newsfirstkannada.com

18.5 ಓವರ್ ಅಂದ್ರೆ ಕೊಹ್ಲಿಗೆ ಮರೆಯದ ಕ್ಷಣ.. ಶತಮಾನದ ಖುಷಿ ಜೊತೆಗೆ ಇದೆ ಬೇಸರದ ನಂಟು..! ಏನದು

Share :

Published August 16, 2024 at 10:51am

    ಆ 2 ಘಟನೆಗಳು ಕೊಹ್ಲಿ ಫ್ಯಾನ್ಸ್​ ಮರೆಯಲು ಅಸಾಧ್ಯ!

    ಫ್ಯಾನ್ಸ್​ಗೆ ಕಾಡುತ್ತವೇ ಯಾಕೆ ಆ ಎರಡು ಘಟನೆಗಳು?

    ಎರಡು T20 ವಿಶ್ವಕಪ್​.. ಎರಡು ಮೂಮೆಂಟ್ಸ್​ ಸ್ಮರಣೀಯ

ಜೆರ್ಸಿ ನಂಬರ್ 18. ಇದು ಕಿವಿಗೆ ಅಪ್ಪಳಿದ ಕೂಡಲೇ ಕ್ರಿಕೆಟ್ ಜಗತ್ತಿನಲ್ಲಿ ನೆನಪಾಗುವ ಹೆಸರು ವಿರಾಟ್ ಕೊಹ್ಲಿ. ನೆಚ್ಚಿನ ಅಭಿಮಾನಿಗಳಿಗೆ ನಂಬರ್-18 ಅಂದ್ರೆ ಎಲ್ಲಿಲ್ಲದ ಪ್ರೀತಿ ಹಾಗೂ ವಿಶೇಷವಾದ ಎಮೋಷನಲ್​. ಇದೇ ಫ್ಯಾನ್ಸ್​ಗೆ 18.5ನೇ ಓವರ್ ಅಂದ್ರೆ ಖುಷಿಯ ಜೊತೆ ಬೇಸರ ಮೂಡುತ್ತೆ. ಖುಷಿ ಹಾಗೂ ದುಃಖ ಎರಡಕ್ಕೂ ಕಾರಣವಾದ ನಂಬರ್​​ ಅದು.

ನಂಬರ್​ 18. ವಿಶ್ವ ಸಾಮ್ರಾಟನ ಜರ್ಸಿ ನಂಬರ್​. ಈ ಜರ್ಸಿ ನಂಬರ್​ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜರ್ಸಿ ನಂಬರ್ 18 ಅಂದ್ರೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ. ಇಡೀ ಪ್ರಪಂಚಕ್ಕೆ ಗೊತ್ತು. ಆ ಜರ್ಸಿ ನಂಬರ್ ಗತ್ತೇನು ಅನ್ನೋದು. ಅದು ಜರ್ಸಿ ನಂಬರ್ ಮಾತ್ರವೇ ಅಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎಮೋಷನ್​​​​​​​​​​​​​​​​​​​​​​​​​. ಇದೇ ವಿರಾಟ್​ ಅಭಿಮಾನಿಗಳಿಗೆ ವಿಶ್ವ ಕ್ರಿಕೆಟ್​ನ ಆ ಎರಡು ಘಟನೆಗಳು ಎಂದೆಂದಿಗೂ ಮರೆಯಲು ಅಸಾಧ್ಯ. ಅದೇ 18.5ನೇ ಓವರ್.

ಇದನ್ನೂ ಓದಿ:ವಿನಯ್​ ಕುಮಾರ್​, ಬಾಲಾಜಿ ಸೈಡ್​ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!

ವಿರಾಟ್​ ಕೊಹ್ಲಿಗಾಗಲಿ, ವಿರಾಟ್​ ಕೊಹ್ಲಿಯನ್ನ ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳಿಗೆ 18.5ನೇ ಓವರ್​​​​​​​​​​​​​​​​​​​​​​​​​​​​​​​​​​​​​​​​​​​ನ ಎರಡು ಘಟನೆಗಳು ಎಂದೆಂದಿಗೂ ಕಾಡುವ ನೆನಪುಗಳು. ಒಂದು ನೆನಪು ಸಂಭ್ರಮದಲ್ಲೇ ತೇಲಿಸಿದ್ರೆ, ಮತ್ತೊಂದು ಮೌನಕ್ಕೆ ಜಾರಿಸುತ್ತೆ.

18.5ನೇ ಓವರ್​ನಲ್ಲಿ ಗ್ರೇಟೆಸ್ಟ್​ ಶಾಟ್
ಕಳೆದ ಟಿ20 ವಿಶ್ವಕಪ್​ ಟೂರ್ನಿಯ ಇಂಡೋ-ಪಾಕ್​​ ಪಂದ್ಯವನ್ನ ಬೇಕಾದ್ರೂ ಮರೀಬೋದು. 2022ರ ಟಿ20 ವಿಶ್ವಕಪ್​ನ ಹ್ಯಾರಿಸ್​​ ರೌಫ್​​ ಬೌಲಿಂಗ್​ನಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್​​ನ ಮರೆಯಲಾಸಾಧ್ಯ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಏಕಾಂಗಿ ಹೋರಾಟದ ಪರಿ ಹಂಗಿತ್ತು.

8 ಎಸೆತಕ್ಕೆ 28 ರನ್. ಹೈ ಫ್ರೆಷರ್ ಗೇಮ್​. ಕ್ವಾಲಿಟಿ ಫೇಸ್ ಬೌಲರ್. 140ರ ವೇಗದ ಬಾಲ್​.. ಫುಲ್​ ಲೆನ್ತ್​ ಬಾಲ್. ಕೊಹ್ಲಿಯ ಫೂಟ್​ ಬ್ಯಾಲೆನ್ಸ್ ಕೂಡ ಸರಿ ಇರಲಿಲ್ಲ. ಕೊಹ್ಲಿಯ ಟೈಮಿಂಗ್ ಆ್ಯಂಡ್ ಪವರ್ ಸ್ಟ್ರೋಕ್​​ಗೆ ಹ್ಯಾರಿಸ್ ತಲೆ ಮೇಲಿಂದ ಹಾರಿ ಹೋಗಿದ್ದ ಚೆಂಡು ಬೌಂಡರಿ ಗೆರೆ ದಾಟಿತ್ತು. ಈ ನಂಬಲಾಸಾಧ್ಯವಾಗಿದ್ದ ಆ ಸಿಕ್ಸರ್​ ಭಾರತವನ್ನ ಗೆಲುವಿನ ಟ್ರ್ಯಾಕ್​​ಗೆ ತಂದು ನಿಲ್ಲಿಸಿತ್ತು. ಇಂಟ್ರೆಸ್ಟಿಂಗ್ ಅಂದ್ರೆ 18ನೇ ಓವರ್​​ನ 5ನೇ ಬಾಲ್​​ನಲ್ಲಿ ಸಿಡಿದ ಈ ಶಾಟ್, ಶತಮಾನದ ಶಾಟ್ ಅಂತಾನೇ ಹೆಸರುವಾಸಿಯಾಗಿದೆ. ವಿಶ್ವ ಕ್ರಿಕೆಟ್​​ನ ಗ್ರೇಟೆಸ್ಟ್​ ಶಾಟ್ ಆಗಿದೆ. ಇದೇ ಶ್ರೇಷ್ಠ ಶಾಟ್​ಗೂ​ ವಿರಾಟ್​ ಕೊಹ್ಲಿಯ ಟಿ20 ಕರಿಯರ್​​ ಅಂತ್ಯಕ್ಕೂ ನಂಟಿದೆ.

ಇದನ್ನೂ ಓದಿ:ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don’t Miss

18.5ನೇ ಓವರ್​ನಲ್ಲೇ ಕೊಹ್ಲಿ ಟಿ20 ಕರಿಯರ್ ಎಂಡ್​..!
2022ರ ಟಿ20 ವಿಶ್ವಕಪ್​ನಲ್ಲಿ ಪಾಕ್ ಎದುರಿನ ಆ ಶಾಟ್ ಸಿಡಿದಿದ್ದು 18.5ನೇ ಓವರ್​ನಲ್ಲಾದ್ರೆ ವಿರಾಟ್​ ಕೊಹ್ಲಿಯ ಟಿ20 ವೃತ್ತಿ ಜೀವನ ಅಂತ್ಯವಾಗಿದ್ದು 18.5 ಓವರ್​ನಲ್ಲೇ ಆಗಿದೆ. ಜಸ್ಟ್​ ಒಂದೂವರೆ ತಿಂಗಳ ಹಿಂದಿನ ಕತೆ ಇದು. ಟಿ20 ವಿಶ್ವಕಪ್​ ಫೈನಲ್​​​ ಪಂದ್ಯವೇ ವಿರಾಟ್ ಪಾಲಿಗೆ ಕೊನೆಯಾಗಿತ್ತು. ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್, ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದ್ರು. ಈ ಪಂದ್ಯದಲ್ಲಿ 76 ರನ್ ಸಿಡಿಸಿದ್ದ ವಿರಾಟ್, ಮಾರ್ಕೊ ಯಾನ್ಸನ್​​​​​​ಗೆ ವಿಕೆಟ್ ಒಪ್ಪಿಸಿದ್ದು 18.5ನೇ ಓವರ್​ನಲ್ಲೇ ಆಗಿತ್ತು. ಇದು ಜಸ್ಟ್​ ವಿರಾಟ್ ವಿಕೆಟ್ ಒಪ್ಪಿಸಿದ ಬಾಲ್ ಆಗಿರಲಿಲ್ಲ. ಟಿ20 ವೃತ್ತಿ ಜೀವನದ ಅಂತ್ಯವೇ ಆಗಿತ್ತು.

18.5ನೇ ಓವರ್​ ವಿರಾಟ್ ಕೊಹ್ಲಿ ಫಾನ್ಸ್​ಗೆ ಎಮೋಷನ್​
ವಿರಾಟ್​ ಕೊಹ್ಲಿ ಸಿಡಿಸಿದ್ದ ಈ ಗ್ರೇಟೆಸ್ಟ್​ ಶಾಟ್​​ಗೆ 2 ವರ್ಷಗಳೇ ಕಳೆದಿವೆ. ಹಾಗಿದ್ದರೂ ಆ ಮಿರಾಕಲ್ ಶಾಟ್​​, ಇಂದಿಗೂ ಫ್ಯಾನ್ಸ್​ ಮನದಲ್ಲಿ ಅಚ್ಚಳಿಯದಂತೆಯೇ ಇದೆ. ಈ ಶಾಟ್​ ಒಂದನ್ನೇ ಅಲ್ಲ. ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಔಟಾದ ರೀತಿಯನ್ನು ಫ್ಯಾನ್ಸ್​ ಮರೆಯಲ್ಲ. ಇಂಟ್ರೆಸ್ಟಿಂಗ್ ಅಂದ್ರೆ ವಿರಾಟ್ 2022ರ ಟಿ20 ವಿಶ್ವಕಪ್​ನಲ್ಲಿ ಸಿಡಿಸಿದ್ದ ಗ್ರೇಟೆಸ್ಟ್​ ಸಿಕ್ಸರ್ ಹಾಗೂ ಕೊನೆ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ ಎರಡೂ ಬಾಲ್​ಗಳು 18.5ನೇ ಓವರ್​ನಲ್ಲಿ ಅನ್ನೋದು ನಿಜಕ್ಕೂ ವಿಪರ್ಯಾಸ. ಅದೇನೇ ಆಗಲಿ, ವಿರಾಟ್​ ಜರ್ಸಿ ನಂಬರ್​ 18 ಫ್ಯಾನ್ಸ್​ಗೆ ಎಲ್ಲಿಲ್ಲದ ಎಮೋಷನ್. ಆದ್ರೀಗ ಇದೇ ಫ್ಯಾನ್ಸ್​ಗೆ 18.5ನೇ ಓವರ್​​​​​​​​​​ ಮತ್ತಷ್ಟು ಎಮೋಷನಲ್ ಆಗಿ ಮಾಡಿರೋದು ಸುಳ್ಳಲ್ಲ.

ಇದನ್ನೂ ಓದಿ:ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

18.5 ಓವರ್ ಅಂದ್ರೆ ಕೊಹ್ಲಿಗೆ ಮರೆಯದ ಕ್ಷಣ.. ಶತಮಾನದ ಖುಷಿ ಜೊತೆಗೆ ಇದೆ ಬೇಸರದ ನಂಟು..! ಏನದು

https://newsfirstlive.com/wp-content/uploads/2024/06/Kohli-Batting.jpg

Load More