/newsfirstlive-kannada/media/post_attachments/wp-content/uploads/2024/03/Shivam-Dube.jpg)
ಇಂದು ಚೇಪಕ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​​​ಗೆ ಚೆನ್ನೈ ಸೂಪರ್​ ಕಿಂಗ್ಸ್​​ ಬೃಹತ್​​​ ಟಾರ್ಗೆಟ್​ ಕೊಟ್ಟಿದೆ.
ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡದ ಪರ ಓಪನರ್​ ಆಗಿ ಬಂದ ಕನ್ನಡಿಗ ರಚಿನ್​​ ರವೀಂದ್ರ ಕೇವಲ 20 ಬಾಲ್​ನಲ್ಲಿ 3 ಸಿಕ್ಸರ್​​, 6 ಫೋರ್​​ ಸಿಡಿಸಿದ್ರು. ಋತುರಾಜ್​​ ಗಾಯಕ್ವಾಡ್​​ 1 ಸಿಕ್ಸರ್​​, 6 ಫೋರ್​ ಸಮೇತ 46 ರನ್​ ಬಾರಿಸಿದ್ರು.
ರಹಾನೆ 12, ಬಳಿಕ ಬಂದ ಶಿವಂ ದುಬೆ ಕೇವಲ 23 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​​ 51 ರನ್​​, ಮಿಚೆಲ್​​​ 24, ಸಮೀರ್​ 14 ರನ್​ ಗಳಿಸಿದ್ದಾರೆ. ಚೆನ್ನೈ ನಿಗದಿತ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 206 ರನ್​​ ಪೇರಿಸಿದೆ. ಈ ಮೂಲಕ ಗುಜರಾತ್​ ಟೈಟನ್ಸ್​ಗೆ 207 ರನ್​ಗಳ ಬೃಹತ್​ ಗುರಿ ನೀಡಿದೆ.
ಇದನ್ನೂ ಓದಿ: ‘ಯಾರು ಗುರುತೇ ಹಿಡಿಯದ ಜಾಗದಲ್ಲಿ ಇದ್ದೆವು’- 2 ತಿಂಗಳ ಬ್ರೇಕ್ ಬಗ್ಗೆ ಕೊಹ್ಲಿ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us