Instagram
ಶ್ರೇಯಾಂಕಾ ಪಾಟೀಲ್ ಯಾವುದೇ ಡಾನ್ಸ್ ವಿಡಿಯೋ ಅಪ್ಲೋಡ್ ಮಾಡಲಿ.. ಮಿಲಿಯನ್ಗಟ್ಟಲೇ ವೀವ್ಸ್ ಪಕ್ಕಾ. ಕೆಲ ದಿನಗಳ ಹಿಂದಷ್ಟೇ ಇಂಡಿಯನ್ ಟೀಮ್ಮೆಟ್ಸ್ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ವಿಡಿಯೋನ ಶೇರ್ ಮಾಡಿದ್ರು. ಅದು ಬರೋಬ್ಬರಿ 29.6 ಮಿಲಿಯನ್ ವೀವ್ಸ್ ಕಂಡಿದೆ. ಕಳೆದ ತಿಂಗಳು ಗೆಳತಿ ಕನ್ನಿಕಾ ಅಹುಜಾ ಜೊತೆ ಲುಟ್ ಪುಟ್ ಗಯಾ ಹಾಡಿಗೂ ಹೆಜ್ಜೆ ಹಾಕಿದ್ರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಟ್ರೆಡಿಶನಲ್ ಡ್ರೆಸ್ ತೊಟ್ಟು Uyi Amma ಸಾಂಗ್ಗೆ ಮಾಡಿದ ರೀಲ್ಸ್ ಕೂಡ ಅಷ್ಟೇ ಹಲ್ಚಲ್ ಎಬ್ಬಿಸಿತ್ತು.
ಱಪರ್ ಚಂದನ್ ಶೆಟ್ಟಿಯ ಟೈಮ್ ಬರುತ್ತೆ ಕನ್ನಡದ ಸಾಂಗ್ಗೂ ಶ್ರೇಯಾಂಕಾ ಸ್ಟೆಪ್ ಹಾಕಿದ್ರು. ಆ ವಿಡಿಯೋ ಬರೋಬ್ಬರಿ 27.8 ಮಿಲಿಯನ್ ವೀವ್ಸ್ ಕಂಡಿದೆ. ಶ್ರೇಯಾಂಕಾ ಇನ್ಸ್ಸ್ಟಾದಲ್ಲಿ ಇನ್ನು ಹಲವು ಡಾನ್ಸ್ ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋಗಳಗೂ ಅಷ್ಟೇ ಲೈಕ್ಸ್, ಕಮೆಂಟ್ಸ್ನ ಸುರಿಮಳೆಯೇ ಸುರಿದಿದೆ. ಇನ್ಸ್ಸ್ಟಾದಲ್ಲಿ ಶ್ರೇಯಾಂಕಾಗಿರೋದು 4.2 ಮಿಲಿಯನ್ ಫಾಲೋವರ್ಸ್. ಆದ್ರೆ, ಡಾನ್ಸ್ ವಿಡಿಯೋ ಅಪ್ಲೋಡ್ ಇದ್ರ ಡಬಲ್, ತ್ರಿಬಲ್ VIEWS ಬರುತ್ತೆ. ಇದೇ ಶ್ರೇಯಾಂಕ ಡಾನ್ಸ್ಗಿರೋ ಸಪರೇಟ್ ಫ್ಯಾನ್ ಬೇಸ್ನ ಕತೆ ಹೇಳ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ