/newsfirstlive-kannada/media/post_attachments/wp-content/uploads/2024/10/MS_DHONI_PANT.jpg)
ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆಯುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಎಡಗೈ ಬ್ಯಾಟ್ಸ್​ಮನ್ ಆಗಿರುವ ಪಂತ್ ಅದ್ಭುತ ವಿಕೆಟ್ ಕೀಪರ್ ಕೂಡ ಹೌದು. ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಕೆಲ ವರ್ಷಗಳಿಂದ ಬ್ಯಾಟ್ ಬೀಸಿರುವ ಪಂತ್ ಅಪಘಾತದ ಬಳಿಕ ವಾಪಸ್ ಬಂದ ನಂತರವು ಡೆಲ್ಲಿ ತಂಡ ಮತ್ತೆ ಸ್ವಾಗತ ಕೋರಿತ್ತು. ಆದರೆ ಐಪಿಎಲ್​​ನಲ್ಲಿ ರಿಟೈನ್​, ರಿಲೀಸ್ ಸಾಮಾನ್ಯವಾದ್ದರಿಂದ ರಿಷಬ್ ಪಂತ್ ಚೆನ್ನೈ ಟೀಮ್​ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್​ ತಂಡ ಭವಿಷ್ಯದ ಸ್ಟಾರ್ ಪ್ಲೇಯರ್​ನ ಹುಡುಕಾಟದಲ್ಲಿದೆ. ಏಕೆಂದರೆ ಚೆನ್ನೈ ಹೆಸರು ಎಲ್ಲ ಕಡೆ ಪ್ರಚಾರ ಆಗಬೇಕು ಎಂದರೆ ಅದಕ್ಕೆ ಆಧಾರಸ್ತಂಭ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ ಮಾತ್ರ. ಇವರು ಈಗ ನಿವೃತ್ತಿ ಹೊಸ್ತಿಲಲ್ಲಿ ಇದ್ದಾರೆ. 2025ರ ಐಪಿಎಲ್ ಕೊನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿಯಂತ ಆಟಗಾರ ಅಲ್ಲದಿದ್ದರೂ ಅಂತಹ ಪ್ಲೇಯರ್​ ಹುಡುಕಾಟದಲ್ಲಿ ಚೆನ್ನೈ ಫ್ರಾಂಚೈಸಿ ಇದೆ. ಡೆಲ್ಲಿ ಕ್ಯಾಪ್ಟನ್​ ರಿಷಬ್ ಪಂತ್ ಅವರು ತಂಡಕ್ಕೆ ಬಂದರೆ ಕೊಂಚ ವರ್ಕೌಟ್ ಆಗಬಹುದು ಎನ್ನುವ ಆಲೋಚನೆಯಲ್ಲಿ ಫ್ರಾಂಚೈಸಿ ಇದೆ ಎನ್ನಲಾಗಿದೆ.
ಭವಿಷ್ಯದ ತಂಡ ರೂಪಿಸುವಲ್ಲಿ ರಿಷಬ್​ ಪಂತ್​​ನಂಥ ಪ್ಲೇಯರ್ ಚೆನ್ನೈಗೆ ಕರೆದುಕೊಂಡು ಬಂದರೆ ಉತ್ತಮ ಎಂದು ಫ್ರಾಂಚೈಸಿ ಜೊತೆ ಧೋನಿ ಮಾತನಾಡಿದ್ದಾರೆ ಎನ್ನಲಾಗಿದೆ. ತಾವು ಹೊರ ಹೋಗುತ್ತಿರುವ ಬೆನ್ನಿಗೆ ಮೈದಾನದಲ್ಲಿ ಬ್ಯಾಟ್​ ಮೂಲಕ ಕಿಚ್ಚು ಹೊತ್ತಿಸುವ ಮತ್ತೊಬ್ಬ ಸ್ಟಾರ್​ ಪ್ಲೇಯರ್​​ನ್ನ ತಂಡಕ್ಕೆ ಸೇರಿಸಿ ಹೋಗಬೇಕೆಂದು ಧೋನಿ ನಿರ್ಧಾರಿಸಿದ್ದಾರೆ. ಹೀಗಾಗಿ ಸಿಎಸ್​​ಕೆಗೆ ಪಂತ್ ಅವರನ್ನು ಕರೆದುಕೊಂಡು ಬರಲು ಧೋನಿಯೇ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಐಪಿಎಲ್​ ಮೂಲಗಳು ಹೇಳುತ್ತಿವೆ. ಆದರೆ ಇದು ಎಷ್ಟು ಸತ್ಯ ಎಂಬುದು ಡೆಲ್ಲಿ ಫ್ರಾಂಚೈಸಿಯ ರಿಲೀಸ್ ಲಿಸ್ಟ್ ಅನೌನ್ಸ್​ ಆದ ಮೇಲೆ ಎಲ್ಲ ತಿಳಿದು ಬರಲಿದೆ.
ತಂಡಕ್ಕೆ ರಿಷಬ್ ಪಂತ್ ಸೇರಿಸಿಕೊಳ್ಳಲು ಎಂಎಸ್ ಧೋನಿ ಕಾರ್ಯತಂತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಇದರ ಜೊತೆಗೆ ಫ್ರಾಂಚೈಸಿಗೆ ಭವಿಷ್ಯದಲ್ಲಿ ಧೋನಿಗೆ ಸಂಭಾವ್ಯ ಆಟಗಾರನಾಗಿ ಪಂತ್ ಬದಲಾಗಬಹುದು. ಏಕೆಂದರ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಪಂತ್, ಕ್ರೀಸ್​ನಲ್ಲಿ ಇದ್ದಷ್ಟು ಕಾಲ ಬ್ಯಾಟಿಂಗ್​​ನಲ್ಲಿ ಆರ್ಭಟಿಸುತ್ತಾರೆ. ಅವರದ್ದು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಚೆನ್ನೈಗೆ ಅಮೂಲ್ಯ ಶಕ್ತಿ ಆಗಬಹುದು. ಒಂದು ವೇಳೆ ಸಿಎಸ್‌ಕೆ ಪಂತ್ ಖರೀದಿಗೆ ಮುಂದಾದರೆ 20 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ನೀಡಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ