/newsfirstlive-kannada/media/post_attachments/wp-content/uploads/2024/09/JOBS_INCOME_TAX.jpg)
ಪಿಯುಸಿ ಪಾಸ್ ಆಗಿರುವ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್- ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ (CSIR- CRRI) ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಈ ಕೆಲಸಗಳಿಗೆ ಪುರುಷರು ಹಾಗೂ ಮಹಿಳೆಯರು ಇಬ್ಬರು ಅರ್ಜಿ ಸಲ್ಲಿಕೆ ಮಾಡಬಹುದು.
ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ರಿಲೀಸ್ ಮಾಡಿದ್ದು ಇದರಲ್ಲಿ ಉದ್ಯೋಗದ ಎಲ್ಲ ಮಾಹಿತಿ ನೀಡಿದೆ. ಉದ್ಯೋಗಾಕಾಂಕ್ಷಿಗಳು ಇವುಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಸಲ್ಲಿಸಲು ಲಿಂಕ್ ಅನ್ನು ಮಾರ್ಚ್ 22ರ ಬೆಳಗ್ಗೆ 10 ಗಂಟೆಯಿಂದ ಆರಂಭಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಲಿಂಕ್ ಇಲ್ಲಿದೆ.
ಯಾವ್ಯಾವ ಉದ್ಯೋಗಗಳು; ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಜೂನಿಯರ್ ಸ್ಟೆನೋಗ್ರಾಫರ್
ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ; 209
ಶೈಕ್ಷಣಿಕ ವಿದ್ಯಾರ್ಹತೆ; ದ್ವಿತೀಯ ಪಿಯುಸಿ ಪಾಸ್
ಮಾಸಿಕ ವೇತನ ಶ್ರೇಣಿ;
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ- 19,900 ರಿಂದ 63,200 ರೂಪಾಯಿ
ಜೂನಿಯರ್ ಸ್ಟೆನೋಗ್ರಾಫರ್- 25,500 ರಿಂದ 81,100 ರೂಪಾಯಿ
ಇದನ್ನೂ ಓದಿ: ವೈದ್ಯಕೀಯ ಮಹಾವಿದ್ಯಾಲಯದಲ್ಲಿ 102 ಹುದ್ದೆಗಳ ನೇಮಕ.. ಆಯ್ಕೆ ಹೇಗೆ ಗೊತ್ತಾ?
ಆಯ್ಕೆ ಪ್ರಕ್ರಿಯೆ; ಲಿಖಿತ ಪರೀಕ್ಷೆ ಹಾಗೂ ಪ್ರಾವೀಣ್ಯತೆ ಪರೀಕ್ಷೆ
ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗೆ- ಮಾನಸಿಕ ಸಾಮರ್ಥ್ಯ ಪರೀಕ್ಷೆ ಇರುತ್ತೆ
ಅರ್ಜಿ ಶುಲ್ಕ ಎಷ್ಟು;
ಸಾಮಾನ್ಯ, ಓಬಿಸಿ, ಇಡಬ್ಲುಎಸ್- 500 ರೂಪಾಯಿ
ಎಸ್​ಸಿ, ಎಸ್​ಟಿ, ಮಹಿಳಾ ಅಭ್ಯರ್ಥಿಗಳು- ಇಲ್ಲ
ವಯೋಮಿತಿ- 18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು
ಉದ್ಯೋಗದ ಪ್ರಮುಖ ದಿನಾಂಕ
ನೋಟಿಫಿಕೆಶನ್ ರಿಲೀಸ್ ದಿನಾಂಕ- 20 ಮರ್ಚ್
ಅರ್ಜಿ ಹಾಕಲು ಆರಂಭದ ದಿನಾಂಕ- 22 ಮಾರ್ಚ್​
ಅರ್ಜಿ ಹಾಕಲು ಕೊನೆಯ ದಿನಾಂಕ- 21 ಏಪ್ರಿಲ್ ​
ಪರೀಕ್ಷೆ ನಡೆಯುವ ದಿನಾಂಕ- ಮೇ ಅಥವಾ ಜೂನ್
ಅರ್ಜಿ ಸಲ್ಲಿಕೆಗೆ ಲಿಂಕ್- http://www.crridom.gov.in
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ