ಬ್ರಾವೋಗೆ ಗೇಟ್​ಪಾಸ್.. ಸಿಎಸ್​ಕೆ ಕ್ಯಾಂಪ್ ಸೇರಿದ ಆರ್​ಸಿಬಿ ಮಾಜಿ ಕೋಚ್..!

author-image
Ganesh
Updated On
2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
Advertisment
  • ಐಪಿಎಲ್​ 2025ಕ್ಕೆ ಸಿಎಸ್​ಕೆಗೆ ಭರ್ಜರಿ ತಯಾರಿ
  • ಕೋಚಿಂಗ್ ಸಿಬ್ಬಂದಿಯಲ್ಲಿ ಭಾರೀ ಬದಲಾವಣೆ
  • ಸಿಎಸ್​ಕೆಗೆ ಮಾಜಿ ಟೀಂ ಇಂಡಿಯಾ ಆಟಗಾರನ ಬಲ

ಸಿಎಸ್​ಕೆ ಭಾರತದ ಮಾಜಿ ಕ್ರಿಕೆಟಿಗ ಎಸ್.ಶ್ರೀರಾಮ್ ಅವರನ್ನು ಹೊಸ ಸಹಾಯಕ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಈ ಬಾರಿಯ ಐಪಿಎಲ್​​ನಲ್ಲಿ ಅವರು ಸಿಎಸ್‌ಕೆ ಪರ ಕೆಲಸ ಮಾಡಲಿದ್ದಾರೆ.

ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಮೈಕ್ ಹಸ್ಸಿ (ಬ್ಯಾಟಿಂಗ್ ಕೋಚ್) ಮತ್ತು ಎರಿಕ್ ಸೈಮನ್ಸ್ (ಬೌಲಿಂಗ್ ಸಲಹೆಗಾರ) ಜೊತೆ ಸೇರಿಕೊಳ್ಳಲಿದ್ದಾರೆ. ಶ್ರೀಧರನ್ ಶ್ರೀರಾಮ್​ಗೆ ಕೋಚಿಂಗ್​ನಲ್ಲಿ ಸಾಕಷ್ಟು ಅನುಭವ ಇದೆ. ಬ್ರಾವೋ ಸಿಎಸ್​ಕೆಗೆ ಕೋಚ್ ಆಗಿದ್ದರು. ಅವರನ್ನು ಸಿಎಸ್​ಕೆ ಬದಲಾಯಿಸಿದೆ.

ಶ್ರೀರಾಮ್ ತರಬೇತಿ ಅನುಭವ

ಚೆನ್ನೈ ಮೂಲದ ಶ್ರೀರಾಂ 2016 ರಿಂದ 2022 ರವರೆಗೆ ಆಸ್ಟ್ರೇಲಿಯಾದ ಸಹಾಯಕ ಕೋಚ್ ಆಗಿದ್ದರು. 2019ರಲ್ಲಿ ಆರ್​ಸಿಬಿ ಅವರನ್ನು ಬ್ಯಾಟಿಂಗ್ ಮತ್ತು ಸ್ಪಿನ್ ಕೋಚ್ ಆಗಿ ನೇಮಿಸಿಕೊಂಡಿತ್ತು. 2022ರಲ್ಲಿ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಶ್ರೀರಾಂ ಬಾಂಗ್ಲಾದೇಶದ ಟಿ20 ಸಲಹೆಗಾರರಾಗಿ ಆಯ್ಕೆ ಆಗಿದ್ದರು. ಐಪಿಎಲ್ 2024ರಲ್ಲಿ ಎಲ್​ಎಸ್​ಜಿ ತಂಡದ ಸಹಾಯಕ ಕೋಚ್ ಆಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಸಹಾಯಕ ಕೋಚ್ ಆಗಿದ್ದರು.

ಇದನ್ನೂ ಓದಿ: Champions Trophy; ಟೀಮ್ ಇಂಡಿಯಾ ಸೆಮಿಫೈನಲ್​ಗೆ.. ಪಾಕಿಸ್ತಾನ, ಬಾಂಗ್ಲಾದೇಶ ಮನೆಗೆ

publive-image

8 ಅಂತಾರಾಷ್ಟ್ರೀಯ ಪಂದ್ಯ

49 ವರ್ಷದ ಶ್ರೀಧರನ್ ಶ್ರೀರಾಂ ಭಾರತ ಪರ 8 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಯಾವುದೇ ಟೆಸ್ಟ್ ಮತ್ತು ಟಿ20 ಆಡಿಲ್ಲ. 8 ಏಕದಿನ ಪಂದ್ಯಗಳಲ್ಲಿ 81 ರನ್ ಗಳಿಸಿ 9 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆಯಲ್ಲಿ 133 ಪಂದ್ಯಗಳಲ್ಲಿ 9539 ರನ್ ಗಳಿಸಿದ್ದಾರೆ ಮತ್ತು 85 ವಿಕೆಟ್‌ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆರ್ ಅಶ್ವಿನ್, ರವೀಂದ್ರ ಜಡೇಜಾ, ಶ್ರೇಯಸ್ ಗೋಪಾಲ್ ಮತ್ತು ನೂರ್ ಅಹ್ಮದ್ ಸ್ಪಿನ್ನರ್‌ಗಳಾಗಿದ್ದಾರೆ. ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ ಮತ್ತು ರಾಚಿನ್ ರವೀಂದ್ರ ಕೂಡ ಇದ್ದಾರೆ. ಇವರು ಕೂಡ ಸ್ಪಿನ್ ಬೌಲಿಂಗ್ ಮಾಡ್ತಾರೆ.

ಇದನ್ನೂ ಓದಿ: ಐಶ್ವರ್ಯ ಸಿಂಧೋಗಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ರಾ ಬಿಗ್​ಬಾಸ್ ಶಿಶಿರ್​; ವಿಡಿಯೋದಲ್ಲಿ ಏನಿದೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment