/newsfirstlive-kannada/media/post_attachments/wp-content/uploads/2025/03/CSK_Nitish_Rana.jpg)
ಸೋಲು.. ಸೋಲು.. ಈ ಸೀಸನ್ ಐಪಿಎಲ್ನಲ್ಲಿ ಚಾಂಪಿಯನ್ ಸೋಲಿನ ಸುಳಿಗೆ ಸಿಲುಕಿ ಒದ್ದಾಡ್ತಿದೆ. ಸತತ 4 ಸೋಲುಗಳು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಸೋಲಿನ ಹತಾಶೆಯಲ್ಲಿದ ಫ್ಯಾನ್ಸ್ಗೆ ಗುಡ್ನ್ಯೂಸ್ ಹೊರ ಬಿದ್ದಿದೆ. ಐಪಿಎಲ್ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಲ್ಲಿ ಬದಲಾವಣೆ ಆಗಿದೆ. ಥಲಾ ಧೋನಿ ಮತ್ತೆ ಸಿಂಹಾಸನವೇರಿದ್ದಾರೆ.
ಐಪಿಎಲ್ ಸೀಸನ್ 18ರ 25ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಚೆನ್ನೈನ ಚೆಪಾಕ್ನಲ್ಲಿ ಬಿಗ್ ಬ್ಯಾಟಲ್ ನಡೆಯಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್- ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ. ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಚೆನ್ನೈ, ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿರೋ ಕೆಕೆಆರ್ ಎರಡೂ ತಂಡಗಳಿಗೆ ಗೆಲುವೊಂದೇ ಗುರಿಯಾಗಿದೆ.
ಋತುರಾಜ್ ಔಟ್.. ಚಾಣಾಕ್ಷ ಧೋನಿ ಬ್ಯಾಕ್..!
ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನ ಬಗ್ಗು ಬಡಿದು ಐಪಿಎಲ್ ಸೀಸನ್ 18ರಲ್ಲಿ ಶುಭಾರಂಭ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಸತತ ಸೋಲುಂಡಿದೆ. ಸತತ 4 ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಚೆನ್ನೈ ಡ್ರೆಸ್ಸಿಂಗ್ ರೂಮ್, ಆಟಗಾರರು ಹಾಗೂ ಅಭಿಮಾನಿಗಳ ವಲಯವನ್ನ ಹತಾಶೆ ಆವರಿಸಿದೆ. ಆ ಬೇಸರದ ನಡುವೆಯೂ ಇಂದಿನ ಪಂದ್ಯಕ್ಕೂ ಮುನ್ನ ಹೊಸ ಹುರುಪು ಬಂದಿದೆ. ಚಾಣಕ್ಷ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಸಾರಥ್ಯ ವಹಿಸಿಕೊಂಡಿದ್ದಾರೆ.
ಎಲ್ಬೋ ಇಂಜುರಿಗೆ ತುತ್ತಾಗಿರುವ ಋತುರಾಜ್ ಗಾಯಕ್ವಾಡ್ ಈ ಐಪಿಎಲ್ನಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ಎಮ್.ಎಸ್ ಧೋನಿ ಮತ್ತೆ ಸಿಎಸ್ಕೆ ತಂಡದ ನಾಯಕನ ಪಟ್ಟವೇರಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಧೋನಿ ಚೆನ್ನೈ ತಂಡವನ್ನ ಮುನ್ನಡೆಸಲಿದ್ದಾರೆ. 5 ಬಾರಿ ತಂಡವನ್ನ ಚಾಂಪಿಯನ್ ಮಾಡಿದ ಧೋನಿ ಮತ್ತೆ ನಾಯಕನ ಗಾದಿಗೇರಿರೋದು ಇಡೀ ತಂಡದಲ್ಲಿ ಹೊಸ ಹುರುಪು ತಂದಿದೆ. ಗೆಲುವಿನ ಟ್ರ್ಯಾಕ್ಗೆ ಮರಳೋ ವಿಶ್ವಾಸಮೂಡಿದೆ.
1 ಗೆಲುವು, 4 ಸೋಲು.. ಪ್ಲೇ ಆಫ್ ಹಾದಿ ಕಠಿಣ.!
ಸಿಎಸ್ಕೆ ಸಿಂಹಾಸನ ಏರಿರುವ ಕೂಲ್ ಕ್ಯಾಪ್ಟನ್ ಮುಂದೆ ಸದ್ಯ ಸಾಲು ಸಾಲು ಸವಾಲುಗಳಿವೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೋ ಇನ್ಕನ್ಸಿಸ್ಟೆನ್ಸಿ ಚೆನ್ನೈ ತಂಡವನ್ನ ಕಾಡ್ತಿದೆ. ಫೀಲ್ಡಿಂಗ್ ಅಂತೂ ಅಧೋಗತಿಗೆ ತಲುಪಿದೆ. ಆಟಗಾರರಲ್ಲಿ ಆತ್ಮವಿಶ್ವಾಸ ಕಳೆದುಹೋಗಿದೆ. ಈ ಎಲ್ಲವನ್ನೂ ರೈಟ್ ಟ್ರ್ಯಾಕ್ಗೆ ತರೋ ದೊಡ್ಡ ಸವಾಲು ಧೋನಿಯ ಮುಂದಿದೆ. ಆಡಿದ 1 ಪಂದ್ಯದಲ್ಲಿ ಮಾತ್ರ ಗೆದ್ದು 4 ಪಂದ್ಯ ಸೋತಿರುವ ಚೆನ್ನೈ ತಂಡದ ಪ್ಲೇ ಆಫ್ ಹಾದಿ ಸುಲಭದ್ದಂತೂ ಅಲ್ಲ. ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲುವು ಬೇಕಿದೆ. ಗೆಲುವಿನ ಜೊತೆಗೆ ಮೈನಸ್ ಆಗಿರೋ ರನ್ರೇಟ್ನೂ ಪ್ಲಸ್ ಮಾಡಿಕೊಳ್ಳಬೇಕಿದೆ.
ಫಿನಿಕ್ಸ್ನಂತೆ ಕಮ್ಬ್ಯಾಕ್ ಮಾಡುತ್ತಾ ಸಿಎಸ್ಕೆ.?
ಆಟಗಾರರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದು, ಫಾರ್ಮ್ನಲ್ಲಿ ಇಲ್ಲದಿರೋ ಆಟಗಾರರಿಂದ ಪರ್ಫಾಮೆನ್ಸ್ ಹೊರ ತೆಗೆಯೋದ್ರಲ್ಲಿ ಧೋನಿ ಚಾಣಕ್ಯ ಅನ್ನೋದು ಇಡೀ ಕ್ರಿಕೆಟ್ ಲೋಕಕ್ಕೆ ಗೊತ್ತಿರೋ ವಿಚಾರ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿರೋ ಚೆನ್ನೈ ಫಿನಿಕ್ಸ್ನಂತೆ ಎದ್ದು ಬಂದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:ಗೆರೆ ಎಳೆದು ಬ್ಯಾಟ್ ಕುಟ್ಟಿ ಅಗ್ರೆಸನ್.. ಕಾಂತಾರ ಸ್ಟೈಲ್ ಸಂಭ್ರಮದ ಬಗ್ಗೆ ರಾಹುಲ್ ಏನಂದ್ರು..?
ಚೆನ್ನೈನ ಎದುರಾಳಿ ಕೆಕೆಆರ್ ಪರಿಸ್ಥಿತಿ ಏನು ತುಂಬಾ ಭಿನ್ನವಾಗಿಲ್ಲ. ಹಾಲಿ ಚಾಂಪಿಯನ್ ತಂಡವನ್ನ ಇನ್ಕನ್ಸಿಸ್ಟೆನ್ಸಿ ಆವರಿಸಿದೆ. ಆಡಿದ 5 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಗೆದ್ದಿರುವ ಕೆಕೆಆರ್ 3 ಪಂದ್ಯಗಳನ್ನ ಸೋತಿದೆ. ಆಟಗಾರರು ಹೇಳಿಕೊಳ್ಳುವಂತಾ ಪರ್ಫಾಮೆನ್ಸ್ ನೀಡಿಲ್ಲ. ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಿಯಾಗಿರೋ ಕೆಕೆಆರ್ ಪಾಲಿಗೂ ಇಂದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಒಂದೊಳ್ಳೆ ಬ್ಯಾಟಲ್ನ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಸತತ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್ಕೆ ಇಂದು ಹೊಸ ಹುರುಪಿನಲ್ಲಿ ಕಣಕ್ಕಿಳಿಯಲಿದೆ. ಬೇಸರಗೊಂಡ ಸಿಎಸ್ಕೆ ಫ್ಯಾನ್ಸ್ ಕೂಡ ಸ್ಟೇಡಿಯಂಗೆ ಹೊಸ ಕನಸಿನೊಂದಿಗೆ ಬರಲಿದ್ದಾರೆ. ಚೆಪಾಕ್ ಸ್ಟೇಡಿಯಂ ಸಂಪೂರ್ಣ ಯೆಲ್ಲೋಮಯ ಆಗೋದ್ರಲ್ಲಿ ನೋ ಡೌಟ್. ಆದ್ರೆ, ಚೆನ್ನೈ ಗೆಲುವಿನ ಹಳಿಗೆ ಮರಳುತ್ತಾ ಅನ್ನೋದೆ ಬಿಗ್ ಕೊಶ್ಚನ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ