MS ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಿಎಸ್​ಕೆ ಕೋಚ್​.. ಮಾಹಿಗೆ ಏನಾಗಿದೆ ಗೊತ್ತಾ?

author-image
Bheemappa
Updated On
IPL ಕದನದಲ್ಲಿ ಅಭಿಮಾನಿಗಳಿಗೆ ಭಾವುಕ ಕ್ಷಣ.. ಕೊಹ್ಲಿ-ಧೋನಿ ಕೊನೆಯ ಬಾರಿಗೆ ಮುಖಾಮುಖಿ..?
Advertisment
  • ಆರ್​ಸಿಬಿ ವಿರುದ್ಧ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದ ಎಂ.ಎಸ್ ಧೋನಿ
  • ಕ್ರೀಸ್​ನಲ್ಲಿ ಬ್ಯಾಟ್ಸ್​ಮನ್​ ಯಾರಿದ್ದಾರೆಂದು ನೋಡಿ ಬ್ಯಾಟಿಂಗ್ ಬರ್ತಾರಾ?
  • ಧೋನಿಗೆ ಏನಾಗಿದೆ, ಇಷ್ಟು ಓವರ್​ ಬ್ಯಾಟಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ವಾ?

ಐಪಿಎಲ್​ನಲ್ಲಿ ಈಗಾಗಲೇ 3 ಪಂದ್ಯ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಮ್ಯಾಚ್ ಸೋತು ಅವಮಾನಕ್ಕೆ ಒಳಗಾಗಿದೆ. ತಂಡದಲ್ಲಿ ವಿಕೆಟ್​ ಕೀಪರ್ ಮಹೇಂದ್ರ ಸಿಂಗ್​ ಧೋನಿ ಅವರ ಬ್ಯಾಟಿಂಗ್ ಮುಖ್ಯ ಪಾತ್ರ ವಹಿಸುತ್ತದೆ. ಆದ್ರೆ ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ಧೋನಿ 9ನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಬಂದಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಚೆನ್ನೈ ತಂಡದ ಕೋಚ್ ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, ಎಂ.ಎಸ್ ಧೋನಿಗೆ ಈಗ 43 ವರ್ಷ. ಅವರ ಫಿಟ್ನೆಸ್​ ಮೊದಲಿನಂತೆ ಇಲ್ಲ. ಆದರೆ ತಂಡಕ್ಕಾಗಿ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಸ್ಥಾನ ನಿಗದಿ ಮಾಡಲಾಗುತ್ತಿದೆ. ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ 9ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡಿದ್ದರು. ಇದಾದ ಮೇಲೆ ರಾಜಸ್ಥಾನದ ಜೊತೆ 7ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿದ್ದರು. ಇದಕ್ಕೆ ತೀವ್ರ ಟೀಕೆಗಳು ಬಂದಿದ್ದಕ್ಕೆ ಇದನ್ನೆಲ್ಲ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೆನ್ನೈಗೆ ಮತ್ತೆ ಬಿಗ್ ಶಾಕ್.. ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಐಪಿಎಲ್ ತಂಡ RCB

publive-image

ಎಂಎಸ್ ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಕಷ್ಟ ಆಗಿದ್ದರೂ ಅವರು ತಂಡದಲ್ಲಿ ಚೆನ್ನಾಗಿಯೇ ಮುಂದೆ ಸಾಗುತ್ತಿದ್ದಾರೆ. ಆದ್ರೆ 10 ಓವರ್​ಗಳಷ್ಟು ಬ್ಯಾಟಿಂಗ್ ಮಾಡಲು ಅವರಿಗೆ ಸಾಧ್ಯವಿಲ್ಲ. ಮೊದಲಿನಂತೆ ಆರೋಗ್ಯ ಇದ್ರೆ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಅದು ಈಗ ಆಗಲ್ಲ. ಹೀಗಾಗಿ ಬ್ಯಾಟಿಂಗ್​ನಲ್ಲಿ ಅವರ ಸ್ಥಾನ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.

ಚೆನ್ನೈ ತಂಡಕ್ಕೆ ಧೋನಿಯೇ ಅಮೂಲ್ಯ. ಅವರ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈಗ ಅವರಿಗೆ 10 ಓವರ್​ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ 13- 14 ಓವರ್​ ಮುಗಿದ ಮೇಲೆ ಕ್ರೀಸ್​ನಲ್ಲಿ ಯಾರಿದ್ದಾರೆ ಎಂದು ನೋಡಿ ಅವರನ್ನು ಬ್ಯಾಟಿಂಗ್ ಮಾಡಲು ಕಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment