newsfirstkannada.com

ಆರ್​ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್​ನಲ್ಲಿ ಭಾರೀ ಆಕ್ರೋಶ..!

Share :

Published May 20, 2024 at 9:10am

    ಶನಿವಾರ ಆರ್​ಸಿಬಿ, ಸಿಎಸ್​​ಕೆ ನಡುವೆ ಪಂದ್ಯ ನಡೆದಿತ್ತು

    ಸಿಎಸ್​ಕೆ ವಿರುದ್ಧ ರೋಚಕವಾಗಿ ಗೆದ್ದಿರುವ ಆರ್​ಸಿಬಿ

    ಆರ್​ಸಿಬಿ ಪ್ಲೇ-ಆಫ್ ಪ್ರವೇಶ ಮಾಡಿದ್ದು, ಫ್ಯಾನ್ಸ್ ಖುಷ್

ಕಳೆದ ಶನಿವಾರ ರಾತ್ರಿ ಆರ್​ಸಿಬಿ ತಂಡವು ಸಿಎಸ್​ಕೆ ವಿರುದ್ಧ ಅದ್ಭುತ ಗೆಲುವು ದಾಖಲಿಸಿ ಪ್ಲೇ-ಆಫ್ ಪ್ರವೇಶ ಮಾಡಿದೆ. ಆರ್​ಸಿಪಿ ಪ್ಲೇ-ಆಫ್ ಪ್ರವೇಶವನ್ನು ಅಭಿಮಾನಿಗಳು ಸಖತ್​ ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ಆರ್​ಸಿಬಿಯ ಕೆಲವು ಅಭಿಮಾನಿಗಳು.. ಸಿಎಸ್​ಕೆ ಜರ್ಸಿ ಹಾಕಿಕೊಂಡು ಬಂದಿದ್ದ ಅಭಿಮಾನಿಗಳನ್ನು ನಿಂದಿಸಿದ್ದಾರೆ. ಜೊತೆಗೆ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇದನ್ನೂ ಓದಿ:Helicopter crash: ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ.. ಭಾರೀ ದುರಂತದ ಆತಂಕ

ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ. ಟ್ವಿಟರ್​ನಲ್ಲಿ ಕೆಲವು ಸಿಎಸ್​ಕೆ ಅಭಿಮಾನಿಗಳು ನೋವನ್ನು ಹೊರ ಹಾಕಿದ್ದಾರೆ. ಅನ್ನಿ ಸ್ಟೀವ್ ಅನ್ನೋರು ಟ್ವೀಟ್ ಮಾಡಿ.. ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಹೊರಗೆ ಸಿಎಸ್​ಕೆ ಜರ್ಸಿ ಹಾಕಿಕೊಂಡು ಇದ್ದವರಿಗೆ ಸೇಫ್ ಅಲ್ಲ ಅನ್ನೋ ಫೀಲ್ ಇದೆ. ಆರ್​ಸಿಬಿ ಅಭಿಮಾನಿಗಳು.. ಸಿಎಸ್​ಕೆ ಅಭಿಮಾನಿಗಳನ್ನು ಬೆದರಿಸುತ್ತಿದ್ದಾರೆ, ನಿಂದಿಸುತ್ತಿದ್ದಾರೆ. ಅದೆಷ್ಟೋ ಮಂದಿ ಕುಡಿದು ನಿಂದಿಸುತ್ತಿದ್ದಾರೆ. ಜೊತೆಗೆ ತುಂಬಾ ಱಷ್ ಆಗಿ ಡ್ರೈವ್ ಮಾಡ್ತಿದ್ದಾರೆ, ನಮಗೆ ಭಯ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್​ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!

ಮತ್ತೊಬ್ಬರು ಟ್ವೀಟ್ ಮಾಡಿ.. ಗೂಂಡಾಗಳಂತಹ ಜನ. ಸ್ಥಳೀಯ ಆರ್​​ಸಿಬಿ ಬೆಂಬಲಿಗರು ಸಿಎಸ್​ಕೆ ಜರ್ಸಿ ಹಾಕಿಕೊಂಡು ಹೋಗುತ್ತಿರೋರ ಮೈಮೇಲೆ ಬರುತ್ತಿದ್ದಾರೆ. ಜಗಳಕ್ಕೆ ನೋಡುತ್ತಾರೆ. ನನ್ನ ಜೊತೆ ಇಬ್ಬರು ಹೆಣ್ಮಕ್ಕಳಿದ್ದಾರೆ.. ಕ್ಯಾಬ್ ಹತ್ತಿದ್ದೇವೆ. ಐದು ಬಾರಿ ಚಾಂಪಿಯನ್ ಆಗಿದ್ದೇವೆ, ಹೆಮ್ಮೆಯಿಂದ ಯೆಲ್ಲೋ ಜರ್ಸಿ ಧರಿಸುತ್ತೇವೆ ಎಂದಿದ್ದಾರೆ. ಇದೇ ಹಲವು ಟ್ವೀಟ್​ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್​ನಲ್ಲಿ ಭಾರೀ ಆಕ್ರೋಶ..!

https://newsfirstlive.com/wp-content/uploads/2024/05/CSK-5.jpg

Load More