ಪಾಕ್ ಯುವತಿಯನ್ನು ಮದುವೆಯಾದ CRPF ಯೋಧನ ವಿರುದ್ಧ ಶಿಸ್ತು ಕ್ರಮ; ಆಗಿದ್ದೇನು?

author-image
admin
Updated On
ಪಾಕ್ ಯುವತಿಯನ್ನು ಮದುವೆಯಾದ CRPF ಯೋಧನ ವಿರುದ್ಧ ಶಿಸ್ತು ಕ್ರಮ; ಆಗಿದ್ದೇನು?
Advertisment
  • ಯೋಧನಿಗೆ CRPF ಅನುಮತಿ ನೀಡುವ ಮುನ್ನವೇ ವಿವಾಹ
  • ಪಾಕ್ ಪ್ರಜೆಗಳು ದೇಶ ಬಿಟ್ಟು ಹೋಗುವ ಸಂದರ್ಭದಲ್ಲಿ ಈ ಘಟನೆ
  • ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸುವಾಗ ಕಣ್ಣೀರಿಟ್ಟ CRPF ಯೋಧ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರ ಪಾಕ್‌ ಪ್ರಜೆಗಳನ್ನ ದೇಶದಿಂದ ಗಡಿಪಾರು ಮಾಡುತ್ತಿದೆ. ಪಾಕಿಸ್ತಾನ ಪ್ರಜೆಗಳು ದೇಶ ಬಿಟ್ಟು ಹೋಗುವ ಈ ಸಂದರ್ಭದಲ್ಲಿ CRPF ಯೋಧ ಮುನೀರ್ ಅಹಮದ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುನೀರ್ ಅಹಮದ್ ಅವರು 41ನೇ ಬೆಟಾಲಿಯನ್‌ನಲ್ಲಿ CRPF ಯೋಧನಾಗಿದ್ದಾರೆ. ಇವರು ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದು, ಶಿಸ್ತು ಕ್ರಮವನ್ನ ಎದುರಿಸಬೇಕಾಗಿದೆ.

ಅಸಲಿಗೆ ಆಗಿದ್ದೇನು?
CRPF ಯೋಧ ಮುನೀರ್ ಅಹಮದ್ ಅವರು ಪಾಕಿಸ್ತಾನದ ಯುವತಿ ಮೆನಾಲ್ ಖಾನ್ ಅವರನ್ನ ಪ್ರೀತಿಸಿದ್ದರು. ಮೆನಾಲ್ ಖಾನ್ ಜೊತೆ ವಿವಾಹಕ್ಕೆ CRPF ಬಳಿ ಅನುಮತಿಯನ್ನು ಕೋರಿದ್ದಾರೆ.
ಯೋಧನಿಗೆ ಅನುಮತಿ ನೀಡುವ ಮುನ್ನವೇ ಮುನೀರ್ ಅಹಮದ್ ಅವರು ವಾಟ್ಸಾಪ್‌ ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿದ್ದಾರೆ.

publive-image

CRPF ಯೋಧನಿಗೆ ಪಾಕ್ ಯುವತಿಯನ್ನು ವಿವಾಹವಾಗಲು NOC ನೀಡಿರಲಿಲ್ಲ. ಅಲ್ಲದೇ ತನ್ನ ಪತ್ನಿ ಮೆನಾಲ್ ಖಾನ್ ಅನಧಿಕೃತವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಗ್ಗೆ ಮುನೀರ್ ಅಹಮದ್‌ ಅವರು ಸಿಆರ್‌ಪಿಎಫ್‌ಗೂ ಮಾಹಿತಿ ನೀಡಿರಲಿಲ್ಲ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಪ್ರಕರಣ.. ಮಂಗಳೂರು ಕಮಿಷನರ್ ನೀಡಿದ ಮಾಹಿತಿ ಏನು..? 

CRPF ಯೋಧ ಮುನೀರ್ ಅಹಮದ್ ವಿರುದ್ಧ ರಾಷ್ಟ್ರದ ಭದ್ರತೆಗೆ ಆತಂಕ ಮತ್ತು ಕಾನೂನು ಪ್ರಕ್ರಿಯೆಗಳ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿಆರ್‌ಪಿಎಫ್‌ನಿಂದ ಮುನೀರ್ ಅಹಮದ್ ವಿರುದ್ಧ ಶಿಸ್ತುಕ್ರಮದ ಪ್ರಕ್ರಿಯೆ ಆರಂಭಿಸಲಾಗಿದೆ.


">April 30, 2025

ಸಿಆರ್‌ಪಿಎಫ್‌ನಿಂದ ಅನುಮತಿ ಪಡೆಯದೇ ಪಾಕಿಸ್ತಾನದ ಯುವತಿ ಜೊತೆ ಮದುವೆಯಾದ ಯೋಧ ಮುನೀರ್ ಅಹಮದ್ ಅನಿವಾರ್ಯವಾಗಿ ತನ್ನ ಪತ್ನಿಯನ್ನು ಪಾಕಿಸ್ತಾನದಲ್ಲಿ ಬಿಟ್ಟು ಬಂದಿದ್ದಾರೆ. ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸುವಾಗ ಮುನೀರ್ ಅಹಮದ್ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment