/newsfirstlive-kannada/media/post_attachments/wp-content/uploads/2025/04/SHREYAS_IYER-1.jpg)
ತವರಿನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಕೂಲ್ ಕ್ಯಾಪ್ಟನ್​ ಎಂ.ಎಸ್​ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ನೆಲ ಕಚ್ಚಿದೆ. 4 ವಿಕೆಟ್​ಗಳಿಂದ ಪಂಜಾಬ್​ ಅಮೋಘ ಗೆಲುವು ಪಡೆದಿದೆ.
ಚೆನ್ನೈ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​ ಟಾಸ್ ಗೆದ್ದುಕೊಂಡು ಚೆನ್ನೈ ತಂಡವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಚೆನ್ನೈ ಪರವಾಗಿ ಓಪನರ್ಸ್​ ಆಗಿ ಕ್ರೀಸ್​ಗೆ ಬಂದ ಶೈಕ್ ರಶೀದ್ 11 ಹಾಗೂ ಆಯುಷ್ ಕೇವಲ 7 ರನ್​ಗೆ ವಿಕೆಟ್​ ಒಪ್ಪಿಸಿ ಹೊರ ನಡೆದರು. ಶೈಕ್ ರಶೀದ್ ಬಳಿಕ ಬ್ಯಾಟಿಂಗ್​​ಗೆ ಆಗಮಿಸಿದ ಸ್ಯಾಮ್ ಕರನ್ ಚೆನ್ನೈ ಮಾನ ಕಾಪಾಡಿದರು. ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡವನ್ನು ಸುಧಾರಿಸಿದರು.
ಪಂದ್ಯದಲ್ಲಿ 47 ಎಸೆತ ಎದುರಿಸಿದ ಕರನ್ 9 ಬೌಂಡರಿ, 4 ಸಿಕ್ಸರ್​ಗಳಿಂದ 88 ರನ್​ ಚಚ್ಚಿ ಕೀಪರ್​ ಕ್ಯಾಚ್​ ಆದರು. ಡೆವಾಲ್ಡ್ ಬ್ರೆವಿಸ್​ 32 ರನ್​ ಗಳಿಸಿ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್​ಗೆ ಮುಖ ಮಾಡಿದರು. ಕ್ಯಾಪ್ಟನ್​ ಎಂ.ಎಸ್ ಧೋನಿ 11 ರನ್​ಗೆ ಔಟ್ ಆಗಿ ಚೆನ್ನೈ ಫ್ಯಾನ್ಸ್​ಗೆ ಶಾಕ್ ಕೊಟ್ಟರು. ಇವರ ನಂತರ ಬಂದ ಯಾವ ಬ್ಯಾಟರ್ ಕೂಡ 11 ರನ್​ ಗಡಿ ದಾಟಲಿಲ್ಲ. ಹೀಗಾಗಿ ಚೆನ್ನೈ ಇನ್ನೂ 4 ಬಾಲ್​ ಬಾಕಿ ಇರುವಾಗಲೇ ಆಲೌಟ್​ ಆಗಿ 191 ರನ್​ ಗುರಿ ನೀಡಿತ್ತು.
ಇನ್ನು ಪಂದ್ಯದಲ್ಲಿ ಪಂಜಾಬ್​ ಪರ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ಹ್ಯಾಟ್ರಿಕ್​ ವಿಕೆಟ್​ ಪಡೆದು ಈ ಸೀಸನ್​ನ ಮೊದಲ ಬೌಲರ್ ಎನ್ನುವ ಖ್ಯಾತಿ ಪಡೆದರು. ದೀಪಕ್ ಹೂಡಾ, ನೂರ್ ಅಹ್ಮದ್ ಕ್ಯಾಚ್​ ಔಟ್ ಆದ್ರೆ ಅನ್ಶುಲ್ ಕಾಂಬೋಜ್ ಕ್ಲೀನ್ ಬೋಲ್ಡ್ ಆಗುವ ಮೂಲಕ ಚಹಲ್ ಹ್ಯಾಟ್ರಿಕ್ ವಿಕೆಟ್​ ಸಂಭ್ರಮಿಸಿದರು.
/newsfirstlive-kannada/media/post_attachments/wp-content/uploads/2025/04/Prabhsimran_Singh_1.jpg)
191 ರನ್​ಗಳ ಗುರಿ ಹಿಂದೆ ಬಿದ್ದ ಪಂಜಾಬ್​ ಆರಂಭದಲ್ಲೇ ದೊಡ್ಡ ಓಪನಿಂಗ್ ಪಡೆಯಿತು. ಪ್ರಿಯಾಂಶ್​ ಆರ್ಯ 23ಕ್ಕೆ ಔಟ್ ಆದರು. ಇವರ ಬಳಿಕ ಕ್ರೀಸ್​ಗೆ ಬಂದ ನಾಯಕ ಶ್ರೇಯಸ್​ ಅಯ್ಯರ್​ ಜೊತೆ ಸೇರಿ ಪ್ರಭಸಿಮ್ರನ್ ಸಿಂಗ್ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಬಾರಿಸಿದರು. ಚೆನ್ನೈ ಬೌಲರ್​ಗಳಿಗೆ ಬೆಂಡೆತ್ತಿದ ಪ್ರಭಸಿಮ್ರನ್ ಕೇವಲ 36 ಬಾಲ್​ಗಳನ್ನು ಎದುರಿಸಿ 5 ಬೌಂಡರಿ 3 ಅದ್ಭುತವಾದ ಸಿಕ್ಸರ್​ನಿಂದ 54 ರನ್​ ಗಳಿಸಿ ಬ್ಯಾಟಿಂಗ್ ಮಾಡುವಾಗ ಕ್ಯಾಚ್ ಔಟ್ ಆದರು.
ಇನ್ನೊಂದೆಡೆ ಅಬ್ಬರ ಶುರು ಮಾಡಿದ್ದ ನಾಯಕ ಶ್ರೇಯಸ್​ ಅಯ್ಯರ್, ಚೆನ್ನೈಗೆ ತವರಿನಲ್ಲಿ ನರಕ ದರ್ಶನ ಮಾಡಿಸಿದರು. ಪಂದ್ಯದಲ್ಲಿ ಒಟ್ಟು 41 ಎಸೆತಗಳನ್ನು ಆಡಿದ ಅಯ್ಯರ್ 5 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳಿಂದ 72 ರನ್​ಗಳ ಕಾಣಿಕೆ ನೀಡಿದರು. ಮ್ಯಾಚ್ ಗೆಲ್ಲಿಸುವ ಹಂತದಲ್ಲಿ ಕ್ಲೀನ್ ಬೋಲ್ಡ್​ ಆದರು. ಮಾರ್ಕೊ ಜಾನ್ಸೆನ್ 4 ಹಾಗೂ ಜೋಶ್ ಇಂಗ್ಲಿಸ್ 6 ರನ್​ ಗಳಿಸುವ ಮೂಲಕ ಪಂಜಾಬ್​ ಗೆಲುವು ಪಡೆಯಿತು. ಇನ್ನು ಎರಡು ಎಸೆತ ಬಾಕಿ ಇರುವಾಗಲೇ 6 ವಿಕೆಟ್​ಗೆ 194 ರನ್​ ಗಳಿಸುವ ಮೂಲಕ ಪಂಜಾಬ್ ವಿನ್ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us