ಆಗಸ್ಟ್ 21ರಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ರೊನಾಲ್ಡೊ
90 ನಿಮಿಷದಲ್ಲಿ ಗೋಲ್ಡ್, ಡೈಮೆಂಡ್ ಬಟನ್ ಪಡೆದಿದ್ದ ಪ್ಲೇಯರ್
ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ ಯಾವುದು, ಅದು ಇದೆನಾ.?
ಕ್ರಿಸ್ಟಿಯಾನೋ ರೊನಾಲ್ಡೊ ಸ್ಟಾರ್ ಫುಟ್ಬಾಲ್ ಪ್ಲೇಯರ್. ಇವರ ಆಟ ನೋಡಲೆಂದೇ ಸಾಕಷ್ಟು ಪ್ರೇಕ್ಷಕರು ಸ್ಟೇಡಿಯಂನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುತ್ತಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಒಂದು ವಾರದ ಹಿಂದೆ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆರಂಭಿಸಿದ್ದ ಕೆಲವೇ ಗಂಟೆಗಳಲ್ಲಿ ಗೋಲ್ಡ್, ಡೈಮೆಂಡ್ ಬಟನ್ ಪಡೆದಿದ್ದರು. ಇದರ ಬೆನ್ನಲ್ಲೇ ಇವರ ಯೂಟ್ಯೂಬ್ ಚಾನೆಲ್ ಮತ್ತೊಂದು ದಾಖಲೆ ಮಾಡಿದೆ.
ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರ. ರೊನಾಲ್ಡೊಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫುಟ್ಬಾಲ್ ಪ್ರೇಮಿಗಳ ಹಾರ್ಟ್ ಫೇವರಿಟ್ ರೊನಾಲ್ಟ್ ಅವರ ಯೂಟ್ಯೂಬ್ ಇತಿಹಾಸದಲ್ಲೇ ಮತ್ತೆ ಹೊಸ ರೆಕಾರ್ಡ್ ಬ್ರೇಕ್ ಮಾಡಿದೆ. ಆಗಸ್ಟ್ 21 ರಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದ ರೊನಾಲ್ಡೊ ಆಗಸ್ಟ್ 28ಕ್ಕೆ ಬರೋಬ್ಬರಿ 50 ಮಿಲಿಯನ್ ಅಂದರೆ 5 ಕೋಟಿ ಜನರು ಸಬ್ಸ್ಕ್ರೈಬರ್ಸ್ ಆಗಿದ್ದಾರೆ. ಇದು ಯೂಟ್ಯೂಬ್ ಇತಿಹಾಸದಲ್ಲೇ ದೊಡ್ಡ ದಾಖಲೆಯಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಯೂಟ್ಯೂಬ್ ಇತಿಹಾಸದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ರೆಕಾರ್ಡ್ ಬ್ರೇಕ್; 24 ಗಂಟೆಯಲ್ಲೇ ಡೈಮಂಡ್ ಬಟನ್!
ರೊನಾಲ್ಡೊ ಅವರು ತಮ್ಮ ಚಾನೆಲ್‌ನಲ್ಲಿ 15 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ದಿ ಗೋಲ್ಡನ್ ಬಟನ್ ಫಾರ್ ಮೈ ಗೋಲ್ಡನ್ ಕಿಡ್ಸ್ ಎನ್ನುವ ವೀಡಿಯೊ ಬರೋಬ್ಬರಿ 45 ಮಿಲಿಯನ್ ಅಷ್ಟು ವೀಕ್ಷಣೆ ಕಂಡಿದ್ದು ಈಗಲೂ ರನ್ ಆಗುತ್ತಲೇ ಇದೆ. ಇನ್ನು ತಮ್ಮ ಖಾತೆಯಲ್ಲಿ 15 ವಿಡಿಯೋಗಳಲ್ಲದೇ 8 ಸಣ್ಣ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಗಸ್ಟ್ 21 ರಂದು ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ಕೇವಲ 90 ನಿಮಿಷದಲ್ಲಿ ಒಟ್ಟು 1 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿದ್ದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ