Kumbh Mela; ಗಂಗೆಯಲ್ಲಿ ಮಿಂದಿದ್ದು ಎಷ್ಟು ಕೋಟಿ ಭಕ್ತರು.. ಶಿವರಾತ್ರಿಯಂದೇ ವಿದ್ಯುಕ್ತ ತೆರೆ

author-image
Bheemappa
Updated On
ಯಶಸ್ವಿಯಾದ ಮಹಾ ಕುಂಭಮೇಳ.. ಉತ್ತರ ಪ್ರದೇಶಕ್ಕೆ ಎಷ್ಟು ಲಕ್ಷ ಕೋಟಿ ಆದಾಯ ಬಂದಿದೆ ಗೊತ್ತಾ?
Advertisment
  • ಮಹಾ ಕುಂಭಮೇಳಕ್ಕೆ ಮಹಾ ಶಿವರಾತ್ರಿಯಂದೇ ಅಧಿಕೃತ ತೆರೆ
  • ಕಳೆದ ತಿಂಗಳು ಆರಂಭವಾಗಿದ್ದ ಪ್ರಯಾಗರಾಜ್ ಕುಂಭಮೇಳ
  • ಇದುವರೆಗೆ ಎಷ್ಟು ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.?

ಪ್ರಯಾಗರಾಜ್; ಮಹಾ ಕುಂಭಮೇಳವು ಜನವರಿ 13 ರಿಂದ ಆರಂಭವಾಗಿ ಫೆಬ್ರವರಿ 26 ಅಂದರೆ ಇಂದಿಗೆ ವಿದ್ಯುಕ್ತ ತೆರೆ ಬೀಳಲಿದೆ. ಒಟ್ಟು 45 ದಿನಗಳವರೆಗೆ ಸಂಭ್ರದಿಂದ ನಡೆದ ಕುಂಭಮೇಳಕ್ಕೆ ವಿಶ್ವದ ಹಲವು ದೇಶಗಳ ಗಣ್ಯರು ಭೇಟಿ ನೀಡಿದ್ದರು. ಶತಮಾನದ ಸಂಭ್ರಮದಲ್ಲಿ ಸಾಧು-ಸಂತರು, ನಟ-ನಟಿಯರು, ರಾಜಕಾರಣಿಗಳು ಸೇರಿ ಸಾಮಾನ್ಯ ಜನರು ಭಾಗಿಯಾಗಿದ್ದರು. ಇದುವರೆಗೆ ಒಟ್ಟು 65 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿ, ಪವಿತ್ರಾ ಸ್ನಾನ ಮಾಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 12 ವರ್ಷಗಳ ಬಳಿಕ ಕುಂಭಮೇಳ ವಿಜೃಂಭಣೆಯಿಂದ ನಡೆದು ಇಂದು ಶಿವರಾತ್ರಿಯೊಂದಿಗೆ ತೆರೆ ಬೀಳಲಿದೆ. ಈ ಮಹಾ ಉತ್ಸವದಲ್ಲಿ ಕೋಟ್ಯಂತರ ಜನ ಭಾಗಿಯಾಗಿ ಶಾಹಿಸ್ನಾನ ಮಾಡಿದ್ದಾರೆ. ಈ ಬಾರಿ ಜಗತ್ತಿನಾದ್ಯಂತ ಇರುವ ಭಕ್ತರು ಮಹಾ ಕುಂಭಮೇಳಕ್ಕೆ ಆಗಸಿದ್ದರು.

publive-image

ಕೋಟಿ ಕೋಟಿ ಭಕ್ತರು ಕುಂಭಕ್ಕೆ ಭೇಟಿ ನೀಡಿದ್ದರು

  • ಜನವರಿ 13 ರಂದು 1.70 ಕೋಟಿ ಭಕ್ತರಿಂದ ಪವಿತ್ರಸ್ನಾನ
  • ಜನವರಿ 14 ರಂದು 3.5 ಕೋಟಿ ಭಕ್ತಾರು ತೀರ್ಥಸ್ನಾನ
  • ಜನವರಿ 29 ರಂದು 7.64 ಕೋಟಿ ಭಕ್ತಾದಿಗಳು ಅಮೃತಸ್ನಾನ
  • ಫೆಬ್ರವರಿ 3 ರಂದು 2.57 ಕೋಟಿ ಭಕ್ತಾದಿಗಳಿಂದ ತೀರ್ಥಸ್ನಾನ
  • ಫೆಬ್ರವರಿ 12 ರಂದು 2.04 ಕೋಟಿ ಭಕ್ತರಿಂದ ಪವಿತ್ರಸ್ನಾನ
  • ಇಂದು 3 ಕೋಟಿಗೂ ಅಧಿಕ ಭಕ್ತರು ತೀರ್ಥಸ್ನಾನ ಮಾಡುವ ನಿರೀಕ್ಷೆ

ಇದನ್ನೂ ಓದಿ:ದರ್ಶನ್ ಪುತ್ರ ವಿನೀಶ್​ ಹೋಗಿದ್ದು ಎಲ್ಲಿಗೆ..? ಅಪ್ಪನ ಸಂಕಷ್ಟ ನಿವಾರಣೆಗೆ ದೇವರಲ್ಲಿ ವಿಶೇಷ ಪ್ರಾರ್ಥನೆ

publive-image

ಒಟ್ಟಾರೆಯಾಗಿ ಮಹಾಕುಂಭ ಮೇಳದಲ್ಲಿ 65 ಕೋಟಿಗೂ ಅಧಿಕ ಭಕ್ತರು ತೀರ್ಥಸ್ನಾನ ಮಾಡಿರುವುದು ದಾಖಲೆ ಆಗಿದೆ. 40 ದಿನಗಳಲ್ಲಿ 45 ಕೋಟಿ ಭಕ್ತರು ತೀರ್ಥಸ್ನಾನ ಮಾಡಬಹುದು ಎಂದು ಉತ್ತರ ಪ್ರದೇಶ ಸರ್ಕಾರ ನಿರೀಕ್ಷೆ ಮಾಡಿತ್ತು. ಆದರೆ ಸರ್ಕಾರ ಅಂದುಕೊಂಡಿದ್ದಕ್ಕಿಂತ 20 ಕೋಟಿಗೂ ಹೆಚ್ಚಿನ ಭಕ್ತರು ಮಹಾ ಕುಂಭಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದಾರೆ.

ಇಂದು ಶಿವರಾತ್ರಿ ಹಾಗೂ ಮಹಾ ಕುಂಭಮೇಳಕ್ಕೆ ಕೊನೆಯ ದಿನವಾಗಿದ್ದರಿಂದ ಸಂಜೆ ಹೊತ್ತಿಗೆ 2 ಕೋಟಿ ಅಧಿಕ ಭಕ್ತರು ಭೇಟಿ ನೀಡಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಎಂದಿನಿಂತೆ ಪೊಲೀಸ್ ಬಂದೋಬಸ್ತ್​ ಅನ್ನು ಏರ್ಪಡಿಸಿದೆ. ಪ್ರಯಾಗರಾಜ್​ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇಂದು ಮುಂಜಾನೆ ಬ್ರಾಹ್ಮಿ ಮುಹೂರ್ತಕ್ಕಾಗಿ ಕಾದು ಲಕ್ಷಾಂತರ ಭಕ್ತರು ತೀರ್ಥಸ್ನಾನ ಮಾಡಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment