/newsfirstlive-kannada/media/post_attachments/wp-content/uploads/2024/11/NITIN.jpg)
ಖ್ಯಾತ ಕಿರುತೆರೆ ನಟ ನಿತಿನ್ ಚೌಹಾಣ್ ಗುರುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ನಟ ನಿತಿನ್ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ನಿತಿನ್ ಅನೇಕ ಟಿವಿ ಶೋಗಳಲ್ಲಿ ಅದ್ಭುತವಾಗಿ ನಟಿಸಿದ್ದರು. ಅವರ ಹಠಾತ್ ನಿಧನದಿಂದ ಅಭಿಮಾನಿಗಳೆಲ್ಲರೂ ದುಃಖಿತರಾಗಿದ್ದಾರೆ.
ಕಾರಣಾಂತರಗಳಿಂದ ಅವರು ಜೀವ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿವೆ. ಅವರು ದಾದಾಗಿರಿ-2 ರಿಯಾಲಿಟಿ ಶೋ ವಿಜೇತರಾಗಿದ್ದರು. ನಿತಿನ್ ಮೂಲತಹ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಿವಾಸಿಯಾಗಿದ್ದರು. ದಾದಾಗಿರಿ 2 ಕಾರ್ಯಕ್ರಮದ ಹೊರತಾಗಿ ಸ್ಪ್ಲಿಟ್ಸ್ವಿಲ್ಲಾದ ಸೀಸನ್ 5 ಸಹ ಗೆದ್ದರು.
/newsfirstlive-kannada/media/post_attachments/wp-content/uploads/2024/11/NITIN-1.jpg)
‘ಜಿಂದಗಿ ಡಾಟ್ ಕಾಮ್’, ‘ಕ್ರೈಮ್ ಪೆಟ್ರೋಲ್’ ಮತ್ತು ‘ಫ್ರೆಂಡ್ಸ್’ ನಂತಹ ಟಿವಿ ಶೋಗಳಲ್ಲಿ ನಿತಿನ್ ಕೆಲಸ ಮಾಡಿದ್ದರು. ‘ಕ್ರೈಮ್ ಪೆಟ್ರೋಲ್’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಸಾವಿನ ಸುದ್ದಿ ತಿಳಿದ ನಂತರ ಅವರ ತಂದೆ ಮುಂಬೈ ತಲುಪಿದ್ದಾರೆ. ಮೃತದೇಹವನ್ನು ಅಲಿಗಢಕ್ಕೆ ಕೊಂಡೊಯ್ಯಲಿದ್ದಾರೆ. ಈ ಬಗ್ಗೆ ಪೊಲೀಸರಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us