ತಂದೆಯಿಲ್ಲದ ಕೊರಗು.. ಹುತಾತ್ಮ ಯೋಧನ ಮಗಳ ಮದುವೆಗೆ ಬಂದ ಸೈನಿಕರು; ಇದು ಮನಮಿಡಿಯುವ ಸ್ಟೋರಿ!

author-image
admin
Updated On
ತಂದೆಯಿಲ್ಲದ ಕೊರಗು.. ಹುತಾತ್ಮ ಯೋಧನ ಮಗಳ ಮದುವೆಗೆ ಬಂದ ಸೈನಿಕರು; ಇದು ಮನಮಿಡಿಯುವ ಸ್ಟೋರಿ!
Advertisment
  • ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಸಿಆರ್‌ಪಿಎಫ್ ಯೋಧ
  • ಹುತಾತ್ಮ ಯೋಧ ಸತೀಶ್ ಕುಮಾರ್ ಅವರ ಮಗಳ ಮದುವೆ
  • ಮದುವೆ ಮನೆಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ ಸೈನಿಕರು

ರಣರಂಗದ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ್ದ ಯೋಧನ ಕುಟುಂಬ ಅನಾಥವಾಗಿತ್ತು. ಇರುವಂತಹ ಮಗಳಿಗೆ ಮದುವೆ ಮಾಡಬೇಕು ಅನ್ನೋದು ಯೋಧನ ಕುಟುಂಬದ ಮಹದಾಸೆಯಾಗಿತ್ತು. ಈ ಹೆಬ್ಬಯಕೆಯೇ ಭಾವೈಕ್ಯತೆ ಮತ್ತು ಗೌರವದ ವೇದಿಕೆ ಕಾರಣವಾಗಿದೆ. ಹುತಾತ್ಮ ಯೋಧ ಸತೀಶ್ ಕುಮಾರ್ ಅವರ ಮಗಳ ಮದುವೆಯ 'ಕನ್ಯಾದಾನ' ಮಾಡೋದಕ್ಕೆ ಸಿಆರ್‌ಪಿಎಫ್ ಸೈನಿಕರು ಮತ್ತು ಅಧಿಕಾರಿಗಳ ತಂಡ ಹರಿಯಾಣದ ಛತಾರ್ ಗ್ರಾಮಕ್ಕೆ ಬಂದು ಯೋಧನ ಮಗಳಿಗೆ ಅದ್ದೂರಿ ಮದುವೆಗೆ ಸಾಕ್ಷಿಯಾಗಿದ್ದಾರೆ.

ದೇಶಕ್ಕಾಗಿ ತಮ್ಮನ್ನ ತಾವು ಅರ್ಪಿಸಿಕೊಂಡು, ತ್ಯಾಗ ಮಾಡಿದ ವೀರ ಸಿಆರ್‌ಪಿಎಫ್ ಯೋಧ ಸತೀಶ್ ಕುಮಾರ್ ಅವರು, ಜಮ್ಮುವಿನ ಕಥುವಾದಲ್ಲಿ 2015ರ ಮಾರ್ಚ್ 2ನೇ ತಾರೀಖು ಹುತಾತ್ಮರಾಗಿದ್ದರು. ಸತೀಶ್ ಮೂಲತಃ ಹರಿಯಾಣದ ಛತಾರ್ ಗ್ರಾಮದವರು.

publive-image

ಯೋಧನ ಕುಟುಂಬದ ಮಗಳ ಮದುವೆ ಒಂದು ಲೆಕ್ಕದಲ್ಲಿ ಬಿಗಿಯಾದ ಕ್ಷಣವಾಗಿ ಕಾಣ್ತಿತ್ತು. ಯಾಕಂದ್ರೆ ಅಪ್ಪನ ಎದುರು ನನ್ನ ಜೀವನ ಟರ್ನ್​ ಆಗಬೇಕು ಅನ್ನೋದು ಆ ಹುತಾತ್ಮ ಯೋಧ ಸತೀಶ್ ಮಗಳ ಮಹತ್ವದ ಮನಸ್ಸಿನ ಆಸೆಯಾಗಿತ್ತು. ಆದ್ರೆ CRPF ಸಿಬ್ಬಂದಿ, ಸತೀಶ್ ಹುತಾತ್ಮರಾಗಿದ್ದ ಸ್ಥಳಕ್ಕೆ ಸ್ವಯಂ ಪ್ರೇರಿತವಾಗಿ ಬಂದು, ಮಗಳ ಕನ್ಯಾದಾನ ಮಾಡೋ ಸಮಾರಂಭವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸತೀಶ್ ಕುಮಾರ್ ಅವರೊಂದಿಗೆ ಸೇವೆ ಸಲ್ಲಿಸಿದ ಸೈನಿಕರು, ದುಃಖಿತ ಕುಟುಂಬದೊಂದಿಗೆ ಜೊತೆಯಾಗಿ ತಮ್ಮನ್ನ ತಾವು ಒಗ್ಗಟ್ಟಿನ ಸಂದೇಶ ಕೊಟ್ಟಿದ್ದಾರೆ. ಯೋಧನ ಮಗಳು, ಇದು ನನ್ನ ಪಾಲಿಗೆ ವಿಶೇಷ ದಿನ ಅಂತ ಭಾವಿಸಿದ್ದಾರೆ. ಜೊತೆಗೆ ತನ್ನ ತಂದೆಯ ಅನುಪಸ್ಥಿತಿ ಇದ್ರೂ, ನನ್ನ ತಂದೆಯ ರೂಪದಲ್ಲಿ ನನ್ನ ಮದ್ವೆ ಮಾಡ್ತಿದ್ದಾರೆ ಅಂತ ಮಗಳು ಕಣ್ಣೀರಾಕುತ್ತಾ ಇದ್ದಳು.

ಸಿಆರ್‌ಪಿಎಫ್‌ನ ಈ ಶೌರ್ಯ ಮತ್ತು ಸಹಾನುಭೂತಿಯು ಸಹೋದರತ್ವ ಮತ್ತು ತ್ಯಾಗದ ಆಳವಾದ ಬಂಧಗಳನ್ನು ನಾವು ನೀವೆಲ್ಲಾ ನೋಡಬಹುದು. ಕುಟುಂಬ ಮತ್ತು ಗ್ರಾಮಸ್ಥರು ಈ ಗೆಸ್ಚರ್‌ನಿಂದ ತೀವ್ರವಾಗಿ ಭಾವುಕರಾದರು. ಇದು, ವೀರ ಯೋಧ ಸತೀಶ್ ಅವರಿಗೆ ಗೌರವ ಮತ್ತು ಹುತಾತ್ಮರ ಕುಟುಂಬಕ್ಕೆ ಸಶಸ್ತ್ರ ಪಡೆಗಳ ಬದ್ಧತೆಗೆ ಸಾಕ್ಷಿಯಾಗಿದೆ ಅಂತ ಗ್ರಾಮಸ್ಥರು ಹೇಳಿದ್ದಾರೆ.

publive-image

ಕಳೆದ ಶನಿವಾರ ಅಂದ್ರೆ ನವೆಂಬರ್ 24ನೇ ತಾರೀಖು, ಛತ್ತರ್ ಗ್ರಾಮದ ಉಚ್ಚನಾ ಜಿಂದ್ ಅನ್ನೋ ಜಾಗದಲ್ಲಿ ಸತೀಶ್ ಕುಮಾರ್ ಅವರ ಮಗಳು ನಿಶಾ ಅವರ ಮದುವೆ ನಡೆಯಿತು. ವಧುವಿನ ಕಡೆಯಂತೆ ಸಿಆರ್‌ಪಿಎಫ್ ಟೀಂ, ಮದುವೆಯ ಮೆರವಣಿಗೆಯನ್ನು ಮಾಡಿದರು. ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಮನೆಗೆ ತುಂಬಿಸೋ ಶಾಸ್ತ್ರದಂತೆ ವಧುವನ್ನು ಬಿಟ್ಟುಕೊಡೋ ಸ್ಥಾನದಲ್ಲಿ ಕುಳಿತು, ತಂದೆಯ ಕರ್ತವ್ಯವನ್ನು ನಿರ್ವಹಿಸಿದರು. ಇದರ ಜೊತೆಗೆ ಇಡೀ ಗ್ರಾಮವೇ, ವಧು ನಿಶಾ ಅವರನ್ನು ಆರ್ಶೀವಾದ ಮಾಡೋದಕ್ಕೆ ಹಾಗೂ ಬೀಳ್ಕೊಡೋದಕ್ಕೆ ಜೊತೆಯಾದರು.

publive-image

ಯೋಧ ಸತೀಶ್ ಕುಮಾರ್ ಇಲ್ಲ.. ಅನ್ನೋ ರೀತಿ ಆಗಬಾರದು ಅಂತ ಡಿಐಜಿ ಕೋಮಲ್ ಸಿಂಗ್, ಡೆಪ್ಯುಟಿ ಕಮಾಂಡೆಂಟ್ ವೇದಪಾಲ್, ಸಹಾಯಕ ಕಮಾಂಡೆಂಟ್ ಕೃಷ್ಣ ಕುಮಾರ್ ಮತ್ತು ಗ್ರೂಪ್ ಸೆಂಟರ್ ಸೋನಿಪತ್‌ನ ಸಾಕಷ್ಟೂ ಸೈನಿಕರು ಮದುವೆಯಲ್ಲಿ ಮುಂದಿದ್ದರು. ಬೆಳಗ್ಗಿನ ಜಾವವೇ ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದಿದ್ರಿಂದ ಮದುವೆಯ ವಾತಾವರಣವನ್ನೇ ಬದಲಿಸಿ ಬಿಟ್ಟಿತು.

ಇದನ್ನೂ ಓದಿ: ಅಕ್ಕಿನೇನಿ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ; ಕಿರಿಮಗನ ಕೈ ಹಿಡಿದ ಈ ಚೆಲುವೆ ಯಾರು? 

ವಧುವಿನ ತಂದೆಯಾಗಿ ಮತ್ತು ಸಹೋದರನಾಗಿ ಶಾಸ್ತ್ರೋಕ್ತವಾಗಿ ನಡೆಸಿದ ಎಲ್ಲಾ ವಿಧಿವಿಧಾನಗಳಲ್ಲಿ ಸಿಆರ್‌ಪಿಎಫ್ ಅಧಿಕಾರಿಗಳು ಭಾಗವಹಿಸಿದರು. ಇದರ ಜೊತೆಗೆ, ಮದುವೆ ಹಿಂದಿನ ಸಮಾರಂಭಗಳು, ಮದುವೆ ಪದ್ದತಿ, ವಧು ಮತ್ತು ಅವಳ ಸಹೋದರಿಯನ್ನು ವೇದಿಕೆಗೆ ಕರೆದುಕೊಂಡು ಹೋಗೋದು ಮತ್ತೆ ಮಂಟಪದಲ್ಲಿ ಸುತ್ತು ಹಾಕೋ ಕಾರ್ಯಕ್ರಮಕ್ಕೆ ಸಿಆರ್​ಪಿಎಫ್​​ ಟೀಂ ಸಕ್ರಿಯವಾಗಿ ಪಾಲ್ಗೊಂಡಿದ್ದರು ವಧುವಿಗೆ ಆರ್ಶೀವಾದ ಮಾಡ್ತಾ ಸಿಆರ್‌ಪಿಎಫ್ ತಂಡ ಹಾಗೂ ಇಡೀ ಗ್ರಾಮದ ಜನರು ಧಾರೆ ಎರೆದರು. ಇದ್ರಿಂದ ಅಪ್ಪ ಇಲ್ಲ ಅನ್ನೋ ಭಾವನೆಯನ್ನೇ ವಧುವಿಗೆ ಬರದಂತೆ ಸಿಆರ್​​ಪಿಎಫ್​ ಯೋಧರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment