ಯಜುವೇಂದ್ರ ಚಹಲ್-ಧನಶ್ರೀ ವಿಚ್ಛೇದನ ಅಧಿಕೃತ; ಬೇರೆ, ಬೇರೆಯಾಗಲು ಕೊಟ್ಟ ಕಾರಣವೇನು?

author-image
admin
Updated On
ಡಿವೋರ್ಸ್​​ ಸುದ್ದಿ ಮಧ್ಯೆ ಚಹಾಲ್​​ ಭಾವುಕ ಪೋಸ್ಟ್​; ಸ್ಟಾರ್​ ಕ್ರಿಕೆಟರ್ ಇನ್​ಸ್ಟಾ ಸ್ಟೋರಿಯಲ್ಲೇನಿದೆ?
Advertisment
  • ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್ ಬಾಳಲ್ಲಿ ಬಿರುಗಾಳಿ
  • 4 ವರ್ಷಗಳ ದಾಂಪತ್ಯ ಜೀವನಕ್ಕೆ ಚಹಲ್‌ ಹಾಗೂ ಧನಶ್ರೀ ಗುಡ್‌ಬೈ
  • ಯಜುವೇಂದ್ರ ಚಹಲ್, ಧನಶ್ರೀ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿತ್ತು!

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್, ಧನಶ್ರೀ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಕೆಲ ದಿನಗಳಿಂದ ಕ್ರಿಕೆಟಿಗ ಯಜುವೇಂದ್ರ ಚಹಲ್ ಡಿವೋರ್ಸ್‌ ವದಂತಿ ಸುದ್ದಿಯಲ್ಲಿತ್ತು. ಇದೀಗ ಬಾಂದ್ರಾ ಫ್ಯಾಮಿಲಿ ಕೋರ್ಟ್‌ ಇವರಿಬ್ಬರ ಅರ್ಜಿಯನ್ನು ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದೆ.

4 ವರ್ಷಗಳ ದಾಂಪತ್ಯ ಜೀವನಕ್ಕೆ ಚಹಲ್‌ ಹಾಗೂ ಧನಶ್ರೀ ಗುಡ್‌ಬೈ ಹೇಳಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್‌ ಪಡೆದಿರುವ ಚಹಲ್‌, ಧನಶ್ರೀ ಕೋರ್ಟ್‌ಗೆ ಸೂಕ್ತ ಕಾರಣವನ್ನು ನೀಡಿದ್ದಾರೆ.

publive-image

ಚಹಲ್‌-ಧನಶ್ರೀ ಡಿವೋರ್ಸ್!
2020ರ ಕೊರೊನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಯಜುವೇಂದ್ರ ಚಹಲ್, ಧನಶ್ರೀ ಇಬ್ಬರ ನಡುವೆ ಪ್ರೀತಿ ಅರಳಿತ್ತು. 2020ರ ಡಿಸೆಂಬರ್‌ನಲ್ಲಿ ಚಹಲ್‌, ಧನಶ್ರೀ ಜೋಡಿ ಮದುವೆಯಾಗಿದ್ದರು.

ಇದನ್ನೂ ಓದಿ: 28 ವರ್ಷದ ಈ ಸುಂದರ ನಟಿಗೆ ಪ್ರಪೋಸ್ ಮಾಡಿದ್ರಾ ಯಜುವೇಂದ್ರ ಚಹಲ್? 2ನೇ ಮದುವೆಗೆ ಸಜ್ಜಾದ್ರಾ ಕ್ರಿಕೆಟರ್ ? 

2 ವರ್ಷದ ಹಿಂದೆಯೇ ಸ್ಟಾರ್ ಕ್ರಿಕೆಟರ್‌ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು.

publive-image

ಕೆಲ ತಿಂಗಳ ಹಿಂದೆ ಇಬ್ಬರು ಇನ್‌ಸ್ಟಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಯಜುವೇಂದ್ರ ಚಹಲ್‌ ತನ್ನ ಪತ್ನಿ ಧನಶ್ರೀ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್‌ ಮಾಡಿದ್ರು.

ಇಷ್ಟಾದರೂ ಧನಶ್ರೀ ಅವರು ಚಹಲ್‌ ಅವರೊಂದಿಗೆ ಫೋಟೋ ಡಿಲೀಟ್‌ ಮಾಡಿರಲಿಲ್ಲ. ಈ ಬಳಿಕ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಸುದ್ದಿಗಳು ಬಲವಾಗಿತ್ತು. ನಿನ್ನೆ ಇಬ್ಬರೂ ಬಾಂದ್ರಾ ಫ್ಯಾಮಿಲಿ ಕೋರ್ಟ್‌ನಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

publive-image

ಬೇರೆ, ಬೇರೆಯಾಗಲು ಕಾರಣವೇನು?
ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಯಜುವೇಂದ್ರ ಚಹಲ್-ಧನಶ್ರೀ ವಿಚ್ಛೇದನಕ್ಕೆ ಕಾರಣ ನೀಡಿದ್ದಾರೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಸಮಸ್ಯೆ ಎದುರಾಗಿದ್ದು ಬೇರೆ, ಬೇರೆಯಾಗಿದ್ದೇವೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment