Advertisment

ಬೌಲರ್​ಗಳ ಪಾಲಿಗೆ CSK ಬ್ಯಾಟ್ಸ್​ಮನ್ ವಿಲನ್.. ಪ್ರತಿ 5 ಎಸೆತದಲ್ಲಿ ಬೌಂಡರಿ, ಸಿಕ್ಸರ್​ ಪಕ್ಕಾ​..!

author-image
Bheemappa
Updated On
ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!
Advertisment
  • ಮಿಡಿಯಂ ಪೇಸ್​ ಬೌಲಿಂಗ್ ಜೊತೆಗೆ ​ವಿಕೆಟ್​ ಟೇಕರ್ ಆಗಿದ್ದಾರೆ
  • ಲಕ್ನೋದ ಯುವ ವೇಗಿ ಮಯಾಂಕ್​ ಯಾದವ್​, IPLನಲ್ಲಿ ಸೆನ್ಸೇಷನ್​
  • ಶರವೇಗದ ಸರದಾರನ ಆಟಕ್ಕೆ ಸೆಲೆಕ್ಟರ್ಸ್​ ಕೂಡ ಕ್ಲೀನ್​ ಬೋಲ್ಡ್​

ಈ ಬಾರಿಯ ವಿಶ್ವಕಪ್​ ತಂಡದಲ್ಲಿ ಯಾರಿಗೆ ಸ್ಥಾನ ಸಿಗುತ್ತೋ, ಇಲ್ವೋ ಗೊತ್ತಿಲ್ಲ. ಆದ್ರೆ, ಸ್ಫೋಟಕ ಆಟವಾಡ್ತಿರೋ ಶಿವಂ ದುಬೆ, ಶರವೇಗಿ ಮಯಾಂಕ್​ ಯಾದವ್​ ಅಂತೂ ವಿಂಡೀಸ್​ ಫ್ಲೈಟ್​ ಹತ್ತೋದು ಕನ್​ಫರ್ಮ್​​. ಅಬ್ಬರದ ಪರ್ಫಾಮೆನ್ಸ್​ ಮಾತ್ರವಲ್ಲ, ಇವರಿಬ್ಬರ ಆಯ್ಕೆ ಹಿಂದೆ ಸಿಕ್ಕಾಪಟ್ಟೆ ಲೆಕ್ಕಾಚಾರವಿದೆ.

Advertisment

ಐಪಿಎಲ್​ ಕ್ರಿಕೆಟ್​​ ಜಾತ್ರೆ ಅಭಿಮಾನಿಗಳಿಗೆ ಸಖತ್​ ಕಿಕ್​ ಕೊಡ್ತಿದೆ. ಇದ್ರ ನಡುವೆ ಜೂನ್​ನಲ್ಲಿ ವೆಸ್ಟ್​ ಇಂಡೀಸ್​​ -ಯುಎಸ್​ಎನಲ್ಲಿ ನಡೆಯೋ ಟಿ20 ವಿಶ್ವಕಪ್​ನ ಸಿದ್ಧತೆ ಆರಂಭವಾಗಿದೆ. ಮಹತ್ವದ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸಿದ್ಧತೆಗಳು ಸೈಲೆಂಟಾಗಿ ನಡೀತಾ ಇದ್ದು, ಕೆಲವೇ ದಿನಗಳಲ್ಲಿ ಟೀಮ್​ ಅನೌನ್ಸ್​ ಆಗಲಿದೆ. ಐಪಿಎಲ್​ನಲ್ಲಿ ಆಟಗಾರರ ಪರ್ಫಾಮೆನ್ಸ್​​ ಮೇಲೆ ಸೆಲೆಕ್ಟರ್ಸ್​​ ಹದ್ದಿನ ಕಣ್ಣಿಟ್ಟಿದ್ದಾರೆ. ಮಿಲಿಯನ್​ ಡಾಲರ್​​ ಟೂರ್ನಿಯಲ್ಲಿ ಅಬ್ಬರಿಸ್ತಿರೋ ಆಟಗಾರರು ವಿಶ್ವಕಪ್​ ಟಿಕೆಟ್​​ಗಿಟ್ಟಿಸಿಕೊಳ್ಳೋ ಸರ್ಕಸ್​​ ಮಾಡ್ತಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರು ಯುವಕರ ಕೊಂದ ಪಾಪಿಗಳು

publive-image

ಟಾರ್ಗೆಟ್​​ ವಿಶ್ವಕಪ್​.. ಐಪಿಎಲ್​ನಲ್ಲಿ ‘ಶಿವತಾಂಡವ’..! ​

ಈ ಬಾರಿಯ ಐಪಿಎಲ್​ನಲ್ಲಿ ಶಿವಂ ದುಬೆ ರುದ್ರ ನರ್ತನ ಮಾಡ್ತಿದ್ದಾರೆ. ಪ್ಯಾಡ್​ ಕಟ್ಟಿ ಬ್ಯಾಟಿಂಗ್​ಗಿಳಿದ್ರೆ ಸಾಕು, ಬೌಂಡರಿ, ಸಿಕ್ಸರ್​ ಸುರಿಮಳೆ ಸುರಿಸ್ತಿದ್ದಾರೆ. ಕನ್ಸಿಸ್ಟೆಂಟ್​ ಆಗಿ ಅಬ್ಬರದ ಆಟವಾಡ್ತಿರೋ ದುಬೆ, ಬೌಲರ್​ಗಳ ಪಾಲಿಗೆ ವಿಲನ್​ ಆಗಿದ್ದಾರೆ. ಪ್ರತಿ 5 ಎಸೆತಕ್ಕೆ ಒಂದು ಬೌಂಡರಿ ಸಿಡಿಸಿದ ರೆಕಾರ್ಡ್​ ಹೊಂದಿರುವ ದುಬೆ, 8 ಪಂದ್ಯವನ್ನಾಡಿ, 311 ರನ್​ಗಳಿಸಿದ್ದಾರೆ. 23 ಬೌಂಡರಿ, 20 ಸಿಕ್ಸರ್​​ ಸಿಡಿಸಿರುವ ದುಬೆ, ಬರೋಬ್ಬರಿ 160.86ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಶಿವತಾಂಡವಕ್ಕೆ ಸೆಲೆಕ್ಟರ್ಸ್​ ಕೂಡ ಇಂಪ್ರೆಸ್​ ಆಗಿದ್ದಾರೆ.

Advertisment

ಸ್ಪಿನ್ನರ್​​ಗಳ ವಿರುದ್ಧ ದುಬೆ ದರ್ಬಾರ್​​, ವಿಶ್ವಕಪ್​ ಟಿಕೆಟ್​ ಫಿಕ್ಸ್​.!

ವಿಶ್ವಕಪ್​ ಟೂರ್ನಿ ನಡೆಯೋ ವೆಸ್ಟ್​ ಇಂಡೀಸ್​ ಹಾಗೂ ಯುಎಸ್​​ಎನ ಪಿಚ್​ಗಳು SLOW & LOW. ಇಲ್ಲಿ ಸ್ಪಿನ್ನರ್​​ಗಳೇ ರಿಯಲ್​ ಮ್ಯಾಚ್​ ವಿನ್ನರ್ಸ್. ಈ ಕಂಡೀಷನ್​​ಗೆ ಶಿವಮ್​ ದುಬೆ ಸಖತ್​ ಸೂಟ್​ ಆಗ್ತಾರೆ. ಸ್ಪಿನ್ನರ್ಸ್​​ಗಳ ಎದುರು ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​ ಹೊಂದಿರುವ ದುಬೆ, ಈ ಬಾರಿಯ ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಉಳಿದೆಲ್ಲ ಭಾರತೀಯ ಬ್ಯಾಟ್ಸ್​ಮನ್​ಗಳಿಗಿಂತ ದುಬೆ, ಸ್ಪಿನ್​ ವಿರುದ್ಧ ಉತ್ತಮ ಬ್ಯಾಟಿಂಗ್​ ನಡೆಸ್ತಿದ್ದಾರೆ.

ಇದನ್ನೂ ಓದಿ: ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?

ಐಪಿಎಲ್​ 2024ರಲ್ಲಿ ಸ್ಪಿನ್ನರ್​ಗಳ ಎದುರು ಘರ್ಜಿಸಿರುವ ಶಿವಂ ದುಬೆ 38 ಎಸೆತಗಳನ್ನ ಎದುರಿಸಿ 66 ರನ್ ಗಳಿಸಿದ್ದಾರೆ. ಬರೋಬ್ಬರಿ 210.63ರ ಸ್ಟ್ರೈಕ್​ರೇಟ್​ನಲ್ಲಿ 2 ಬೌಂಡರಿ, 7 ಸಿಕ್ಸರ್​ ಸಿಡಿಸಿದ್ದಾರೆ.

Advertisment

ಟಾಪ್​ ಆರ್ಡರ್​​ಗೂ ಸೈ, ಫಿನಿಷರ್​​​ ರೋಲ್​ಗೂ ಜೈ​.!

ಟಾಪ್​ ಆರ್ಡರ್​​ನಲ್ಲಿ ಹಾಗೂ ಫಿನಿಷರ್​​ ರೋಲ್​ ಎರಡನ್ನೂ ಸಮರ್ಥವಾಗಿ ನಿಭಾಯಿಸೋ ಕಲೆ ಶಿವಂ​ ದುಬೆಗಿದೆ. ದುಬೆ ಟೀಮ್​ ಇಂಡಿಯಾದಲ್ಲಿದ್ರೆ, ತಂಡಕ್ಕೆ ಬಿಗ್​ ಅಡ್ವಾಂಟೇಜ್​ ಆಗಲಿದೆ. ​ಮಿಡಲ್​ ಓವರ್​​ಗಳಲ್ಲಿ ಕಾಲ್ಕುಲೇಟೆಡ್​ ಇನ್ನಿಂಗ್ಸ್​ ಕಟ್ಟೋ ದುಬೆ, ಡೆತ್​ ಓವರ್​ಗಳಲ್ಲಿ ರೌದ್ರಾವತಾರ ತಾಳ್ತ್ರಾರೆ. ಈ ಐಪಿಎಲ್​ನಲ್ಲೂ ಡೆತ್​ ಓವರ್​ಗಳಲ್ಲಿ ದರ್ಬಾರ್​ ನಡೆಸಿದ್ದಾರೆ.

ಡೆತ್​ ಓವರ್​​ಗಳಲ್ಲಿ ದುಬೆ ದರ್ಬಾರ್​

publive-image

ಇದನ್ನೂ ಓದಿ:KKR vs PBKS; ಬೌಂಡರಿ, ಸಿಕ್ಸರ್​ಗಳಿಂದ 400 ರನ್ಸ್​.. ಪಂದ್ಯದಲ್ಲಿ ಏನೇನು ರೆಕಾರ್ಡ್​ ಆಗಿದ್ದಾವೆ ಗೊತ್ತಾ?

ಈ ಸೀಸನ್​ ಐಪಿಎಲ್​ನಲ್ಲಿ 17ರಿಂದ 20ರವರೆಗಿನ ಓವರ್​ಗಳಲ್ಲಿ 45 ಎಸೆತಗಳನ್ನ ಎದುರಿಸಿರುವ ಶಿವಂ ದುಬೆ, 80 ರನ್​ ಸಿಡಿಸಿದ್ದಾರೆ. 7 ಬೌಂಡರಿ, 6 ಸಿಕ್ಸರ್​ ಚಚ್ಚಿರುವ ದುಬೆಯ ಸ್ಟ್ರೈಕ್​ರೇಟ್​ 177.77 ಆಗಿದೆ. ಬ್ಯಾಟಿಂಗ್​ ಮಾತ್ರವಲ್ಲ, ದುಬೆ ತಂಡದಲ್ಲಿದ್ರೆ ಕ್ಯಾಪ್ಟನ್​ಗೆ​ ಎಕ್ಸ್​​ ಟ್ರಾ ಬೌಲಿಂಗ್​ ಆಪ್ಷನ್​​ ಕೂಡ ಸಿಗಲಿದೆ. ಮಿಡಿಯಂ ಪೇಸ್​ ಬೌಲಿಂಗ್​ ಮಾಡಬಲ್ಲ ದುಬೆ, ವಿಕೆಟ್​ ಟೇಕಿಂಗ್​ ಎಬಿಲಿಟಿ ಹೊಂದಿದ್ದಾರೆ. ಇದು ಟೀಮ್​ ಇಂಡಿಯಾದ ಬಲವನ್ನ ಹೆಚ್ಚಿಸಲಿದೆ. ಈ ಎಲ್ಲಾ ಕಾರಣದಿಂದ ದುಬೆಗೆ ವಿಶ್ವಕಪ್​​ ತಂಡದಲ್ಲಿ ಸ್ಥಾನವನ್ನ ಸೆಲೆಕ್ಷನ್​ ಕಮಿಟಿ ಮುಂದಾಗಿದೆ.

Advertisment

ಶರವೇಗಿ ಮಯಾಂಕ್​ ಯಾದವ್​​ಗೂ ವಿಶ್ವಕಪ್​ ಟಿಕೆಟ್​..?

publive-image

ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಯುವ ವೇಗಿ ಮಯಾಂಕ್​ ಯಾದವ್ ಪ್ರಸಕ್ತ ಐಪಿಎಲ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ಕನ್ಸಿಸ್ಟೆಂಟ್​ ಆಗಿ 150+ ವೇಗದಲ್ಲಿ ಬೌಲಿಂಗ್​ ಮಾಡ್ತಿರುವ ಶರವೇಗದ ಸರದಾರನ ಆಟಕ್ಕೆ ಸೆಲೆಕ್ಟರ್ಸ್​ ಕೂಡ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಆದ್ರೆ, ಇಂಜುರಿ ಸಮಸ್ಯೆ ಮಯಾಂಕ್​ ಆಯ್ಕೆಗೆ ಅಡ್ಡಗಾಲಾಗಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಸಿಗದಿದ್ರೂ ನೆಟ್​ ಬೌಲರ್​ ಆಗಿ ಮಯಾಂಕ್​ ಆಯ್ಕೆ ಮಾಡೋ ಚರ್ಚೆ ನಡೆದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment