ಕ್ರಿಕೆಟ್ ಆಯ್ತು ಈಗ ಸಿನಿ ರಂಗಕ್ಕೆ ಪದಾರ್ಪಣೆ ಮಾಡ್ತಿರೋ ಮಾಜಿ ಸ್ಟಾರ್ ಕ್ರಿಕೆಟರ್​.. ಪ್ರೊಡಕ್ಷನ್ ನಂ.1

author-image
Bheemappa
ಕ್ರಿಕೆಟ್ ಆಯ್ತು ಈಗ ಸಿನಿ ರಂಗಕ್ಕೆ ಪದಾರ್ಪಣೆ ಮಾಡ್ತಿರೋ ಮಾಜಿ ಸ್ಟಾರ್ ಕ್ರಿಕೆಟರ್​.. ಪ್ರೊಡಕ್ಷನ್ ನಂ.1
Advertisment
  • ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿರೋ ಕ್ರಿಕೆಟರ್​
  • ಕ್ರಿಕೆಟ್​, ಹೋಟೆಲ್​ ಬ್ಯುಸಿನೆಸ್ ಆಯ್ತು ಈಗ ಮೂವಿಗೆ ಎಂಟ್ರಿ
  • ಸಿನಿಮಾದಲ್ಲಿ ಕ್ರಿಕೆಟರ್​ ಪಾತ್ರವೇನು ಎನ್ನುವುದು ಕುತೂಹಲ

ಸುರೇಶ್​ ರೈನಾ ಕ್ರಿಕೆಟ್​ನಿಂದ ದೂರವಾಗಿ ವರ್ಷಗಳೇ ಉರುಳಿವೆ. ಆ ಸಿಕ್ಸರ್​, ಬೌಂಡರಿ, ವಾರೆ ವಾ ಎಂದು ಅನಿಸುವ ಫೀಲ್ಡಿಂಗ್​ನಿಂದ ಫ್ಯಾನ್ಸ್​ಗೆ ಸಖತ್ ಎಂಟರ್​ಟೈನ್ಮೆಂಟ್ ನೀಡಿದ್ದ ಸುರೇಶ್​ ರೈನಾ, ಈಗ ಹೊಸ ರೂಪದಲ್ಲಿ ಮನರಂಜನೆ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದ್ಯಾವ ರೀತಿ ಏನ್, ಕಥೆ?.

ರೈನಾ ವಿಶ್ವ ಕ್ರಿಕೆಟ್​ನ ಮೋಸ್ಟ್ ಎಂಟರ್​ಟೈನಿಂಗ್ ಪ್ಲೇಯರ್. ಕ್ರೀಸ್​ನಲ್ಲಿದ್ದಷ್ಟು ಹೊತ್ತು ಸಿಕ್ಸರ್, ಬೌಂಡರಿಗಳು ಸುರಿಮಳೆ ಸುರಿಸ್ತಿದ್ದ ಸುರೇಶ್ ರೈನಾ, ಮೈದಾನದಲ್ಲಿ ಸಖತ್ ಆ್ಯಕ್ಟೀವ್ ಪ್ಲೇಯರ್. ಮೈದಾನದ ಅಷ್ಟ ದಿಕ್ಕುಳಿಗೂ ಪಾದರಸದಂತೆ ಓಡಾಡ್ತಿದ್ದ ಸುರೇಶ್​ ರೈನಾನ ನೋಡೋದೆ ಚೆಂದ. ಫೀಲ್ಡಿಂಗ್ ವಿಚಾರಕ್ಕೆ ಬಂದ್ರೆ, ನೆಕ್ಸ್ಟ್​ ಲೆವೆಲ್.

publive-image

ಹೀಗೆ ಸುರೇಶ್ ರೈನಾ ಮೈದಾನದಲ್ಲಿ, ಟಿವಿ ಪರದೆ ಮೇಲೆ ನೋಡಿ ವರ್ಷಗಳೇ ಉರುಳಿವೆ. ಆತನ ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವೂ ಫ್ಯಾನ್ಸ್​ ಮಿಸ್ಸಾಗ್ತಿದ್ದಾರೆ. ಆದ್ರೆ, ಇನ್ನು ನೀವ್ ಮಿಸ್ಸಾಗಲ್ಲ. ಯಾಕಂದ್ರೆ, ಮತ್ತೆ ನಿಮ್ಮನ್ನ ರಂಜಿಸಲು ಚಿನ್ನಥಲಾ ಸುರೇಶ್ ರೈನಾ ಬರ್ತಿದ್ದಾರೆ. ಆದ್ರೆ, ಕ್ರಿಕೆಟರ್ ಆಗಲ್ಲ. ಮತ್ತೊಂದು ಅವತಾರದಲ್ಲಿ.

ಚಿತ್ರರಂಗಕ್ಕೆ ಮಿಸ್ಟರ್ ಐಪಿಎಲ್..!

ಕ್ರಿಕೆಟ್​ನಿಂದ ದೂರ ಉಳಿದಿರುವ ಸುರೇಶ್​ ರೈನಾ, ಈಗ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪ್ರೊಡೆಕ್ಷನ್ ನಂ.1 ಹೆಸರಿನಲ್ಲಿ ಡ್ರೀಮ್ ನೈಟ್​ ಸ್ಟೋರಿಸ್ ಪ್ರವೈಟ್ ಲಿಮಿಟೆಡ್​​ ನಿರ್ಮಾಣ ಮಾಡ್ತಿದ್ದು, ಚಿನ್ನಥಲಾ ಸ ಡೆಬ್ಯು ಟೀಸರ್​ ಬಿಡುಗಡೆ ಮಾಡಿದೆ. ​ಈ ಚಿತ್ರವನ್ನ ಕಾಲಿವುಡ್‌ನ ಖ್ಯಾತ ನಿರ್ದೇಶಕ ಲೋಗನ್ ನಿರ್ದೇಶಿಸುತ್ತಿದ್ದಾರೆ. ಡ್ರೀಮ್ ನೈಟ್ ಸ್ಟೋರೀಸ್ ನಿರ್ಮಾಣ ಕಂಪನಿಯಡಿಯಲ್ಲಿ ಚಿತ್ರ ನಿರ್ಮಿಣಗೊಳ್ಳುತ್ತಿದೆ. ಸಂತೋಷ್ ನಾರಾಯಣನ್​​ ಮ್ಯುಸಿಕ್ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ಆಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ ರೈನಾ..!

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ತಮಿಳುನಾಡಿನಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸುರೇಶ್ ರೈನಾ, ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇದೊಂದು ಕ್ರಿಕೆಟ್ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಲೀಡ್​​ ರೋಲ್​​ನಲ್ಲಿ ಕಾಣಿಸಿಕೊಳ್ತಾರಾ..? ಇಲ್ಲ ಗೆಸ್ಟ್ ರೋಲ್​ನಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಅಧಿಕೃತವಾಗಿಲ್ಲ. ಬಹುಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಈ ಸಿನಿಮಾದಲ್ಲಿ ಸುರೇಶ್ ರೈನಾ, ಪಾತ್ರವೇನು..? ಎಂಬುವುದು ಭಾರೀ ಕುತೂಹಲ ಕೆರಳಿಸಿದೆ.

ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ ಹಲವು ಕ್ರಿಕೆಟರ್ಸ್..!

ಕ್ರಿಕೆಟ್​​ಗೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ ಇದೆ. ಇದು ಕೇವಲ ಡೇಟಿಂಗ್, ಮೀಟಿಂಗ್, ಮ್ಯಾರೇಜ್​ಗೆ ಮಾತ್ರವೇ ಸೀಮಿತವಾಗಿಲ್ಲ. ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. 2008ರಲ್ಲಿ ಸಂಗೋಪನ್ ರಮೇಶ್, ಪೊಟ್ಟ ಪೊಟ್ಟಿ, ಮದಗಜ ರಾಜ ಎಂಬ ಚಿತ್ರದಲ್ಲಿ ಇಂಪಾರ್ಟೆಂಟ್ ಕ್ಯಾರೆಕ್ಟರ್ ಪ್ಲೇ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳ್​ ಎಬ್ಬಿಸಿತ್ತು.

ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್, ಗೆಸ್ಟ್ ಅಪಿರಿಯನ್ಸ್ ರೋಲ್ ಪ್ಲೇ ಮಾಡಿದ್ರೆ. ಕೃಷ್ಣಮಾಚಾರಿ ಶ್ರೀಕಾಂತ್, ಮಾದವನ್ ನಟನೆಯ ಪ್ರಿಯಮಾನ ತೋಜಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದರು. ವರುಣ್ ಚಕ್ರವರ್ತಿ, ಕ್ರಿಕೆಟ್ ಕರಿಯರ್​ಗೂ ಮುನ್ನವೇ ವಿಷ್ಣು ವಿಶಾಲ್ ನಟನೆಯ ಜೀವಾ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ:ಲೀಗ್​​ನಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಸಂಜು ಸ್ಯಾಮ್ಸನ್​ ಸೇಲ್.. ಆಕ್ಷನ್​​ನಲ್ಲಿ ಎಲ್ಲ ದಾಖಲೆ ಉಡೀಸ್!

publive-image

2022ರಲ್ಲಿ ವಿಕ್ರಮ್ ನಟಿಸಿದ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್, ಇಂಟರ್ಪೋಲ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರೆ. ಹರ್ಭಜನ್ ಸಿಂಗ್ ಫ್ರೆಂಡ್‌ಶಿಪ್ ಚಿತ್ರದಲ್ಲಿ ನಟಿಸಿದ್ದು ಎಲ್ಲರಿಗೂ ತಿಳಿದಿದೆ. ಶ್ರೀಶಾಂತ್​, ಶಿಖರ್ ಧವನ್ ಈಗಾಗಲೇ ಬಾಲಿವುಡ್‌ಗೆ ಎಂಟ್ರಿ ಸೈ ಎನಿಸಿಕೊಂಡಿದ್ದಾರೆ.

ಕ್ರೀಡಾ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟಿರುವ ಹಲವು ಖ್ಯಾತ ನಾಮರಿದ್ದಾರೆ. ಆದ್ರೆ, ಈ ಪೈಕಿ ಯಶಸ್ಸಿನ ಉತ್ತುಂಗಕ್ಕೇರಿದವರು ಇಲ್ಲ. ಹೀಗಾಗಿ ಇದೇ ಹಾದಿಯಲ್ಲಿ ಸಾಗಿದ ಸುರೇಶ್​ ರೈನಾ, ಇವರಿಗಿಂತ ಭಿನ್ನವಾಗಿ ನಿಲ್ತಾರಾ..? ಜಸ್ಟ್ ವೇಯ್ಟ್​ ಆ್ಯಂಡ್ ಸೀ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment