newsfirstkannada.com

ಕೀಪಿಂಗ್​ನಲ್ಲಿ ಚಮತ್ಕಾರ, ಬ್ಯಾಟಿಂಗ್​ಗೆ ಇಳಿಯದ ಧೋನಿ ಬಗ್ಗೆ ಫ್ಯಾನ್ಸ್​ಗೆ ಬೇಸರ; ಆಸೆ ಈಡೇರಿಸ್ತಾರಾ ಮಾಹಿ?

Share :

Published March 31, 2024 at 10:13am

Update March 31, 2024 at 10:14am

    ಮಹೇಂದ್ರ ಸಿಂಗ್​ ಧೋನಿ ಅಭಿಮಾನಿಗಳಿಗೆ ಕಾಡ್ತಿದೆ ಆ ಒಂದು ನೋವು..!

    ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್​ಗೆ ಇಳಿಯಲಿಲ್ಲ ಮಹೇಂದ್ರ ಧೋನಿ..!

    ಐಪಿಎಲ್​​ನಲ್ಲಿ ಮಾಹಿ ಅರ್ಧಶತಕ ಸಿಡಿಸಿ ಆಯ್ತು 3 ವರ್ಷ

ಎಮ್​.ಎಸ್.ಧೋನಿ. ಕ್ರೇಜ್​ ಕಾ ಬಾಪ್​. ಬಹುದಿನಗಳ ಅಂತರದ ಬಳಿಕ ಧೋನಿಯನ್ನ ಅಂಗಳದಲ್ಲಿ ಕಣ್ತುಂಬಿಕೊಳ್ಳುವ ಮೂಲಕ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ಆದ್ರೆ, ಇದೇ ಫ್ಯಾನ್ಸ್​ಗೆ ಬೇಸರವೂ ಆಗ್ತಿದೆ. ಅರೇ ಧೋನಿ, ಫ್ಯಾನ್ಸ್​ಗೆ ಹೇಗೆ ನಿರಾಸೆ ಮಾಡಿದ್ರು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ. ಅದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

ಸೀಸನ್​​ 17ರ ಇಂಡಿಯನ್​ ಪ್ರೀಮಿಯರ್​​ ಲೀಗ್ ಕಾವೇರುತ್ತಿದೆ. ಹೈವೋಲ್ಟೇಜ್​ ಮ್ಯಾಚ್​ಗಳು, ಹೈಡ್ರಾಮಾಗಳು ಅಭಿಮಾನಿಗಳಿಗೆ ಸಖತ್​ ಕಿಕ್​ ನೀಡ್ತಿವೆ. ತಮ್ಮ ನೆಚ್ಚಿನ ಬ್ಯಾಟರ್​​ಗಳ ಆರ್ಭಟ ಕಣ್ತುಂಬಿಕೊಳ್ಳುತ್ತಿರುವ ಫ್ಯಾನ್ಸ್​ ಫುಲ್ ಖುಷ್ ಆಗಿದ್ದಾರೆ. ಆದ್ರೆ, ಮಿಸ್ಟರ್​ ಕೂಲ್​ ಮಾಹಿ ಅಭಿಮಾನಿಗಳ ಆಸೆ ಮಾತ್ರ, ಈಡೇರುತ್ತಿಲ್ಲ.

ವಿಕೆಟ್​ ಹಿಂದೆ ಧೋನಿ ಚಮತ್ಕಾರ​​​.. ಫ್ಯಾನ್ಸ್ ಖುಷ್​…!

ಈಗಾಗಲೇ ನಾಯಕತ್ವದಿಂದ ಕೆಳಗಿಳಿದು ನಿರಾಸೆ ಮೂಡಿಸಿದ್ರೂ, 42ರ ವಯಸ್ಸಿನಲ್ಲೂ ಧೋನಿ 22 ಯಾರ್ಡ್​ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ವಿಕೆಟ್ ಹಿಂದೆ ಸ್ಟನ್ನಿಂಗ್ ಕ್ಯಾಚಿಂಗ್ ಹಿಡಿದು ಫ್ಯಾನ್ಸ್ ಮನ ಗೆಲ್ತಿದ್ದಾರೆ. ಈಗಾದ್ರೂ ಮಾಹಿ ಅಭಿಮಾನಿಗಳಿಗೆ ಮಾತ್ರ ಒಂದು ನೋವು ಕಾಡುತ್ತಿದೆ.

ಪ್ಲೀಸ್ ಮಾಹಿ​.. ಬ್ಯಾಟಿಂಗ್​ಗೆ ಬೇಗ ಬನ್ನಿ..!

ಧೋನಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸ್ಟೇಡಿಯಂಗೆ ಬರ್ತಿದ್ದಾರೆ. ಮಾಹಿ ಜಪ ಝೇಂಕರಿಸುತ್ತಿದೆ. ಆದ್ರೆ, ಧೋನಿ ಬ್ಯಾಟ್​​ನಿಂದ ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ನೋಡಬೇಕೆಂಬ ಫ್ಯಾನ್ಸ್​ ಮನದಾಸೆ ಮಾತ್ರ ಈಡೇರ್ತಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಧೋನಿ, ಬ್ಯಾಟಿಂಗ್​ನಿಂದ ದೂರ ಉಳಿದಿದ್ದಾರೆ.

ಈ ಹಿಂದೆ 7ನೇ ಕ್ರಮಾಂಕದಲ್ಲಿ ಬ್ಯಾಟ್​​​ ಮಾಡ್ತಿದ್ದ ಮಾಹಿ, ಈ ಸೀಸನ್​ನ​ ಎರಡೂ ಪಂದ್ಯಗಳಲ್ಲಿ ಜಡೇಜಾ ಹಾಗೂ ಸಮೀರ್ ರಿಜ್ವಿಗೆ ಚಾನ್ಸ್​ ನೀಡಿದ್ದಾರೆ. ಇದರಿಂದ​​​ ಧೋನಿಯ ಉಗ್ರವತಾರ ನೊಡಲು ಸಾಧ್ಯವಾಗದ ಫ್ಯಾನ್ಸ್​, ಬ್ಯಾಟಿಂಗ್ ಬಡ್ತಿಗೆ ಮನವಿ ಮಾಡ್ತಿದ್ದಾರೆ.

 ಕಳೆದ ಸೀಸನ್​​ನಲ್ಲೂ ಬ್ಯಾಟಿಂಗ್​ನಿಂದ ದೂರ..!

ಕಳೆದ ವರ್ಷವೂ ಮಾಹಿ ಬ್ಯಾಟಿಂಗ್​ನಿಂದ ಬಹುಪಾಲು ದೂರ ಉಳಿದಿದ್ರು. ಬ್ಯಾಟಿಂಗ್ ನಡೆಸಿದ್ದು ಜಸ್ಟ್​ 12 ಇನ್ನಿಂಗ್ಸ್​ಗಳಲ್ಲಿ ಮಾತ್ರ. ಎದುರಿಸಿದ್ದು ಕೇವಲ​ 57 ಎಸೆತ. 2022ರ ಓಪನಿಂಗ್ ಮ್ಯಾಚ್​ನಲ್ಲಿ ಕೆಕೆಆರ್​ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ, ಈವರೆಗೂ ಧೋನಿ ಬ್ಯಾಟ್​ನಿಂದ ಸಿಂಗಲ್ ಫಿಫ್ಟಿ ಬಂದಿಲ್ಲ.

ಇದೇ ನಿಜವಾದ ಲೀಡರ್ ಕ್ವಾಲಿಟಿ.. ಸಲಾಂ ಮಾಹಿ ಭಾಯ್​.!

ಈ ಹಿಂದೆ 4, 5, 6, 7ರ ಸ್ಲಾಟ್​ನಲ್ಲಿ ಬ್ಯಾಟ್ ಬೀಸ್ತಿದ್ದ ಮಾಹಿ, ಇದೀಗ ತಂಡದಲ್ಲಿನ ಇತರೆ ಆಟಗಾರರಿಗೆ ಮುಂಬಡ್ತಿ ನೀಡ್ತಿದ್ದಾರೆ. ತಾನು ಕೊನೆ ಕ್ಷಣದಲ್ಲಿ ಫೀಲ್ಡ್​ಗೆ ಇಳಿಯುತ್ತಿದ್ದಾರೆ. ಇದು ಸಹಜವಾಗೇ ಧೋನಿ ನಂಬರ್ ಡ್ರಾಪ್​ಗೆ ಕಾರಣವಾಗಿದೆ.

ಬಹುತೇಕ ಇದು ಧೋನಿಯ ಕೊನೆ ಐಪಿಎಲ್ ಅನ್ನೋದು ಕನ್​ಫರ್ಮ್​ ಆಗಿದೆ. ಹೀಗಾಗಿ ಗ್ರೇಟ್​ ಫಿನಿಷರ್​​ ಮಾಹಿಯ ಬ್ಯಾಟಿಂಗ್ ರೌದ್ರವತಾರ ನೋಡ್ಬೇಕು ಫ್ಯಾನ್ಸ್​​ ಮನದಾಸೆಯಾಗಿದೆ. ಈ ಹೆಬ್ಬಯಕೆನಾ ತಲಾ ಈಡೆರಿಸ್ತಾರಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೀಪಿಂಗ್​ನಲ್ಲಿ ಚಮತ್ಕಾರ, ಬ್ಯಾಟಿಂಗ್​ಗೆ ಇಳಿಯದ ಧೋನಿ ಬಗ್ಗೆ ಫ್ಯಾನ್ಸ್​ಗೆ ಬೇಸರ; ಆಸೆ ಈಡೇರಿಸ್ತಾರಾ ಮಾಹಿ?

https://newsfirstlive.com/wp-content/uploads/2024/03/Dhoni-1-2.jpg

Load More