/newsfirstlive-kannada/media/post_attachments/wp-content/uploads/2025/04/crow2.jpg)
ಮುಂಬೈ: ಮನಷ್ಯರಂತೆ ಮಾತಾಡೋ ಕಾಗೆಯನ್ನು ನೋಡಿ ಸ್ಥಳೀಯರು, ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಹೌದು, ಸೋಷಿಯಲ್ ಮೀಡಿಯಾದಲ್ಲಿ ಕಾಗೆಯೊಂದು ಮನುಷ್ಯರಂತೆ ಮಾತಾಡೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
ಇದೇ ವಿಡಿಯೋದಲ್ಲಿ ಕಾಗೆ ಪಪ್ಪಾ ಐ ಲವ್ ಯೂ, ಪಪ್ಪಾ ಪಪ್ಪಾ, ಪಪ್ಪಾ ಬಾರೋ ಅಂತೆಲ್ಲಾ ಮಾತಾಡಿದ್ದನ್ನು ನೋಡಿದ ಸ್ಥಳೀಯರು ಅಚ್ಚರಿಯಾಗಿದ್ದಾರೆ. ಹೌದು, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ಭಾಗದಲ್ಲಿ ಮಹಿಳೆಯೊಬ್ಬರು ಸಾಕಿದ ಕಾಗೆಯೇ ಮನುಷ್ಯನಂತೆ ಮಾತಾಡಿದೆ.
View this post on Instagram
ತನುಜಾ ಮುಕ್ನೆ ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ತನ್ನ ತೋಟದಲ್ಲಿ ಬಿದ್ದಿದ್ದ ಕಾಗೆಯನ್ನು ಆರೈಕೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಮುಕ್ನೆ ಮನೆಯಲ್ಲಿ ಸದಸ್ಯನ ಹಾಗೇ ಈ ಕಾಗೆ ಕುಟುಂಬದವರೊಂದಿಗೆ ಮನುಷ್ಯರ ಜೊತೆಗೆ ಸಂವಹನ ನಡೆಸುತ್ತದೆ. ಇದು ಸ್ಥಳೀಯರ ಹಾಗೂ ತಜ್ಞರಲ್ಲಿ ಕುತೂಹಲ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ