/newsfirstlive-kannada/media/post_attachments/wp-content/uploads/2024/02/RUTURAJ-GAIKWAD.jpg)
ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟೋಕೆ ಈಗಾಗಲೇ ಸಿದ್ಧತೆ ಆರಂಭಿಸಿರೋ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಕಣ್ಣು ಸಂಜು ಸ್ಯಾಮ್ಸನ್​​ ಮೇಲೆ ಬಿದ್ದಿದೆ. ಸಂಜು ಕರೆತರೋಕೆ ಎಷ್ಟರಮಟ್ಟಿಗೆ ಸಿದ್ಧತೆ ನಡೆದಿದೆ ಅಂದ್ರೆ, ಎಂಥಾ ತ್ಯಾಗಕ್ಕಾದ್ರೂ ಚೆನ್ನೈ ಫ್ರಾಂಚೈಸಿ ರೆಡಿಯಾಗಿದೆ.
ಸಂಜು ಸ್ಯಾಮ್ಸನ್​ಗಾಗಿ ತಂಡದ ಹಾಲಿ ನಾಯಕ ಋತುರಾಜ್​​ ಗಾಯಕ್ವಾಡ್​​ನೇ ಬಿಟ್ಟು ಕೊಡೋಕೆ ಚೆನ್ನೈ ತಂಡ ರೆಡಿಯಾಗಿದೆ. ಋತುರಾಜ್​ ಗಾಯಕ್ವಾಡ್​​ ಚೆನ್ನೈ ಫ್ರಾಂಚೈಸಿ ಇದೀಗ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಿತ್ತು. ಇದೀಗ ನೋಡಿದ್ರೆ ನಾಯಕನನ್ನೇ ತ್ಯಾಗ ಮಾಡಲು ಹೊರಟಿದೆ. ತಂಡದ ಮುಂದಿನ ಭವಿಷ್ಯದ ದೃಷ್ಟಿಯಿಂದ ಋತುರಾಜ್​ ಗಾಯಕ್ವಾಡ್​ನ ಟ್ರೇಡ್​ ಮಾಡಿ ಸಂಜು ಸ್ಯಾಮ್ಸನ್​​ನ ಕರೆ ತರೋಕೆ ದೃಢ ನಿರ್ಧಾರ ಮಾಡಿದೆ. ಇಬ್ಬರ ಪ್ರೈಸ್​​ 18 ಕೋಟಿಯಾಗಿದ್ದು ಹಣಕಾಸಿನ ಲೆಕ್ಕಾಚಾರದಲ್ಲೂ ಪರ್ಫೆಕ್ಟ್​​ ಮ್ಯಾಚ್​ ಆಗುತ್ತೆ.
ಋತುರಾಜ್ ತ್ಯಾಗಕ್ಕೆ ಮುಂದಾಗಿದ್ದೇಕೆ?
- ಋತುರಾಜ್​ ಕ್ಯಾಪ್ಟನ್​​ಶಿಪ್​ ಎಫೆಕ್ಟಿವ್​ ಇಲ್ಲ
- T20 ಕ್ರಿಕೆಟ್​ಗೆ ಬೇಕಾದ ಅಗ್ರೆಶನ್​ ಇಲ್ಲ
- ಅಪ್ರೋಚ್​ ಸಪ್ಪೆ, ಟ್ಯಾಕ್ಟಿಕ್ಸ್​ ಹೇಳಿಕೊಳ್ಳುವಂತಿಲ್ಲ
- ಧೋನಿ ಉತ್ತರಾಧಿಕಾರಿಯಾಗಲು ಸಮರ್ಥ ಅನಿಸಿಲ್ಲ
- ಕನ್ಸಿಸ್ಟೆನ್ಸಿ ಕಾಟ, ಪ್ಲೇಯರ್ಸ್​ ಫ್ರೆಂಡ್ಲಿ ಕ್ಯಾಪ್ಟನ್​ ಅಲ್ಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ